Viral: ಬೆಂಗಳೂರಿನಲ್ಲಿ ಬಾಡಿಗೆ ಮನೆ ತುಂಬಾ ದುಬಾರಿ, ಕಹಿ ಅನುಭವ ಹಂಚಿಕೊಂಡ ವಿದೇಶಿಗ

ಬೆಂಗಳೂರು ಎಂದರೆ ದುಬಾರಿ, ಇಲ್ಲಿ ಮನೆ ಬಾಡಿಗೆ ಮನೆಯಂತೂ ನಾವಂದುಕೊಂಡಂತೆ ಸಿಗುವುದೇ ಇಲ್ಲ. ತಿಂಗಳ ಅರ್ಧ ಸಂಬಳವು ಮನೆ ಬಾಡಿಗೆ ಕಟ್ಟುವುದರಲ್ಲಿ ಮುಗಿದೇ ಹೋಗುತ್ತದೆ. ಬೆಂಗಳೂರಿನಲ್ಲಿ ಮನೆ ಹುಡುಕುವಾಗ ಹೆಚ್ಚಿನವರಿಗೆ ಕಹಿ ಅನುಭವವಾಗಿರುತ್ತದೆ. ಇದೀಗ ಕೆನಡಾದ ಪ್ರಜೆಗೂ ಈ ರೀತಿಯ ಅನುಭವವಾಗಿದೆ. ಹೌದು, ಬೆಂಗಳೂರಿನ ಮನೆಮಾಲೀಕ ತಿಂಗಳ ಬಾಡಿಗೆ ಹಾಗೂ ಮನೆಮಾಲೀಕನ ದುರಾಸೆ ನೋಡಿ ಶಾಕ್ ಆಗಿದ್ದಾರೆ.

Viral: ಬೆಂಗಳೂರಿನಲ್ಲಿ ಬಾಡಿಗೆ ಮನೆ ತುಂಬಾ ದುಬಾರಿ, ಕಹಿ ಅನುಭವ ಹಂಚಿಕೊಂಡ ವಿದೇಶಿಗ
ವೈರಲ್‌ ಪೋಸ್ಟ್‌
Image Credit source: Twitter

Updated on: Jul 22, 2025 | 5:42 PM

ಕೆಲಸ ಹಾಗೂ ಓದಿಗಾಗಿ ಬೆಂಗಳೂರಿಗೆ (Bengaluru) ಬರುವ ಅನೇಕರ ಆಯ್ಕೆ ಪಿಜಿ ಅಥವಾ ಬಾಡಿಗೆ ಮನೆಯಾಗಿರುತ್ತದೆ. ಆದರೆ ಮಾಯನಗರಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕೋದು ತುಂಬಾನೇ ಕಷ್ಟ. ಮನೆ ಸಣ್ಣದಿದ್ದರೂ ಸಮಸ್ಯೆಯಿಲ್ಲ, ಆದರೆ ಬಾಡಿಗೆ ಮಾತ್ರ ಕಡಿಮೆಯಿರಬೇಕು ಎಂದು ಬಯಸುವುದು ಸಹಜ. ಆದರೆ ಕೆನಾಡದ ಪ್ರಜೆಗೆ (Canadian citizen) ಬಾಡಿಗೆ ಮನೆ ವಿಚಾರದಲ್ಲಿ ಕಹಿ ಅನುಭವವಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವ ಸಂದರ್ಭದಲ್ಲಿ ಬಾಡಿಗೆ ಮನೆ ಜಾಹೀರಾತನ್ನು ನೋಡಿದ್ದಾರೆ. ಇದರಲ್ಲಿ ಉಲ್ಲೇಖಿಸಿಲಾದ ತಿಂಗಳ ಬಾಡಿಗೆಯೇ ಈ ವಿದೇಶಿಗ ಶಾಕ್ ಆಗಲು ಕಾರಣವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದು ಇದು  ಚರ್ಚೆಗೆ ಕಾರಣವಾಗಿದೆ.

ಕೆನಡಾದ ಡಿಜಿಟಲ್ ಕ್ರಿಯೇಟರ್ ಕ್ಯಾಲೆಬ್ ಫ್ರೈಸೆನ್ ಅವರು @caleb_friesen2 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ಬೆಂಗಳೂರಿನ ಮನೆಮಾಲೀಕರು ಅತ್ಯಂತ ದುರಾಸೆಯುಳ್ಳ ವ್ಯಕ್ತಿಗಳು ಎಂದಿದ್ದಾರೆ. ಇನ್ನು ಈ ಬೆಂಗಳೂರಿನ ಬೆನ್ನಿಗಾನ ಹಳ್ಳಿಯಲ್ಲಿರುವ ಒಂದು 4ಬಿಹೆಚ್ ಕೆ ಸಂಪೂರ್ಣ ಸುಸಜ್ಜಿತ ಮನೆಗೆ ಮಾಸಿಕ 2.3 ಲಕ್ಷ ಬಾಡಿಗೆ ಇದೆ. ಅದಕ್ಕೆ 23 ಲಕ್ಷ ಭದ್ರತಾ ಠೇವಣಿಯ ಅಗತ್ಯವಿದೆ. ಅಂದರೆ 12 ತಿಂಗಳ ಬಾಡಿಗೆಯಷ್ಟೇ ಭದ್ರತಾ ಮೊತ್ತ. ಆದರೆ ಈ ಬಗ್ಗೆ  ವಿದೇಶಿಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
ಓಲಾದಲ್ಲಿ ಆಟೋ ಬುಕ್ ಮಾಡೋ ಬದಲು ಸೆಡಾನ್ ಕಾರ್ ಬುಕ್ ಮಾಡೋದೇ ಬೆಸ್ಟ್
ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡ್ತಾರೆ, ಈ ಜನರಿಂದ ನೀವು ದೂರವಿರಿ
ವಿಚ್ಛೇದಿತ ಮಹಿಳೆಯರಿಗೆ ರಿಲ್ಯಾಕ್ಸ್ ನೀಡುವ ವಿಶೇಷ ಡಿವೋರ್ಸ್ ಕ್ಯಾಂ
ಗ್ರಾಹಕರಿಗೆ ವಿಶೇಷ ಸೂಚನೆ : ಚಹಾ ಅಂಗಡಿಯ ಗೋಡೆಯ ಮೇಲೆ ವಿಶಿಷ್ಟ ಪೋಸ್ಟರ್

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇನ್ನು ಇಲ್ಲಿ ಜಾಗತಿಕ ನಗರಗಳ ಮಾನದಂಡಗಳ ಜೊತೆಗೆ ಹೋಲಿಕೆ ಮಾಡಿದ್ದು, ನ್ಯೂಯಾರ್ಕ್ ಹಾಗೂ  ಟೊರೊಂಟೊ: ಸಾಮಾನ್ಯವಾಗಿ 1 ತಿಂಗಳ ಭದ್ರತಾ ಠೇವಣಿ, ಸಿಂಗಪೂರ್: ವರ್ಷಕ್ಕೆ 1 ತಿಂಗಳ ಗುತ್ತಿಗೆ, ಸ್ಯಾನ್ ಫ್ರಾನ್ಸಿಸ್ಕೋ: 2 ತಿಂಗಳ ಭದ್ರತಾ ಠೇವಣಿ, ದುಬೈ: ವಾರ್ಷಿಕ ಬಾಡಿಗೆಯ 5%-10% ಹಾಗೂ ಲಂಡನ್: ಸುಮಾರು 6 ವಾರಗಳ ಭದ್ರತಾ ಠೇವಣಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ :Video: ರೈಲಿನಲ್ಲಿ ಬಡ ವ್ಯಾಪಾರಿ ಚೀಲದಲ್ಲಿದ್ದ ತಿಂಡಿ ಎಗರಿಸಿದ ಪ್ರಯಾಣಿಕ

ಜುಲೈ 21 ರಂದು ಶೇರ್ ಮಾಡಲಾದ ಈ ಪೋಸ್ಟ್‌ಗೆ ಬಳಕೆದಾರರು ಹಲವಾರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ಬಾಡಿಗೆದಾರರ ಮೇಲೆ ವಿಶ್ವಾಸವಿಲ್ಲದ ಸಂಸ್ಕೃತಿಗೆ ಕಾರಣವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಕೆಲವೊಮ್ಮೆ ಅನಿವಾರ್ಯ ಕಾರಣಕ್ಕಾಗಿ ದುಡ್ಡು ಎಷ್ಟೇ ಇದ್ದರೂ ಬಾಡಿಗೆ ಮನೆಯಲ್ಲೇ ಉಳಿಯಬೇಕಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಮತ್ತೊಬ್ಬರು, ಮನುಷ್ಯನಿಗೆ ಹಣ ಮೇಲಿನ ಆಸೆ ಹೆಚ್ಚಾಗುತ್ತಿದೆ. ಹೀಗಾಗಿ ಹಣ ಸಂಪಾದಿಸುವುದು ಹೇಗೆ ಎನ್ನುವುದರಲ್ಲೆ ತನ್ನ ಜೀವನವನ್ನು ಕಳೆಯುತ್ತಾನೆ ಎಂದು ಬರೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ