Video: ಮರದ ಬುಡದಿಂದ ಚಿಮ್ಮಿದ ನೀರು, ದೈವಿಕ ಮರ ಎಂದ ಸ್ಥಳೀಯರು, ಅಸಲಿ ವಿಚಾರ ಇಲ್ಲಿದೆ ನೋಡಿ

ಕೆಲವರು ಎಲ್ಲವನ್ನು ಕಣ್ಣು ಮುಚ್ಚಿ ನಂಬಿಬಿಡುತ್ತಾರೆ. ಅದರ ಹಿಂದಿನ ಸತ್ಯಾಸತ್ಯತೆಯೇನು ಎನ್ನುವ ಬಗ್ಗೆ ಒಂದು ಕ್ಷಣ ಯೋಚಿಸುವುದೇ ಇಲ್ಲ. ಪುಣೆಯಲ್ಲೊಂದು ಕಡೆ ಗುಲ್ ಮೊಹರ್ ಮರದಿಂದ ನೀರು ಚಿಮ್ಮುತ್ತಿದ್ದು, ಇಲ್ಲಿನ ಸ್ಥಳೀಯ ನಿವಾಸಿಗಳು ದೈವಿಕ ಶಕ್ತಿಯುಳ್ಳ ಮರವೆಂದು ಭಾವಿಸಿ, ಪೂಜಿಸುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಇದರ ಅಸಲಿ ವಿಚಾರವು ಬೇರೇನೇ ಇದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

Video: ಮರದ ಬುಡದಿಂದ ಚಿಮ್ಮಿದ ನೀರು, ದೈವಿಕ ಮರ ಎಂದ ಸ್ಥಳೀಯರು, ಅಸಲಿ ವಿಚಾರ ಇಲ್ಲಿದೆ ನೋಡಿ
ನೀರು ಚಿಮ್ಮಿದ ಮರವನ್ನು ಪೂಜಿಸುತ್ತಿರುವ ಸ್ಥಳೀಯರು
Image Credit source: Twitter

Updated on: Jun 11, 2025 | 4:46 PM

ಪುಣೆ, ಜೂನ್ 11 : ಮರದಲ್ಲಿ ಕೆಂಪು ದ್ರವ, ಇಲ್ಲದಿದ್ದರೆ ನೀರು ಬರುತ್ತಿದೆ ಎಂಬ ಸುದ್ದಿಗಳನ್ನು ಸಾಮಾನ್ಯವಾಗಿ ನೀವು ಕೇಳುತ್ತೀರಿ. ಇದೊಂದು ದೈವಿಕ ಶಕ್ತಿಯಿರುವ ಮರವೆಂದು ಭಾವಿಸಿ ಪೂಜಿಸುವುದು ಇದೆ. ಇಂತಹದೊಂದು ಘಟನೆಯೂ ಪುಣೆ (Pune) ಯಲ್ಲಿ ಬೆಳಕಿಗೆ ಬಂದಿದೆ. ಮರದಿಂದ ನೀರು ಚುಮ್ಮುತ್ತಿದ್ದು, ಇದೊಂದು ಪವಾಡ ಹಾಗೂ ದೈವಿಕ ಶಕ್ತಿಯಿರುವ ಮರ ಎಂದು ಭಾವಿಸಿ ಇಲ್ಲಿನ ಸ್ಥಳೀಯ ಜನರು ಗುಲ್ ಮೊಹರ್ ಮರವನ್ನು ಪೂಜಿಸಿದ್ದಾರೆ. ಈ ಘಟನೆಯೂ ಪಿಂಪ್ರಿಯ ಪ್ರೇಮ್ ಲೋಕ್ ಪಾರ್ಕ್ (Pimpri premlok park) ನಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪುರಸಭೆಗೆ ತಿಳಿಸಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾಗ ಈ ಮರದಿಂದ ನೀರು ಚಿಮ್ಮುತ್ತಿರುವುದರ ಹಿಂದಿನ ಕಾರಣ ಬೇರೇನೇ ಇದೆ ಎಂದು ತಿಳಿದು ಬಂದಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?
@thesonawanex ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ನೀರು ಚಿಮ್ಮುತ್ತಿರುವ ಮರವನ್ನು ದೈವಿಕ ಶಕ್ತಿಯುಳ್ಳ ಮರವೆಂದು ಭಾವಿಸಿ ಸ್ಥಳೀಯರು ಮರದ ಕಾಂಡಕ್ಕೆ ಹೂವು, ಅರಶಿಣ ಹಾಗೂ ಕುಂಕುಮ ಅರ್ಪಿಸಿ ಭಕ್ತಿ ಭಾವದಿಂದ ಪೂಜಿಸುತ್ತಿರುವುದನ್ನು ಕಾಣಬಹುದು. ಈ ನೀರನ್ನು ಪವಿತ್ರವೆಂದು ಭಾವಿಸಿ ತಲೆಗೆ ಹಚ್ಚಿಕೊಳ್ಳುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಇದುವೇ ಹೇಳುತ್ತೆ ವ್ಯಕ್ತಿತ್ವ
ವರದಕ್ಷಿಣೆಯಾಗಿ ಸೊಸೆಯ ಕಿಡ್ನಿಯನ್ನೇ ಕೇಳಿದ ಮಾವ!
ಹಸಿವು ನೀಗಿಸಿದ ವ್ಯಕ್ತಿ ನೀನು, ನಿನಗೇಗೆ ಕಣ್ಣೀರ ವಿದಾಯ ಹೇಳಲಿ ನಾನು
ಸಿಂಧೂರ ಹಚ್ಚುವಾಗ ವರನ ಕೈ ನಡುಗಿತ್ತೆಂದು ಮದುವೆ ಬೇಡ ಎಂದ ವಧು

ಇದನ್ನೂ ಓದಿ :Viral : ಕೆಲಸ ಬಿಟ್ಟು ಬ್ಯುಸಿನೆಸ್ ಮಾಡ್ಲಾ : ವ್ಯಕ್ತಿಗೆ ಚಾಟ್‌ಜಿಪಿಟಿ ನೀಡಿದ ಸಲಹೆ ನೋಡಿದ್ರೆ ನೀವು ಶಾಕ್ ಆಗ್ತೀರಾ?

ಪುಣೆಕರ್ ನ್ಯೂಸ್ ವರದಿ ಪ್ರಕಾರ ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ತಿಳಿದು ಬಂದಿದೆ. ಮರದ ಕೆಳಗೆ ಇದ್ದ ಹಳೆಯ ನೀರಿನ ಪೈಪ್‌ಲೈನ್ ಸೋರಿಕೆಯಿಂದಾಗಿ ನೀರು ಚಿಮ್ಮುತ್ತಿದೆ ಎನ್ನಲಾಗಿದೆ. ಡೆಪ್ಯೂಟಿ ಎಂಜಿನಿಯರ್ ಪ್ರವೀಣ್ ಧುಮಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದು ಪವಾಡವಲ್ಲ. ಮರದ ಕೆಳಗೆ ಹಳೆಯ ನೀರಿನ ಪೈಪ್‌ಲೈನ್ ಹಾದು ಹೋಗಿದೆ. ಇದರ ಸೋರಿಕೆಯಿಂದ ಟೊಳ್ಳಾದ ಕಾಂಡದ ಮೂಲಕ ನೀರು ಹೊರಬರುತ್ತಿದೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನಗರ ಪ್ರದೇಶದಲ್ಲಿಯೂ ಹೆಚ್ಚುತ್ತಿರುವ ಮೂಢನಂಬಿಕೆಯ ಬಗ್ಗೆ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿಯೇ ಮೂಢನಂಬಿಕೆ ಹೆಚ್ಚಾಗುತ್ತಿದೆ, ಇದಕ್ಕೆ ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಎಲ್ಲವನ್ನು ಕಣ್ಣು ಮುಚ್ಚಿ ನಂಬಲು ಹೋಗಬಾರದು, ಇದರ ಸತ್ಯಸತ್ಯತೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ. ಇನ್ನೊಬ್ಬರು, ನಮ್ಮ ಜನರಲ್ಲಿ ಯೋಚಿಸುವ ಶಕ್ತಿಯೇ ಇಲ್ಲದಿರುವುದೇ ವಿಪರ್ಯಾಸ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Wed, 11 June 25