Viral: ಮಕ್ಳು ಕಷ್ಟ ಪಟ್ಟು ಮಾಡೋ ಹೋಮ್‌ವರ್ಕ್‌ನ್ನು ಪರಿಚಯಿಸಿದ್ದು ಇವರೇ ನೋಡಿ..

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 02, 2024 | 2:45 PM

ಹೋಮ್‌ ವರ್ಕ್‌ ಎಂದ್ರೆ ಸಾಕು ಬಹುತೇಕ ಹೆಚ್ಚಿನ ಶಾಲಾ ಮಕ್ಕಳು ಸಿಟ್ಟು ಮಾಡಿಕೊಳ್ಳುತ್ತಾರೆ. ಹೌದು ಶಾಲೆಯಿಂದ ಮನೆಗೆ ಬಂದ್ರೂ ನೆಮ್ಮದಿಯಿಂದ ಆಟ ಆಡೋಕೆ ಬಿಡದೆ ಹೋಮ್‌ ವರ್ಕ್‌ ಮಾಡು, ಓದು ಅಂತೆಲ್ಲಾ ಹೇಳ್ತಾರೆ ಎಂದು ಕೋಪ ಮಾಡಿಕೊಳ್ಳುತ್ತಾರೆ. ಆದ್ರೆ ಮಕ್ಳು ಕಷ್ಟಪಟ್ಟು ಮಾಡೋ ಈ ಹೋಮ್‌ ವರ್ಕ್‌ ಅನ್ನೋ ಕಾನ್ಸೆಪ್ಟ್‌ ಅನ್ನು ಯಾರು ಜಾರಿಗೆ ತಂದಿದ್ದು ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

Viral: ಮಕ್ಳು ಕಷ್ಟ ಪಟ್ಟು ಮಾಡೋ ಹೋಮ್‌ವರ್ಕ್‌ನ್ನು ಪರಿಚಯಿಸಿದ್ದು ಇವರೇ ನೋಡಿ..
ವೈರಲ್​ ಸ್ಟೋರಿ
Follow us on

ಹೋಮ್‌ ವರ್ಕ್‌ ಹೋಮ್‌ ವರ್ಕ್‌ ಹೋಮ್‌ ವರ್ಕ್…..‌ ಈ ಹೆಸ್ರು ಕೇಳಿದ್ರೆ ಸಾಕು ಬಹುತೇಕ ಎಲ್ಲಾ ಶಾಲಾ ಮಕ್ಕಳು ಕೋಪ ಮಾಡಿಕೊಳ್ಳುತ್ತಾರೆ. ಶಾಲೆಯಿಂದ ಮನೆಗೆ ಬಂದ್ರೂ ನೆಮ್ಮದಿಯಿಂದ ಆಟ ಆಡೋಕೆ ಬಿಡದೆ ರಾಶಿ ರಾಶಿ ಹೋಮ್‌ ವರ್ಕ್‌ ಮಾಡೋಕೆ ಕೊಡ್ತಾರೆ ಅಂತ ಮಕ್ಳು ಸಿಟ್ಟು ಮಾಡಿಕೊಳ್ಳುತ್ತಾರೆ. ಇನ್ನೂ ಈ ಹೋಮ್‌ ವರ್ಕ್‌ ಪೋಷಕರಿಗೂ ಹೊರೆಯಾಗಿ ಪರಿಣಮಿಸಿದ್ದು, ಪೋಷಕರಂತೂ ಹೋಮ್‌ ವರ್ಕ್‌ ಮಾಡದೆ ಮಕ್ಕಳನ್ನು ಮನೆಯ ಹೊರಗೆ ಕಾಲಿಡಲು ಕೂಡಾ ಬಿಡ್ತಲ್ಲ. ಪೆಟ್ಟು ಕೊಟ್ಟಾದ್ರೂ ಮಕ್ಕಳ ಕೈಲಿ ಹೋಮ್‌ ವರ್ಕ್‌ ಮಾಡಿಸ್ತಾರೆ. ಅಷ್ಟಕ್ಕೂ ಮಕ್ಳು ಇಷ್ಟ ಇಲ್ಲದೆ ಕಷ್ಟ ಪಟ್ಟು ಮಾಡೋ ಈ ಹೋಮ್‌ ವರ್ಕ್‌ ಅನ್ನು ಪರಿಚಯಿಸಿದ್ದು ಯಾರು ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

ಹೋಮ್‌ ವರ್ಕ್‌ ಅನ್ನು ಪರಿಚಯಿಸಿದವರು ಇಟಲಿಯ “ರಾಬರ್ಟೊ ನೆವಿಲಿಸ್‌”, ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಇವರು 1905 ನೇ ಇಸವಿಯಲ್ಲಿ ತಮ್ಮ ವಿದ್ಯಾರ್ಥಿಗಳು ಏನಾದ್ರೂ ತಪ್ಪು ಮಾಡಿದ್ರೆ, ಪೆಟ್ಟು ನೀಡುವ ಬದಲು ಆ ತಪ್ಪಿಗೆ ಹೋಮ್‌ ವರ್ಕ್‌ ಮಾಡುವ ಶಿಕ್ಷೆಯನ್ನು ನೀಡುತ್ತಿದ್ದರು. ಕ್ರಮೇಣ ಈ ಹೋಮ್‌ ವರ್ಕ್‌ ಎಂಬ ಕಾನ್ಸೆಪ್ಟ್‌ ಪ್ರಪಂಚದಾದ್ಯಂತ ಜನಪ್ರಿಯವಾಗಿ ನಂತರ ಕಲಿಕೆಯ ಭಾಗವಾಗಿ ಪ್ರತಿಯೊಂದು ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಹೋಮ್‌ ವರ್ಕ್‌ ನೀಡಲು ಶುರು ಮಾಡಿದರು.
ಈ ಕುರಿತ ಇಂಟರೆಸ್ಟಿಂಗ್‌ ಸ್ಟೋರಿಯನ್ನು amazing_.facts._ ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಇವರೇ ನೋಡಿ ಹೋಮ್‌ ವರ್ಕ್‌ ಅನ್ನು ಕಂಡು ಹಿಡಿದ ಶಿಕ್ಷಕ ರಾಬರ್ಟೊ ನೆವಿಲಿಸ್”‌ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದ ಆಸಾಮಿ; ಮಕ್ಕಳ ಕಳ್ಳನೆಂದು ಭಾವಿಸಿ ಧರ್ಮದೇಟು ನೀಡಿದ ಜನ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ವ್ಯಕ್ತಿಯ ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷೆ, ಇಂದೂ ಪ್ರಪಂಚದ ಪ್ರತಿಯೊಬ್ಬ ವಿದ್ಯಾರ್ಥಿಗೂ ದೊಡ್ಡ ಶಿಕ್ಷೆಯಾಗಿದೆʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹಾಗಿದ್ರೆ ಇಂದು ನಾವು ಕಷ್ಟ ಪಡಲು ಇವರೇ ಕಾರಣವೇʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಜ್ಞಾನವನ್ನು ಹೆಚ್ಚಿಸುವ ಶಿಕ್ಷೆಯನ್ನು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ