Pushpa Movie: ನಾನು ಬರೆಯೋದಿಲ್ಲ!; ವಿದ್ಯಾರ್ಥಿಯ ಉತ್ತರ ಪತ್ರಿಕೆಯಲ್ಲಿ ಪುಷ್ಪ ಸಿನಿಮಾದ ಡೈಲಾಗ್ ನೋಡಿ ಶಿಕ್ಷಕರು ಕಂಗಾಲು

Viral News: 10ನೇ ತರಗತಿಯ ವಿದ್ಯಾರ್ಥಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ 'ಪುಷ್ಪಾ, ಪುಷ್ಪ ರಾಜ್, ಅಪುನ್ ಲಿಖೇಗಾ ನಹೀ' ಎಂದು ಬರೆದಿದ್ದು, ಉತ್ತರ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Pushpa Movie: ನಾನು ಬರೆಯೋದಿಲ್ಲ!; ವಿದ್ಯಾರ್ಥಿಯ ಉತ್ತರ ಪತ್ರಿಕೆಯಲ್ಲಿ ಪುಷ್ಪ ಸಿನಿಮಾದ ಡೈಲಾಗ್ ನೋಡಿ ಶಿಕ್ಷಕರು ಕಂಗಾಲು
ಉತ್ತರ ಪತ್ರಿಕೆಯಲ್ಲಿ ಪುಷ್ಪ ಸಿನಿಮಾದ ಡೈಲಾಗ್ ಬರೆದ ವಿದ್ಯಾರ್ಥಿ
Edited By:

Updated on: Apr 07, 2022 | 1:19 PM

ನವದೆಹಲಿ: ಈ ವರ್ಷ ರಿಲೀಸ್ ಆದ ‘ಪುಷ್ಪ: ದಿ ರೈಸ್’ (Pushpa: The Rise) ತೆರೆಗೆ ಬಂದಾಗಿನಿಂದಲೂ ಆ ಸಿನಿಮಾದ ಹಾಡು, ಡೈಲಾಗ್​, ಡ್ಯಾನ್ಸ್​ ಇಂಟರ್ನೆಟ್​​ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಸಿನಿಮಾದ ಹಾಡು ಮತ್ತು ಸಂಭಾಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿವೆ. ಈಗ, ಕೊಲ್ಕತ್ತಾದ 10ನೇ ತರಗತಿಯ ವಿದ್ಯಾರ್ಥಿಯು ಉತ್ತರ ಪತ್ರಿಕೆಯಲ್ಲಿ ಪುಷ್ಪ ಸಿನಿಮಾದ ಸಂಭಾಷಣೆಯನ್ನು ಬರೆದಿದ್ದು, ಆ ಉತ್ತರ ಪತ್ರಿಕೆಯ ಫೋಟೋದೊಂದಿಗೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಕ್ರೇಜ್ ಮತ್ತೊಂದು ಹಂತಕ್ಕೆ ಹೋಗಿದೆ.

ಶಾಲಾ ವಿದ್ಯಾರ್ಥಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ‘ಪುಷ್ಪಾ, ಪುಷ್ಪ ರಾಜ್, ಅಪುನ್ ಲಿಖೇಗಾ ನಹೀ’ ಎಂದು ಬರೆದಿದ್ದು, ಉತ್ತರ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಸಿನಿಮಾದ ಮೂಲ ಸಂಭಾಷಣೆಯಲ್ಲಿ ‘ಮೇ ಜುಕೇಗಾ ನಹಿ’ ಎಂದು ಇತ್ತು. ಅದನ್ನು ತನ್ನದೇ ಶೈಲಿಯಲ್ಲಿ ಬದಲಾಯಿಸಿಕೊಂಡಿರುವ ಈ ವಿದ್ಯಾರ್ಥಿ ತನಗೆ ಬೇಕಾದಂತೆ ಬದಲಾಯಿಸಿಕೊಂಡು ಡೈಲಾಗ್ ಬರೆದಿದ್ದಾನೆ.

10ನೇ ತರಗತಿ ವಿದ್ಯಾರ್ಥಿಗಳಿಗೆ ಪಶ್ಚಿಮ ಬಂಗಾಳದ ಮಾಧ್ಯಮಿಕ ಪರೀಕ್ಷೆ ಇಂದು ಮಾರ್ಚ್ 7ರಂದು ಪ್ರಾರಂಭವಾಗಿತ್ತು. ಮಾರ್ಚ್​16ರಂದು ಪರೀಕ್ಷೆ ಮುಕ್ತಾಯವಾಯಿತು. ಆ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

‘ಮೇ ಜುಕೇಗಾ ನಹಿ’ ಎಂಬುದು ಪುಷ್ಪಾ: ದಿ ರೈಸ್‌ನ ಅತ್ಯಂತ ಜನಪ್ರಿಯ ಸಂಭಾಷಣೆಗಳಲ್ಲಿ ಒಂದಾಗಿದೆ. ಈ ಕುರಿತು ಹಲವಾರು ಮೀಮ್‌ಗಳನ್ನು ಮಾಡಲಾಗಿದೆ. ಪ್ರೇಕ್ಷಕರು ಮಾತ್ರವಲ್ಲ, ಅನೇಕ ಕಂಪನಿಗಳು ತಮ್ಮ ಪ್ರಚಾರಕ್ಕಾಗಿ ಈ ಡೈಲಾಗ್ ಅನ್ನು ಬಳಸಿಕೊಂಡಿವೆ. ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಕೂಡ ಹರಾಜಿನ ಸಮಯದಲ್ಲಿ ಈ ಮೀಮ್​ ಬಳಸಿಕೊಂಡಿದೆ.

ಚಿತ್ರದ ಎರಡನೇ ಭಾಗವಾದ ಪುಷ್ಪ: ದಿ ರೂಲ್ ಕೂಡ ಪ್ರಗತಿಯಲ್ಲಿದೆ. ಸುದ್ದಿ ಸಂಸ್ಥೆ IANS ವರದಿಗಳ ಪ್ರಕಾರ, ಸಂಗೀತಗಾರ ದೇವಿ ಶ್ರೀ ಪ್ರಸಾದ್ ಅವರು ಪುಷ್ಪ ಸಿನಿಮಾದ 2ನೇ ಭಾಗಕ್ಕೆ ಮೂರು ಹಾಡುಗಳನ್ನು ಸಂಯೋಜಿಸಿದ್ದಾರೆ.

ಪುಷ್ಪಾ: ದಿ ರೈಸ್ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ.ಗಿಂತ ಹೆಚ್ಚು ಸಂಗ್ರಹಿಸಿದೆ. ಇದಲ್ಲದೆ, ಇದು OTT ಪ್ಲಾಟ್‌ಫಾರ್ಮ್‌ನಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಸಹ ಪಡೆದುಕೊಂಡಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ಕೂಡ ನಟಿಸಿದ್ದಾರೆ. ಈ ಚಿತ್ರವು ಲಾರಿ ಡ್ರೈವರ್ ಆಗಿರುವ ಪುಷ್ಪ ರಾಜ್ ಅವರ ಸುತ್ತ ಸುತ್ತುತ್ತದೆ. ರಕ್ತಚಂದನದ ಕಳ್ಳಸಾಗಾಣಿಕೆ ಸುತ್ತ ಈ ಸಿನಿಮಾದ ಕತೆಯನ್ನು ಹೆಣೆಯಲಾಗಿದೆ.

ಇದನ್ನೂ ಓದಿ: ಟಿವಿಯಲ್ಲಿ ‘ಪುಷ್ಪ’ ಸಿನಿಮಾ ಪ್ರಸಾರಕ್ಕೆ ಸಿದ್ಧತೆ: ಕನ್ನಡದಲ್ಲಿ ಯಾವ ಚಾನಲ್​? ಇಲ್ಲಿದೆ ಮಾಹಿತಿ

Virl Video: ಯಕ್ಷಗಾನದಲ್ಲೂ ಪುಷ್ಪ ಸಿನಿಮಾ ಕ್ರೇಜ್; ರಂಗಸ್ಥಳದಲ್ಲಿ ಶ್ರೀವಲ್ಲಿ ಹಾಡಿಗೆ ಸ್ಟೆಪ್ ಹಾಕಿದ ಕಲಾವಿದ