Viral Video: ಮಂಗಳೂರು ಟ್ರಿಪ್​​ನಲ್ಲಿ ಸಿಕ್ಕ ಜರ್ನಿ, ಕಸದ ತೊಟ್ಟಿಯಲ್ಲಿ ಬಿದ್ದಿದ್ದ ನಾಯಿಗೆ ಆಸರೆಯಾದ ಸತ್ಯ ಸೀರಿಯಲ್​​ನ ರಿತು

ಆಹಾರ, ರಕ್ಷಣೆ ಇಲ್ಲದೆ ಅದೆಷ್ಟೋ ಬೀದಿನಾಯಿಗಳು ಪ್ರತಿನಿತ್ಯ ಪರದಾಡುತ್ತಿವೆ. ಅದೇ ರೀತಿ ಸೂಕ್ತ ಆಶ್ರಯವಿಲ್ಲದೆ ಹೈವೇ ರಸ್ತೆಯ ಪಕ್ಕದಲ್ಲಿನ ಕಸದ ತೊಟ್ಟಿಯಲ್ಲಿ ಅನಾಥವಾಗಿ ಬಿದ್ದಿದ್ದ ಪುಟ್ಟ ನಾಯಿಮರಿಯೊಂದನ್ನು ಸತ್ಯ ಧಾರಾವಾಹಿಯ ನಟಿ ರಕ್ಷಿತಾ ಭಾಸ್ಕರ್‌ ಅವರು ರಕ್ಷಿಸಿದ್ದು, ಈ ಮುದ್ದು ನಾಯಿಮರಿಯ ರಕ್ಷಣೆ ಮತ್ತು ಅದರ ದತ್ತು ಪ್ರಕ್ರಿಯೆಯ ಹೃದಯ ಸ್ಪರ್ಶಿ ಕಥೆಯನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Viral Video: ಮಂಗಳೂರು ಟ್ರಿಪ್​​ನಲ್ಲಿ ಸಿಕ್ಕ ಜರ್ನಿ, ಕಸದ ತೊಟ್ಟಿಯಲ್ಲಿ ಬಿದ್ದಿದ್ದ ನಾಯಿಗೆ ಆಸರೆಯಾದ ಸತ್ಯ ಸೀರಿಯಲ್​​ನ ರಿತು
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 08, 2024 | 2:37 PM

ನಾನಾ ತಳಿಯ ನಾಯಿಗಳನ್ನು ಖರೀದಿಸಿ ಸಾಕುವುದಕ್ಕಿಂತ, ಬೀದಿ ನಾಯಿಗಳನ್ನು ದತ್ತು ಪಡೆದು ಅವುಗಳಿಗೆ ಒಂದೊಳ್ಳೆ ನೆಲೆ ಕಲ್ಪಿಸಿ ಎಂಬ ಅಭಿಯಾನಗಳು ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಲೇ ಇರುತ್ತವೆ. ಅಷ್ಟೇ ಅಲ್ಲದೆ ಬೀದಿ ನಾಯಿಗಳ ರಕ್ಷಣೆಗೆ ಹತ್ತು ಹಲವು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿ ಆಹಾರ, ರಕ್ಷಣೆ ಇಲ್ಲದೆ ಪರದಾಡುವ ಬೀದಿ ನಾಯಿಗಳಿಗೆ ಆಶ್ರಯ ಹಾಗೂ ಆರೈಕೆ ನೀಡುವ ಮೂಲಕ ಪ್ರತಿಯೊಬ್ಬರು ಮಾನವೀಯ ಕಾರ್ಯಕ್ಕೆ ಕೈಜೋಡಿಸಬೇಕೆಂದು ಸತ್ಯ ಧಾರಾವಾಹಿಯ ರೀತು ಅಲಿಯಾಸ್‌ ರಕ್ಷಿತಾ ಭಾಸ್ಕರ್‌ ಒಂದೊಳ್ಳೆ ಸಂದೇಶವನ್ನು ನೀಡಿದ್ದಾರೆ. ಈ ಕುರಿತ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್‌ ಅಗುತ್ತಿದೆ.

ಇತ್ತೀಚಿಗೆ ರಕ್ಷಿತಾ ಭಾಸ್ಕರ್‌ ಹಾಗೂ ಅವರ ಸ್ನೇಹಿತರು ಉಡುಪಿ, ಮಂಗಳೂರಿಗೆ ಟ್ರಿಪ್‌ ಹೋದ ಸಂದರ್ಭದಲ್ಲಿ ಹೈವೇ ರಸ್ತೆಯ ಪಕ್ಕದ ಕಸದ ತೊಟ್ಟಿಯಲ್ಲಿ ಬಿದ್ದಿದ್ದಂತಹ ಪುಟಾಣಿ ನಾಯಿ ಮರಿಯೊಂದನ್ನು ರಕ್ಷಿಸುವ ಮೂಲಕ ಮಾನವೀಯ ಕಾರ್ಯವನ್ನು ಮಾಡಿದ್ದಾರೆ. ಈ ಪುಟಾಣಿ ನಾಯಿಮರಿಗೆ “ಜರ್ನಿ” ಎಂಬ ಹೆಸರಿಟ್ಟು ನಂತರ ಅದರ ದತ್ತು ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮನಸ್ವಿನಿ ಎಂಬವವರು ಈ ನಾಯಿ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ( ಇನ್ಸ್ಟಾಗ್ರಾಮ್)

&

;

ಈ ಕುರಿತ ವಿಡಿಯೋವನ್ನು ರಕ್ಷಿತಾ ಭಾಸ್ಕರ್‌ (rakshitha_bhaskar_) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಜರ್ನಿ ಹೆಸರಿನ ಪುಟಾಣಿ ನಾಯಿ ಮರಿಯನ್ನು ರಕ್ಷಿಸಿದ ಹಾಗೂ ಅದರ ದತ್ತು ಪ್ರಕ್ರಿಯೆ ಹೇಗಾಯಿತು ಎಂಬ ಕಥೆಯನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬೀದಿ ನಾಯಿಗಳು, ಬೆಕ್ಕುಗಳನ್ನು ರಕ್ಷಿಸೋಣ, ಅವುಗಳಿಗೆ ಊಟವನ್ನು ನೀಡಿ ಸಾಧ್ಯವಾದರೆ ಒಂದೊಳ್ಳೆ ನೆಲೆಯನ್ನು ಕಲ್ಪಿಸೋಣ ಎಂಬ ಉತ್ತಮ ಸಂದೇಶವನ್ನು ಕೂಡಾ ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ದೇವರಂತೆ ಬಂದು ಆಕೆಯನ್ನು ಕಾಪಾಡಿದ ಬೀದಿ ನಾಯಿ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಹೌದು ದಯವಿಟ್ಟು ಮಾನವೀಯತೆಯ ದೃಷ್ಟಿಯಿಂದ ಪ್ರತಿಯೊಬ್ಬರು ಬೀದಿ ನಾಯಿಗಳಿಗೆ, ಬೆಕ್ಕುಗಳಿಗೆ ಆಶ್ರಯ ನೀಡಿ ಎಂಬ ಕಾಮೆಂಟ್ಸ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ನಟಿಯ ಈ ಒಂದೊಳ್ಳೆ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ