Viral Video: ಏನು ಹುಡುಕಿಕೊಂಡು ಇಲ್ಲಿಗೆ ಬಂದಿತೋ ಈ ಘೇಂಡಾಮೃಗ

Rhino Viral Video : ಇದ್ದಕ್ಕಿದ್ದ ಹಾಗೆ ನಿಮ್ಮ ಬೀದಿಯಲ್ಲಿ ಘೇಂಡಾಮೃಗವೊಂದು ಬಂದರೆ ಹೇಗಿರುತ್ತದೆ? ಕಲ್ಪಿಸಿಕೊಳ್ಳಬೇಡಿ, ವಿಡಿಯೋ ನೋಡಿಬಿಡಿ.

Viral Video: ಏನು ಹುಡುಕಿಕೊಂಡು ಇಲ್ಲಿಗೆ ಬಂದಿತೋ ಈ ಘೇಂಡಾಮೃಗ
ಊರೊಳಗೆ ಬಂದ ಘೇಂಡಾಮೃಗ
Edited By:

Updated on: Aug 08, 2022 | 10:16 AM

Viral Video of Rhino: ಕಾಡು ಬಿಟ್ಟು ನಾಡಿಗೆ ಓಡಿಬಂದ ಘೇಂಡಾಮೃಗದ ವಿಡಿಯೋ ಈಗ ವೈರಲ್ ಆಗಿದೆ. ಈಗಾಗಲೇ ಸಾಕಷ್ಟು ಕಾಡುಪ್ರಾಣಿಗಳ ಅಪರೂಪದ ವಿಡಿಯೋ ಟ್ವಿಟರ್​ಗೆ ಅಪ್​ಲೋಡ್ ಮಾಡಿದ ಐಎಫ್​ಎಸ್ ಅಧಿಕಾರಿ ಸುಸಾಂತ ನಂದಾ ಅವರೇ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕೆಲವೊಮ್ಮೆ ಕಾಡುಪ್ರಾಣಿಗಳು ವಿಹರಿಸುತ್ತ ದಾರಿತಪ್ಪಿಬಿಡುತ್ತವೆ. ತಾವಿದ್ದ ಪ್ರದೇಶಗಳಿಗೆ ಮರಳುವಾಗ ಹೀಗೆ ದಿಕ್ಕುತಪ್ಪಿ ನಾಡಿನೊಳಗೆ ಪ್ರವೇಶಿಸುತ್ತವೆ. ಅದಕ್ಕಾಗಿ ಗೊಂದಲಕ್ಕೊಳಗಾಗಬೇಕಿಲ್ಲ. ಅವುಗಳ ಪಾಡಿಗೆ ಅವುಗಳನ್ನು ಬಿಟ್ಟರೆ ದಾರಿ ಹುಡುಕಿಕೊಂಡು ಹೋಗುತ್ತಿರುತ್ತವೆ ಅಥವಾ ಅರಣ್ಯ ಇಲಾಖೆಯವರೇ ಬಂಧಿಸಿ ಮರಳಿ ಕಾಡಿಗೆ ಬಿಡುತ್ತಾರೆ.

ಈ ವಿಡಿಯೋದಲ್ಲಿ ಖಾಲೀ ರಸ್ತೆಯಲ್ಲಿ ಘೇಂಡಾ ಓಡಿಬರುತ್ತಿದ್ದುದನ್ನು ನೋಡಿ ಕಪ್ಪುನಾಯಿಯೊಂದು ಹೆದರಿ ಪಕ್ಕಕ್ಕೆ ಸರಿಯುತ್ತದೆ. ಅದು ಓಡುವ ವೇಗಕ್ಕೆ ಆಟೋನಲ್ಲಿದ್ದ ಡ್ರೈವರ್ ಗಾಬರಿಯಿಂದ ಆಚೆ ಬಂದು ತನ್ನನ್ನು ತಾ ರಕ್ಷಿಸಿಕೊಳ್ಳುವತ್ತ ಧಾವಿಸುತ್ತಾನೆ. ಯಾರಿಗೂ ಇದು ಭಯತರಿಸುವಂಥ ದೃಶ್ಯವೇ.

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ವಿಡಿಯೋ 74, 000 ಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ಹಲವಾರು ಮಂದಿ ಘೇಂಡಾಮೃಗ ಸುರಕ್ಷಿತವಾಗಿ ಕಾಡು ತಲುಪಿದರೆ ಸಾಕು ಎಂದು ನೆಟ್ಟಿಗರು ಹಾರೈಸಿದ್ದಾರೆ. ಈ ಘಟನೆಯ ನಂತರ ಸ್ಥಳೀಯವಾಗಿ ಯಾವುದೇ ಅಪಾಯ ಸಂಭವಿಸಿಲ್ಲ ತಾನೆ? ಎಂದೂ ಪ್ರತಿಕ್ರಿಯೆಗಳ ಮೂಲಕ ಕೆಲವರು ವಿಚಾರಿಸಿಕೊಂಡಿದ್ದಾರೆ.

ಇಂಥ ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ