Video: ಗೆಳತಿಯ ಕೈಗೆ ಪಿಸ್ತೂಲ್ ಕೊಟ್ಟು ಬೆಡ್‌ರೂಮ್‌ನಲ್ಲಿ ರೀಲ್ಸ್‌ ಮಾಡಿದ ಪೊಲೀಸ್‌ ಅಧಿಕಾರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 07, 2024 | 1:46 PM

ರೀಲ್ಸ್‌ ಕ್ರೇಜ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವರಂತೂ ಕಂಡಕಂಡಲ್ಲಿ ಮೊಬೈಲ್‌ ಹಿಡಿದು ರೀಲ್ಸ್‌ ಮಾಡುತ್ತಾ ಕುಳಿತು ಬಿಡುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಬ್ಬ ಪೊಲೀಸ್‌ ಪೇದೆ ಅರೆನಗ್ನ ಸ್ಥಿತಿಯಲ್ಲಿದ್ದ ತನ್ನ ಪ್ರೇಯಸಿಯ ಕೈಗೆ ಪಿಸ್ತೂಲ್‌ ಕೊಟ್ಟು ಬೆಡ್‌ರೂಮ್‌ನಲ್ಲಿ ಮೈ ಮರೆತು ರೀಲ್ಸ್‌ ಮಾಡಿದ್ದಾನೆ. ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ಕರ್ತವ್ಯ ಪ್ರಜ್ಞೆಯನ್ನು ಮರೆತು ಹುಚ್ಚಾಟ ಮೆರೆದಿದ್ದಕ್ಕೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Video: ಗೆಳತಿಯ ಕೈಗೆ ಪಿಸ್ತೂಲ್ ಕೊಟ್ಟು ಬೆಡ್‌ರೂಮ್‌ನಲ್ಲಿ ರೀಲ್ಸ್‌ ಮಾಡಿದ ಪೊಲೀಸ್‌ ಅಧಿಕಾರಿ
ವೈರಲ್ ವಿಡಿಯೋ
Follow us on

ಇದು ಡಿಜಿಟಲ್‌ ಜಮಾನ. ಈ ಜಮಾನದಲ್ಲಿ ರೀಲ್ಸ್‌, ವಿಡಿಯೋ ಹುಚ್ಚು ಬಹಳನೇ ಹೆಚ್ಚಾಗಿದ್ದು, ಕೆಲವರಂತೂ ಕಂಡಕಂಡಲ್ಲಿ ಕೈಯಲ್ಲಿ ಹಿಡಿದುಕೊಂಡು ರೀಲ್ಸ್‌ ವಿಡಿಯೋ ಮಾಡಿ, ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಇಂತಹ ಕೆಲವೊಂದು ಅತಿರೇಕವೆನಿಸುವ ರೀಲ್ಸ್‌ ಅಥವಾ ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ವೈರಲ್‌ ಆಗಿದ್ದು, ಪೊಲೀಸ್‌ ಪೇದೆಯೊಬ್ಬ ಕರ್ತವ್ಯ ಪ್ರಜ್ಞೆಯನ್ನು ಮರೆತು, ಅರೆನಗ್ನ ಸ್ಥಿತಿಯಲ್ಲಿದ್ದ ತನ್ನ ಗರ್ಲ್‌ಫ್ರೆಂಡ್‌ ಕೈಗೆ ಪಿಸ್ತೂಲ್‌ ಕೊಟ್ಟು, ಬೆಡ್‌ರೂಮ್‌ನಲ್ಲಿ ಆಕೆಯೊಂದಿಗೆ ಅಶ್ಲೀಲ ರೀಲ್ಸ್‌ ಮಾಡಿದ್ದಾನೆ. ಈ ದೃಶ್ಯವನ್ನು ಕಂಡು ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಜಯ್‌ (ajayku68704718) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಗೆಳತಿಯ ಕೈಗೆ ಪಿಸ್ತೂಲ್‌ ಕೊಟ್ಟು ರೀಲ್ಸ್‌ ವಿಡಿಯೋ ಮಾಡುತ್ತಾ ಕುಳಿತ ಪೊಲೀಸ್‌ ಅಧಿಕಾರಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಸ್ಥಿತಿಯಲ್ಲಿದ್ದ ಗೆಳತಿಯೊಂದಿಗೆ ಪೊಲೀಸ್‌ ಪೇದೆ ರೀಲ್ಸ್‌ ವಿಡಿಯೋ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಪೊಲೀಸ್‌ ಪೇದೆ ಕರ್ತವ್ಯ ಪ್ರಜ್ಞೆಯನ್ನು ಮರೆತು, ತನ್ನ ಗೆಳತಿಯ ಕೈಗೆ ಪಿಸ್ತೂಲ್‌ ಕೊಟ್ಟು ಬಳಿಕ ಈ ಇಬ್ಬರು ಜೊತೆಯಾಗಿ ಕುಳಿತು ಮೇರಾ ಬಲಂ ತಾನೆದಾ ಹಾಡಿಗೆ ರೀಲ್ಸ್‌ ಮಾಡಿದ್ದಾರೆ.

ಇದನ್ನೂ ಓದಿ: ತಂದೆಯ ಎದುರೇ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಗ, ದೇವರಂತೆ ಬಂದು ಕಾಪಾಡಿದ ಪೊಲೀಸ್‌ ಕಾನ್‌ಸ್ಟೇಬಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಆಗಸ್ಟ್‌ 05 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಛಿ… ಛೀ ನಾಚಿಕೆಗೇಡಿನ ಸಂಗತಿʼ ಎಂದು ಕಿಡಿಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ