Viral Photo: ಆಕ್ಸಿಜನ್ ಸಪೋರ್ಟ್​ನಲ್ಲಿ ಇರುತ್ತಾ ಅಡುಗೆ ಮಾಡಿದ ಮಹಿಳೆ; ಟ್ವಿಟರ್​ನಲ್ಲಿ ಜೋರಾಯ್ತು ಪರ ವಿರೋಧ ಚರ್ಚೆ!

ಸಾಮಾಜಿಕ ಜಾಲತಾಣದಲ್ಲಿ ಹಂಚಲ್ಪಟ್ಟಿರುವ ಈ ಫೊಟೋ ಮಹಿಳೆ, ಆಕೆಯ ಕರ್ತವ್ಯ, ಶ್ರಮ, ತಾಯಿ ಎಂಬ ಭಾವ ಇತ್ಯಾದಿ ವಿಚಾರಗಳನ್ನು ಚರ್ಚಿಸುವಂತೆ ಮಾಡಿದೆ.

Viral Photo: ಆಕ್ಸಿಜನ್ ಸಪೋರ್ಟ್​ನಲ್ಲಿ ಇರುತ್ತಾ ಅಡುಗೆ ಮಾಡಿದ ಮಹಿಳೆ; ಟ್ವಿಟರ್​ನಲ್ಲಿ ಜೋರಾಯ್ತು ಪರ ವಿರೋಧ ಚರ್ಚೆ!
ಆಕ್ಸಿಜನ್ ಸಪೋರ್ಟ್​ನಲ್ಲಿ ಅಡುಗೆ ಮಾಡುತ್ತಿರುವ ಮಹಿಳೆ
Edited By:

Updated on: Aug 21, 2021 | 10:06 AM

ಕೊರೊನಾ ಎರಡನೇ ಅಲೆ ದೇಶಾದ್ಯಂತ ವೇಗವಾಗಿ ಹರಡಿ, ಜನರನ್ನು ಬಹಳಷ್ಡು ಸಂಕಷ್ಟಕ್ಕೆ ಈಡುಮಾಡಿದೆ. ವೈದ್ಯಕೀಯ ಸೌಲಭ್ಯ, ಸಾಮಾಜಿಕ ಸಹಾಯಗಳು ಒಂದೊಮ್ಮೆ ಬಿಕ್ಕಟ್ಟು ಸೃಷ್ಟಿಸಿದಾಗ, ಜನರೇ ಸ್ವತಃ ವಿವಿಧ ರೀತಿಯಲ್ಲಿ ಸಹಾಯಕ್ಕೆ ಬಂದು ನಿಂತದ್ದಿದೆ. ಹಲವು ಸಂಘಟನೆಗಳು ಕೂಡ ಕೊವಿಡ್-19 ವಿರುದ್ಧ ಹೋರಾಡಲು ಸಹಕಾರ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಕಾರ್ಯಗಳು ತುಂಬಾ ಆಗಿವೆ. ಅಪರಿಚಿತರು ಕೂಡ ಮಾನವೀಯ ನೆಲೆಯಲ್ಲಿ ಒಬ್ಬರಿಗೆ ಒಬ್ಬರು ಸಹಾಯ ಮಾಡಿದ್ದನ್ನು ನಾವು ಗಮನಿಸಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೊಂದು ವಿಚಾರ ಮುನ್ನೆಲೆಗೆ ಬಂದು ಚರ್ಚೆಯಾಗುತ್ತಿದೆ.

ವೈದ್ಯಕೀಯ ಆಮ್ಲಜನಕ ಹೊಂದಿರುವ ಮಹಿಳೆಯೊಬ್ಬರು ಅಡುಗೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಕ್ಸಿಜನ್ ಸಪೋರ್ಟ್​ನಲ್ಲಿ ಇರುವಾಗಲೂ ಮಹಿಳೆ ಅಡುಗೆ ಮಾಡುತ್ತಿರುವ ಚಿತ್ರ ಜನರಲ್ಲಿ ವಿವಿಧ ಅಭಿಪ್ರಾಯಗಳನ್ನು ಸೃಷ್ಟಿಮಾಡಿದೆ. ಆಕ್ಸಿಜನ್ ಕಾನ್ಸನ್​ಟ್ರೇಟರ್ ಪಕ್ಕದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಮಹಿಳೆಯ ಫೊಟೋಗೆ ಅಪರಿಮಿತ ಪ್ರೀತಿ ತೋರುವವಳು ಎಂದರೆ ಅದು ಅಮ್ಮ, ಅವಳು ಯಾವತ್ತೂ ಕೆಲಸದಿಂದ ಹಿಂದೆ ಸರಿದವಳಲ್ಲ ಎಂಬ ಕ್ಯಾಪ್ಶನ್ ಬರೆಯಲಾಗಿದೆ.

ಈ ಫೊಟೋದ ಮೂಲ ಯಾವುದು, ಹಿನ್ನೆಲೆ ಏನು ಎಂಬ ಬಗ್ಗೆ ಹೆಚ್ಚಿನ ವಿವರಣೆ ಲಭ್ಯವಾಗಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಹಂಚಲ್ಪಟ್ಟಿರುವ ಈ ಫೊಟೋ ಮಹಿಳೆ, ಆಕೆಯ ಕರ್ತವ್ಯ, ಶ್ರಮ, ತಾಯಿ ಎಂಬ ಭಾವ ಇತ್ಯಾದಿ ವಿಚಾರಗಳನ್ನು ಚರ್ಚಿಸುವಂತೆ ಮಾಡಿದೆ.

ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ನೀಡುವ ಸ್ಟಿರಾಯ್ಡ್​ನಿಂದ ಸಕ್ಕರೆ ಖಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಇಲ್ಲಿದೆ ವಿವರ

ಕೊರೊನಾದಿಂದ ನಿಜವಾಗಿಯೂ ಸಂಭವಿಸಿದ ಸಾವುಗಳೆಷ್ಟು? ಅಧಿಕೃತ ಅಂಕಿಗೂ ಆರೋಗ್ಯ ಸಂಸ್ಥೆ ನೀಡಿದ ಲೆಕ್ಕಾಚಾರಕ್ಕೂ ವ್ಯತ್ಯಾಸ ನೋಡಿ!

Published On - 3:12 pm, Sat, 22 May 21