ಎಸಿಬಿ ಮನೆಗೆ ಪ್ರವೇಶಿಸುತ್ತಿದ್ದಂತೆ ಲಂಚದ ಹಣವನ್ನು ಬೆಂಕಿ ಹಾಕಿ ಸುಟ್ಟ ತಹಶೀಲ್ದಾರ್; ವಿಡಿಯೋ ವೈರಲ್
ಭ್ರಷ್ಟಾಚಾರ ನಡೆಸಿದ ಅಧಿಕಾರಿಗಳ ಪಾಡು ಒಂದೆರಡಲ್ಲ. ಒಂದೆಡೆ ಭ್ರಷ್ಟಾಚಾರದಿಂದ ಸಂಗ್ರಹಿಸಿದ ಹಣ ಯಾವಾಗಲೂ ಭಯ ಹುಟ್ಟಿಸುತ್ತಲೇ ಇರುತ್ತದೆ. ಇಲ್ಲೊಂದೆಡೆ ತಹಶೀಲ್ದಾರರು ತಮ್ಮ ಮನೆಯ ಅಡುಗೆ ಮನೆಯಲ್ಲಿ ಹಣವನ್ನು ಸುಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಜೈಪುರ: ಭ್ರಷ್ಟಾಚಾರ ನಡೆಸಿದ ಅಧಿಕಾರಿಗಳ ಪಾಡು ಒಂದೆರಡಲ್ಲ. ಒಂದೆಡೆ ಭ್ರಷ್ಟಾಚಾರದಿಂದ ಸಂಗ್ರಹಿಸಿದ ಹಣ ಯಾವಾಗಲೂ ಭಯ ಹುಟ್ಟಿಸುತ್ತಲೇ ಇರುತ್ತದೆ. ಇನ್ನೊಂದೆಡೆ ಯಾವಾಗ ತಮ್ಮ ಭ್ರಷ್ಟಾಚಾರ ಬಯಲಿಗೆ ಬರುತ್ತದೆಯೋ ಎಂಬ ಭಯವೂ ಅವರನ್ನು ಕಾಡುತ್ತದೆ. ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದಾಗ ನಡೆಯುವ ಪರಿಸ್ಥಿತಿಗಳು ನಿಜಕ್ಕೂ ಕುತೂಹಲಕಾರಿ. ಇಲ್ಲಿ ಅಂತಹುದೇ ಒಂದು ವಿಚಿತ್ರ ಘಟನೆ ನಡೆದಿದೆ. ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತಹಶೀಲ್ದಾರ ಕಲ್ಪೇಶ್ ಕುಮಾರ್ ಜೈನ್ ಅವರ ಮನೆಗೆ ಭೇಟಿ ನೀಡುತ್ತಿದ್ದಂತೆ ಭಯಭೀತರಾದ ತಹಶೀಲ್ದಾರ ಕಲ್ಪೇಶ್ ಕುಮಾರ್ ಜೈನ್ ಮನೆಯಲ್ಲಿದ್ದ 15-20 ಲಕ್ಷದಷ್ಟು ಹಣವನ್ನು ಸುಟ್ಟು ಹಾಕಿದ್ದಾರೆ. ಈ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಕಳೆದ ಬುಧವಾರ ನಡೆದಿದೆ.
ತಹಶೀಲ್ದಾರರು ತಮ್ಮ ಮನೆಯ ಅಡುಗೆ ಮನೆಯಲ್ಲಿ ಹಣವನ್ನು ಸುಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅಡುಗೆ ಮನೆಗೆ ಸೇರಿಕೊಂಡಿದ್ದ ತಹಶೀಲ್ದಾರರನ್ನು ಎಸಿಬಿ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಜೊತೆಗೆ ಕಿಟಕಿ ಬಾಗಿಲು ಒಡೆಯಲು ಪ್ರಯತ್ನಿಸುತ್ತಿದ್ದಾಗ ಮನೆಯಲ್ಲಿದ್ದ ಮಕ್ಕಳು ಭಯಭೀತರಾಗಿ ಅಳಲು ಪ್ರಾರಂಭಿಸಿದ್ದಾರೆ.
ಎಸಿಬಿ ತಂಡವು ಇನ್ನೇನು ಮನೆ ಪ್ರವೇಶಿಸುತ್ತಿದ್ದಂತೆ ಅವರನ್ನು ತಡೆಯಲು ಮನೆಯ ಎಲ್ಲಾ ಬಾಗಿಲುಗಳನ್ನು ಮುಚ್ಚಿ ಲಂಚ ಪಡೆದ ಹಣವನ್ನು ಸುಡಲು ಪ್ರಯತ್ನಿಸಿದರು ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಅಧಿಕಾರಿಗಳು ಮನೆ ಒಳ ಪ್ರವೇಶಿಸುವುದರೊಳಗೆ 1.5 ಲಕ್ಷ ರೂಪಾಯಿಯನ್ನು ಬೆಂಕಿಯಲ್ಲಿ ಸುಟ್ಟು ಹಾಕಿದ್ದಾರೆ ಎಂದು ಡಿಜಿ (ಎಸಿಬಿ) ಬಿಎಲ್ ಸೋನಿ ತಿಳಿಸಿದ್ದಾರೆ.
ಇದನ್ನೂ ಓದಿ: Krunal Pandya: ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಕೃನಾಲ್ ಪಾಂಡ್ಯ ಭಾವುಕರಾದ ವಿಡಿಯೋ ವೈರಲ್
ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಜೊತೆ ಸುತ್ತಾಡುತ್ತಿರುವ ಹುಡುಗ ಯಾರು? ಫೋಟೋ ವೈರಲ್
Published On - 4:44 pm, Fri, 26 March 21