ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದ್ರೂ ಕೂಡಾ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಳಗಳ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪ್ರತಿನಿತ್ಯ ಹೆಣ್ಣು ಮಕ್ಕಳು ಒಂದಲ್ಲಾ ಒಂದು ರೀತಿಯ ಕಿರುಕುಳಗಳನ್ನು ಎದುರಿಸುತ್ತಲೇ ಇರುತ್ತಾರೆ. ಹೆಚ್ಚಿನವರಿಗೆ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಅಥವಾ ಈ ಬಗ್ಗೆ ಇತರರ ಬಳಿ ಹೇಳಿಕೊಳ್ಳುವ ಧೈರ್ಯ ಇರೋದಿಲ್ಲ. ಆದ್ರೆ ಇಲ್ಲೊಂದಷ್ಟು ಸ್ಕೂಲ್ ಹುಡುಗೀರು ಜೊತೆ ಸೇರಿ, ಐ ಲವ್ ಯು ಹೇಳಿದ್ರೆ ಮಾತ್ರ ಮೊಬೈಲ್ ರೀಚಾರ್ಜ್ ಮಾಡುವುದಾಗಿ ಹೇಳಿದ ಅಂಗಡಿ ಮಾಲೀಕನನ್ನು ನಡು ರಸ್ತೆಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲೇ ಆತನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಹುಡುಗೀರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಈ ಘಟನೆ ರಾಜಸ್ಥಾನದ ದಿದ್ವಾನಾ ಎಂಬಲ್ಲಿ ನಡೆದಿದ್ದು, ಒಂದಷ್ಟು ಸ್ಕೂಲ್ ಹುಡ್ಗೀರು ಐ ಲವ್ ಯು ಹೇಳುವಂತೆ ಪೀಡಿಸಿದಾತನಿಗೆ ನಡು ರಸ್ತೆಯಲ್ಲಿಯೇ ಚಳಿ ಬಿಡಿಸಿದ್ದಾರೆ. ಸ್ಕೂಲ್ ಹುಡುಗೀರು ಮೊಬೈಲ್ ರೀಚಾರ್ಜ್ ಮಾಡಿಸಲೆಂದು ಇಲ್ಲಿನ ಮೊಬೈಲ್ ಶಾಪ್‌ಗೆ ಹೋಗಿದ್ದಾರೆ. ಆದ್ರೆ ಅಂಗಡಿ ಮಾಲೀಕ ಐ ಲವ್ ಯು ಹೇಳಿದ್ರೆ ಮಾತ್ರ ಮೊಬೈಲ್ ರೀಚಾರ್ಜ್ ಮಾಡಿಕೊಡುವುದಾಗಿ ಅವರನ್ನು ಪೀಡಿಸಿದ್ದಾನೆ. ಇದರಿಂದ ಕೋಪಗೊಂಡ ಹುಡುಗೀರು, ಆತನನನ್ನು ದರದರನೇ ನಡು ರಸ್ತೆಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲಿಯೇ ಆತನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
A shopkeeper was beaten up because of I Love You, he Said “Pehle I love you bolo Phir Recharge karunga” to girls then see how the girls of Kuchaman showed bravery and Beat him up in Didwana Rajasthan 🫡
pic.twitter.com/VDCjcr4MLH— Ghar Ke Kalesh (@gharkekalesh) September 1, 2024
ಈ ಕುರಿತ ಪೋಸ್ಟ್ ಒಂದನ್ನು Ghar Ke Kalesh ಹೆಸರಿನ ಎಕ್ಸ್ ಖಾತೆ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ನಡು ರಸ್ತೆಯಲ್ಲಿಯೇ ಸ್ಕೂಲ್ ಹುಡುಗೀರು ಅನುಚಿತವಾಗಿ ವರ್ತಿಸಿದಾತನ ಚಳಿ ಬಿಡಿಸುತ್ತಿರುವ ದೃಶ್ಯವನ್ನು ಕಾಣಬಹುದು. ಮೊಬೈಲ್ ಅಂಗಡಿ ಮಾಲೀಕನನ್ನು ನಡು ರಸ್ತೆಗೆ ಎಳೆ ತಂದು, ಐ ಲವ್ ಯು ಹೇಳುವಂತೆ ಹುಡುಗಿಯರ ಜೊತೆ ಅನುಚಿತವಾಗಿ ವರ್ತಿಸುತ್ತೀಯಾ ಎಂದು ಸ್ಕೂಲ್ ಹುಡುಗೀರು ಸಾರ್ವಜನಿಕರ ಎದುರಲ್ಲೇ ಆತನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಇದನ್ನೂ ಓದಿ: ಸ್ವಂತ ಸ್ಟಾರ್ಟ್‌ಅಪ್ ನಡೆಸಲು ಹಣ ಸಿಕ್ಕಿತೆಂದು ಹೇಳದೆ ಕೇಳದೆ ಕೆಲಸ ಬಿಟ್ಟ ಬೆಂಗಳೂರಿನ ಇಂಟರ್ನ್
ಸೆಪ್ಟೆಂಬರ್ 1 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪ್ರತಿಯೊಬ್ಬ ಹೆಣ್ಣೂ ಇದೇ ರೀತಿ ಧೈರ್ಯಶಾಲಿಯಾಗಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಹುಡುಗಿಯರ ಧೈರ್ಯಕ್ಕೆ ಮೆಚ್ಚಲೇಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ