Viral Video: ನವಿಲಿನಂತೆ ಗರಿಬಿಚ್ಚಿ ಕುಣಿದ ಪಾರಿವಾಳ! ಹೀಗೂ ಇರುತ್ತಾ ಎಂದ ನೆಟ್ಟಿಗರು; ವಿಡಿಯೋ ನೋಡಿ

ಈ ವಿಡಿಯೋ ನೋಡಿ ಗೊಂದಲ ಉಂಟಾಗಿರಬಹುದು. ಅರೆ, ಇದೇನು ಹೀಗೆ ಎಂದು ಅಂದುಕೊಂಡಿರಬಹುದು. ವಿಡಿಯೋ ನೋಡಿದ ನೆಟ್ಟಿಗರು ಕೂಡ ಹಾಗೇ ಪ್ರತಿಕ್ರಿಯಿಸಿದ್ದಾರೆ.

Viral Video: ನವಿಲಿನಂತೆ ಗರಿಬಿಚ್ಚಿ ಕುಣಿದ ಪಾರಿವಾಳ! ಹೀಗೂ ಇರುತ್ತಾ ಎಂದ ನೆಟ್ಟಿಗರು; ವಿಡಿಯೋ ನೋಡಿ
ಪಾರಿವಾಳದ ನೃತ್ಯ
Edited By:

Updated on: Jul 12, 2021 | 9:59 PM

ಸಾಮಾಜಿಕ ಜಾಲತಾಣದಲ್ಲಿ ಯಾವಾಗ, ಏನು ವೈರಲ್ ಆಗುತ್ತದೆ ಎಂದು ಹೇಳುವುದು ಕಷ್ಟ. ತಮಾಷೆಯ, ಆಶ್ಚರ್ಯಕರವಾದ, ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ, ವಿಶೇಷ, ವಿಶಿಷ್ಟ ವಿಡಿಯೋಗಳು, ಮಿಮ್ಸ್, ಫೋಟೊಗಳು ಹರಿದಾಡುತ್ತಿರುತ್ತದೆ. ಕೆಲವು ವಿಚಾರಗಳು ಸರ್ಪ್ರೈಸಿಂಗ್ ಆಗಿರುತ್ತದೆ. ಗೊಂದಲವನ್ನೂ ಉಂಟುಮಾಡುತ್ತದೆ. ಆ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕಮೆಂಟ್, ಶೇರ್, ರಿಯಾಕ್ಷನ್ ನೀಡುತ್ತಾರೆ.

ಇದೀಗ ಅಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನಿಜವಾ? ಸುಳ್ಳಾ? ಎಂದೂ ಚರ್ಚೆಯಾಗುತ್ತಿದೆ. ವಿಡಿಯೋ ನೋಡಿದವರು ವಿವಿಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನವಿಲು ಗರಿಬಿಚ್ಚುವುದನ್ನು ನೀವೆಲ್ಲರೂ ನೋಡಿರುತ್ತೀರಿ. ಆದರೆ, ಪಾರಿವಾಳವೂ ಹಾಗೆ ಮಾಡಿದರೆ ನಂಬುತ್ತೀರಾ? ಅಂತಹ ದೃಶ್ಯವನ್ನು ನೋಡಿದ್ದೀರಾ? ಈ ವಿಡಿಯೋ ನೋಡಿ ನಂಬಲೇಬೇಕು.

ನವಿಲು ನೃತ್ಯ ಮಾಡುವ ವಿಡಿಯೋವನ್ನು ಎಲ್ಲರೂ ನೋಡಿ, ಫೋಟೊ, ವಿಡಿಯೋ ಮಾಡಿಕೊಳ್ಳುತ್ತಾರೆ. ಬಳಿಕ ಹಂಚಿಕೊಳ್ಳುತ್ತಾರೆ. ಅದು ಅಷ್ಟೊಂದು ಸುಂದರವಾಗಿಯೂ ಇರುತ್ತದೆ. ನವಿಲಿನ ನೃತ್ಯವನ್ನು ಇಷ್ಟಪಡದ ಜನರೇ ಇಲ್ಲವೇನೋ! ಅಂತಹುದೇ ವಿಡಿಯೋ ಇಲ್ಲಿ ವೈರಲ್ ಆಗಿದೆ. ಆದರೆ, ಇದು ನವಿಲಿನ ನೃತ್ಯ ಅಲ್ಲ. ಪಾರಿವಾಳದ ನೃತ್ಯ. ವಿಡಿಯೋ ನೋಡಿ.

ಈ ವಿಡಿಯೋ ನೋಡಿ ಗೊಂದಲ ಉಂಟಾಗಿರಬಹುದು. ಅರೆ, ಇದೇನು ಹೀಗೆ ಎಂದು ಅಂದುಕೊಂಡಿರಬಹುದು. ವಿಡಿಯೋ ನೋಡಿದ ನೆಟ್ಟಿಗರು ಕೂಡ ಹಾಗೇ ಪ್ರತಿಕ್ರಿಯಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಇಡಿಯಾಟಿಕ್ ಸ್ಪರ್ಮ್ ಎಂಬ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದಕ್ಕೆ ಕಮೆಂಟ್ ಮಾಡಿರುವ ಒಬ್ಬರು, ನಾನು ಸಣ್ಣ ವಯಸ್ಸಿನಿಂದ ಪಾರಿವಾಳ ಆಗಬೇಕು ಎಂದುಕೊಂಡಿದ್ದೆ, ಆದರೆ ಹೆತ್ತವರ ಒತ್ತಾಯದಿಂದ ನವಿಲು ಆಗಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನವಿಲು ಹೀಗೆ ಮರುಹುಟ್ಟು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಹುಡುಗನ ಕೊರಳಿಗೆ ವರಮಾಲೆ ಎಸೆದ ಹುಡುಗಿ; ಮದುವೆ ಮಂಟಪದಲ್ಲಿ ಹೀಗ್ಯಾಕೆ ಸಿಟ್ಟು?! ವಿಡಿಯೋ ನೋಡಿ

ಬ್ಯೂಟಿಪಾರ್ಲರ್​​ನಲ್ಲಿ ಪದೇಪದೆ ತಲೆ ಅಲ್ಲಾಡಿಸುತ್ತಿದ್ದ ಮಹಿಳೆಗೆ ತಕ್ಕಶಾಸ್ತ್ರಿ ಮಾಡಿದ ಕೇಶ ವಿನ್ಯಾಸಕ​; ವಿಡಿಯೋ ನೋಡಿ