Viral Video : ಒಂದು ರ್‍ಯಾಕೂನ್ (Raccoon) ಡೋನಟ್ ಮಾರುವ ಅಂಗಡಿಯೊಂದರ ಕಿಟಕಿಯ ಹೊರಗೆ ಕಾದು ನಿಂತಿದೆ. ನಂತರ ರಸ್ತೆ ದಾಟಿ ಅಲ್ಲಿಯ ಸಿಬ್ಬಂದಿಯು ಕೈಗೊಡ್ಡಿದ ಡೋನಟ್ಅನ್ನು ನಿರಾತಂಕವಾಗಿ ಇಸಿದುಕೊಂಡು ಕಚ್ಚಿ ತಿನ್ನುತ್ತಾ ಮರಳುತ್ತದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರು, ‘ಡಂಕಿನ್ ಡೋನಟ್ಸ್‌ನ ಹೊಸ ಜಾಹೀರಾತು ತಯಾರಾಗುತ್ತಿದ್ದಂತಿದೆ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಅದು ಹಣ ಕೊಡಲಿಲ್ಲ, ಉದ್ರಿ ಗಿರಾಕಿ ಇರಬೇಕು’ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
Raccoon wants a donut too.. ? pic.twitter.com/NJWvkButQM
ಇದನ್ನೂ ಓದಿ— Buitengebieden (@buitengebieden) May 11, 2023
ರ್ಯಾಕೂನ್ ಉತ್ತರ ಅಮೇರಿಕಾದ ಮಧ್ಯಮ ಗಾತ್ರದ ಸ್ತನಿಗಳಲ್ಲಿ ಒಂದು. ಇವು ನಿಶಾಚರಿ ಮಾಂಸಾಹಾರಿ ಪ್ರಾಣಿ. ಇವುಗಳ ಮೂಲ ಎಲೆಯುದುರುವ ಮರಗಳಿರುವ ಕಾಡು (deciduous forests). ಆದರೆ ವಿವಿಧ ಬಗೆಯ ವಾತಾವರಣಗಳಿಗೆ ಹೊಂದಿಕೊಳ್ಳಬಲ್ಲ ರ್‍ಯಾಕೂನ್‌ಗಳು ಗುಡ್ಡಗಾಡು, ಬಯಲು, ಅಷ್ಟೇ ಏಕೆ ನಗರ ಪ್ರದೇಶಗಳಲ್ಲೂ ಕಂಡುಬರುತ್ತವೆ.
ಇದನ್ನೂ ಓದಿ : AGI;ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು
ಅಮೆರಿಕನ್ ಸಬ್‌ಅರ್ಬ್‌ಗಳಲ್ಲಿ ವಾಸವಿರುವ ಬಹುತೇಕ ಜನರು ಇವನ್ನು ಉಪದ್ರವಕಾರಿ ಜೀವಿಗಳು ಎಂದು ಗಣಿಸಿ ಅವನ್ನು ಓಡಿಸುವುದಷ್ಟೇ ಅಲ್ಲ ಕೊಲ್ಲಲೂ ಮುಂದಾಗುತ್ತಾರೆ. ಆದರೆ ದಪ್ಪ ಮೃದು ತುಪ್ಪಳ ಚೂಪು ಮುಖ ಮುಖದ ಮೇಲಿನ ಪಟ್ಟೆಗಳು, ಇಂಥ ಸೊಗಸಾದ ಲಕ್ಷಣಗಳುಳ್ಲ ರ್‍ಯಾಕೂನ್‌ಗಳು ಬಹಳ ಮಂದಿಗೆ ಮುದ್ದಾಗಿ ಡ ಕಾಣುತ್ತವೆ.
ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಸಲಗದ ತಂಟೆಗೆ ಹೋಗಿಯೂ ಪಾರಾದವನ ಕತೆ
ಅದೇನೇ ಇರಲಿ, ಡೋನಟ್ ಭಿಕ್ಷೆ ಪಡೆದುಕೊಂಡು ಓಡಿ ಹೋದ ಈ ಪ್ರಾಣಿಯ ವರ್ತನೆಯನ್ನು ನೋಡಿದ ಎಲ್ಲರೂ ಬಾಯಿಯ ಮೇಲೆ ಕೈಇಟ್ಟುಕೊಂಡಿರುವುದಂತೂ ಸತ್ಯ. ಸರಿಯಾದ ಸಮಯಕ್ಕೆ ಕ್ಯಾಮೆರಾದಿಂದ ಶೂಟ್ ಮಾಡಿ ಇಂಥ ಹೃದಯಸ್ಪರ್ಶೀ ದೃಶ್ಯವನ್ನು ಹಂಚಿಕೊಂಡವರಿಗೆ ನಾವು ಥ್ಯಾಂಕ್ಸ್ ಹೇಳಲೇಬೇಕು. ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:24 pm, Sat, 13 May 23