AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಟಾರ್​ ಸದ್ದಿಗೆ ಯುವಕನಾದ ತಾತ! ವಿಡಿಯೋ ನೋಡಿ ಅಬ್ಬಬ್ಬಾ ಸಂಗೀತದ ಶಕ್ತಿಯೇ ಎಂದು ಹುಬ್ಬೇರಿಸಿದ ಜನ

ಈ ವಿಡಿಯೋದಲ್ಲಿ ಕಪ್ಪು ಬಣ್ಣದ ಉದ್ದ ಕೋಟ್ ತೊಟ್ಟು, ಟೈ ಧರಿಸಿ, ಒಂದು ಟೊಪ್ಪಿಯನ್ನು ಹಾಕಿಕೊಂಡು, ಸ್ಟೈಲಾಗಿ ಕೈಯಲ್ಲಿ ಕೋಲು ಹಿಡಿದಿರುವುದನ್ನು ನೋಡಿದರೆ ಯಾವುದೇ ಚಿತ್ರದ ಚಿತ್ರೀಕರಣವಾಗುತ್ತಿರಬೇಕು ಎಂದೆನ್ನಿಸುತ್ತದೆ. ವಯಸ್ಸು ಸುಮಾರಾದಂತೆ ಕಂಡರೂ ಗಿಟಾರ್ ಸದ್ದಿಗೆ ಆ ವ್ಯಕ್ತಿ ಹೆಜ್ಜೆ ಹಾಕುವುದನ್ನು ನೋಡಿದರೆ ಎಂಥವರೂ ಒಮ್ಮೆ ನಾಚಿ ನೀರಾಗಬೇಕು.

ಗಿಟಾರ್​ ಸದ್ದಿಗೆ ಯುವಕನಾದ ತಾತ! ವಿಡಿಯೋ ನೋಡಿ ಅಬ್ಬಬ್ಬಾ ಸಂಗೀತದ ಶಕ್ತಿಯೇ ಎಂದು ಹುಬ್ಬೇರಿಸಿದ ಜನ
ಗಿಟಾರ್ ಸದ್ದಿಗೆ ಮೈಮರೆತು ಹೆಜ್ಜೆ ಹಾಕಿದ ತಾತ
Skanda
|

Updated on: May 22, 2021 | 4:07 PM

Share

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಡಿಯೋಗಳು ನಮಗೆ ಗೊತ್ತಿಲ್ಲದಂತೆ ಮನಸ್ಸು ಕದ್ದು ಬಿಡುತ್ತವೆ. ಮನಸ್ಸು ಕದಿಯುವುದು ಎಂದಾಕ್ಷಣ ಚಂದದ ಹುಡುಗಿಯೋ, ಸುರಸುಂದರಾಂಗನೋ ಅಲ್ಲಿರಬೇಕು ಎಂದೇನಿಲ್ಲ. ಇಲ್ಲೊಬ್ಬ ಗಿಟಾರ್ ವಾದಕ ರಸ್ತೆ ಬದಿಯಲ್ಲಿ ನಿಂತು ಗಿಟಾರ್ ನುಡಿಸುತ್ತಿರುವಾಗ ಅಲ್ಲೇ ಇದ್ದ ತಾತ ಮನದುಂಬಿ ಹೆಜ್ಜೆ ಹಾಕಿದ್ದಾರೆ. ಗಿಟಾರ್ ನುಡಿಸುತ್ತಿರುವಂತೆಯೇ ವೃದ್ಧಾಪ್ಯದಿಂದ ಯೌವನಕ್ಕೆ ಹೊರಳಿದ ವ್ಯಕ್ತಿ ಥೇಟ್​ ಯಾವುದೋ ಚಿತ್ರದಲ್ಲಿ ಅಭಿನಯಿಸುತ್ತಿರುವಂತೆಯೇ ತನ್ಮಯರಾಗಿ ಹೆಜ್ಜೆ ಹಾಕಿದ್ದಾರೆ. ಯಾವುದೇ ವೃತ್ತಿಪರ ನೃತ್ಯಗಾರರಿಗೆ ಸೆಡ್ಡು ನೀಡುವಂತೆ ಹೆಜ್ಜೆ ಹಾಕಿರುವ ತಾತ ಕೈಯಲ್ಲಿ ಕೋಲು ಹಿಡಿದು ಕುಣಿದಿರುವನ್ನು ನೋಡಿ ನೆಟ್ಟಿಗರು ಅಬ್ಬಬ್ಬಾ ವಯಸ್ಸು ಕೇವಲ ಲೆಕ್ಕ ಹಾಕೋಕೆ ಮಾತ್ರ ಎಂದು ತಲೆದೂಗಿದ್ದಾರೆ.

ಈ ವಿಡಿಯೋದಲ್ಲಿ ಕಪ್ಪು ಬಣ್ಣದ ಉದ್ದ ಕೋಟ್ ತೊಟ್ಟು, ಟೈ ಧರಿಸಿ, ಒಂದು ಟೊಪ್ಪಿಯನ್ನು ಹಾಕಿಕೊಂಡು, ಸ್ಟೈಲಾಗಿ ಕೈಯಲ್ಲಿ ಕೋಲು ಹಿಡಿದಿರುವುದನ್ನು ನೋಡಿದರೆ ಯಾವುದೇ ಚಿತ್ರದ ಚಿತ್ರೀಕರಣವಾಗುತ್ತಿರಬೇಕು ಎಂದೆನ್ನಿಸುತ್ತದೆ. ವಯಸ್ಸು ಸುಮಾರಾದಂತೆ ಕಂಡರೂ ಗಿಟಾರ್ ಸದ್ದಿಗೆ ಆ ವ್ಯಕ್ತಿ ಹೆಜ್ಜೆ ಹಾಕುವುದನ್ನು ನೋಡಿದರೆ ಎಂಥವರೂ ಒಮ್ಮೆ ನಾಚಿ ನೀರಾಗಬೇಕು. ಏಕೆಂದರೆ ಯಾವ ನೃತ್ಯಗಾರನಿಗೂ ಕಮ್ಮಿ ಇಲ್ಲ ಎನ್ನುವಂತೆ ವಿಭಿನ್ನ ರೀತಿಯಲ್ಲಿ ಕುಣಿಯುವ ವೃದ್ಧ ವ್ಯಕ್ತಿ ಎಲ್ಲಿಯೂ ತಾಳ ತಪ್ಪಿದಂತೆ ಕಾಣುವುದಿಲ್ಲ.

ಯುವಕನೂ ಅತ್ಯಂತ ಸುಂದರವಾಗಿ ಗಿಟಾರ್ ನುಡಿಸುತ್ತಿದ್ದು, ತಾತನೂ ಅಷ್ಟೇ ಖುಷಿಯಿಂದ ತನಗೆ ವಯಸ್ಸೇ ಆಗಿಲ್ಲವೆಂಬಂತೆ ಹೆಜ್ಜೆ ಹಾಕುತ್ತಿರುವುದು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿದ ಪ್ರಕಾರ ಈ ವಿಡಿಯೋವನ್ನು ನೆದರ್​ಲ್ಯಾಂಡ್​ನ ಬೀದಿಯೊಂದರಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ ನಂತರ ಇದು ಅತ್ಯಂತ ಕಡಿಮೆ ಸಮಯದಲ್ಲಿ ಸಾವಿರಾರು ವೀಕ್ಷಣೆಯನ್ನು ಗಿಟ್ಟಿಸಿಕೊಳ್ಳುವ ಮೂಲಕ ಜಗತ್ತಿನಾದ್ಯಂತ ವೈರಲ್ ಆಗಿದೆ.

ಈ ವಿಡಿಯೋ ನೋಡಿದವರೆಲ್ಲರೂ ತಾತನ ಜೀವನ ಪ್ರೀತಿಗೆ, ಖುಷಿಗೆ, ಕ್ರೀಯಾಶೀಲತೆಗೆ ಮೆಚ್ಚುಗೆ ಸೂಚಿಸಿದ್ದಾರೆ. ನಡುಬೀದಿಯಲ್ಲಿ ಹೀಗೆ ಮೈ ಹಗುರಾಗಿಸಿಕೊಳ್ಳುವಂತೆ ಕುಣಿಯುವುದು ನಿಜಕ್ಕೂ ಸುಂದರ ಸಂಗತಿ. ಆದರೆ, ಬಹುತೇಕರಿಗೆ ಅದು ಇಷ್ಟವಿದ್ದರೂ ಮನಸ್ಸಿನೊಳಗೇ ಉಳಿದುಬಿಡುತ್ತದೆ ಎಂದಿದ್ದಾರೆ. ವಿಡಿಯೋ ಚಿತ್ರೀಕರಿಸುವಾಗ ಸೈಕಲ್ ಸವಾರನೊಬ್ಬ ಹಾದುಹೋಗಿದ್ದಕ್ಕೆ ಕೆಲವರು ಸಿಟ್ಟಾಗಿದ್ದು ಆತನಿಗೆ ಬೈದಿದ್ದಾರೆ. ಇದೆಲ್ಲದರ ಜತೆಗೆ, ಆ ತಾತನ ಖುಷಿಗೆ ಕಾರಣನಾದ ಗಿಟಾರ್ ವಾದಕನಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Viral Video: ಇದಪ್ಪಾ ಬ್ಯಾಲೆನ್ಸಿಂಗ್​​ ಅಂದ್ರೆ! ಈ ’ಬಾಟಲಿಪುತ್ರಿ‘ಯ ಸಾಹಸವನ್ನು ನೋಡಿದರೆ ಮೈ ಜುಂ ಎನ್ನದೇ ಇರದು 

ವಿಮಾನ ನಿಲ್ದಾಣದೊಳಗೆ ಕಪಿರಾಯನ ಭರ್ಜರಿ ಬೇಟೆ; ವೈರಲ್ ಆಯ್ತು ಹಳೇ ವಿಡಿಯೋ

ವಿಜಯಲಕ್ಷ್ಮಿ ಮಾತನಾಡಿರೋದು ಸುದೀಪ್ ಬಗ್ಗೆ ಅಲ್ಲ: ರಕ್ಷಿತಾ
ವಿಜಯಲಕ್ಷ್ಮಿ ಮಾತನಾಡಿರೋದು ಸುದೀಪ್ ಬಗ್ಗೆ ಅಲ್ಲ: ರಕ್ಷಿತಾ
ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ
ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ
ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?