ಋಷಿಕೇಶ, ಜೂನ್ 09: ಕೆಲವರಿಗೆ ಸಾಹಸ (adventure) ಗಳನ್ನು ಮಾಡುವುದೆಂದರೆ ಇಷ್ಟ. ಹೀಗಾಗಿ ಕೆಲವರು ಭಯಾನಕ ಸ್ಥಳಗಳಲು ಭೇಟಿ ನೀಡುವುದು ಸೇರಿದಂತೆ ಇನ್ನಿತ್ತರ ಸಾಹಸಮಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲಿ ಒಮ್ಮೆಯಾದ್ರೂ ಜೀವನದಲ್ಲಿ ಬಂಗೀ ಜಂಪಿಂಗ್ ಮಾಡಬೇಕೆನ್ನುವುದು ಎಷ್ಟೋ ಜನರ ಕನಸು ಆಗಿರುತ್ತದೆ. ಆದರೆ ಈ ರೀತಿ ಸಾಹಸಮಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಗಟ್ಟಿ ಗುಂಡಿಗೂ ಇರಲೇಬೇಕು. ಕೆಲವರು ಬಂಗೀ ಜಂಪಿಂಗ್ ಮಾಡಲು ಹೋಗಿ ಕೊನೆ ಕ್ಷಣದಲ್ಲಿ ಹಿಂದೆ ಸರಿಯುವುದನ್ನು ನೀವು ನೋಡಿರಬಹುದು. ಇದೀಗ ಋಷಿಕೇಶ (Rishikesh) ದಲ್ಲಿ ಹಿಮಾಲಯನ್ ಬಂಗೀ ಜಪಿಂಗ್ (Bungee Jumping) ವೇಳೆಯಲ್ಲಿ ಯುವತಿಯೊಬ್ಬಳು ಭಯಗೊಂಡಿದ್ದು, ಸಿಬ್ಬಂದಿಯೊಬ್ಬರು ಧೈರ್ಯ ತುಂಬುವ ಮೂಲಕ ಮಾರ್ಗದರ್ಶನ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
adventurewithnaveen ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ನಿಮ್ಮ ಜೀವನದ ಅದ್ಭುತ ಕ್ಷಣವಿದು, ಮುಂದೆ ಹೋಗೋಣವೇ ಎನ್ನುತ್ತಿದ್ದಂತೆ ಒಂದು ನಿಮಿಷ ಎನ್ನುತ್ತಾ ಯುವತಿಯೂ ಬಂಗೀ ಜಂಪಿಂಗ್ ವೇಳೆ ಹೆದರಿಕೊಂಡು ಹಿಂದೆ ಸರಿಯುತ್ತಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಸಿಬ್ಬಂದಿಯೊಬ್ಬರು ಯುವತಿಗೆ ಧೈರ್ಯ ತುಂಬಿದ್ದಾರೆ. ಸಿಬ್ಬಂದಿಯೂ ಯುವತಿಗೆ ಕೆಳಗೆ ನೋಡಬೇಡಿ, ಮುಂದೆ ನಡೆಯಿರಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಉಸಿರಾಡಲು ಕಷ್ಟವಾಗುತ್ತಿದೆ ಎನ್ನುತ್ತಿದ್ದಂತೆ ಸಿಬ್ಬಂದಿಯೂ ಮೆದುಳಿನ ಮಾತು ಕೇಳಬೇಡಿ, ಹೃದಯದ ಮಾತು ಕೇಳಿ ಎನ್ನುವ ಮೂಲಕ ಆಕೆಯ ಭಯವನ್ನು ದೂರ ಮಾಡಿ, ಬಂಗೀ ಜಂಪಿಂಗ್ ಮಾಡಲು ಪ್ರೋತ್ಸಾಹಿಸಿದ್ದಾರೆ.
ಈ ವಿಡಿಯೋವೊಂದು 2.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರು, ನೀವು ನಿಜಕ್ಕೂ ಈ ಕ್ಷಣದಲ್ಲಿ ಥೆರಪಿಸ್ಟ್ ನಂತೆ ನನಗೆ ಕಂಡಿದ್ದೀರಾ ಎಂದಿದ್ದಾರೆ. ಇನ್ನೊಬ್ಬರು, ಈ ರೀತಿ ಅನುಭವ ಜೀವನದಲ್ಲಿ ಪಡೆಯಲೇಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಒಮ್ಮೆ ಕಣ್ಣು ಮುಚ್ಚಿ,, ಅವರು ಹೇಳುವುದನ್ನು ಸರಿಯಾಗಿ ಕೇಳಿ, ಭಯವೇ ಆಗುವುದಿಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ