Viral: ಸೇಕ್ರೆಡ್​ ಫೈರ್; 16 ವರ್ಷಗಳ ‘ದಾಸವಾಳ ಪುಷ್ಪಾ’ ಕನಸು ನನಸಾದದ್ದು ಹೀಗೆ

|

Updated on: Jun 26, 2023 | 4:06 PM

Seedling of the year 2023: 'ಕಳೆದ ಅರ್ಧ ಶತಮಾನದಲ್ಲಿ ಭಾರತ ಮತ್ತು ಇತರೇ ದೇಶದ ಯಾವ ದಾಸವಾಳ ತಳಿಗಳಿಗೂ ಈ ಮನ್ನಣೆ ದೊರೆತಿರಲಿಲ್ಲ. ಈ ಹೊಸ ತಳಿ ಸೃಷ್ಟಿಯ ಮೂಲಕ ನಮ್ಮ ದೇಶವನ್ನು ಪ್ರತಿನಿಧಿಸಿದ್ದು ನನಗೆ ಹೆಮ್ಮೆ ತಂದಿದೆ.‘ ಪುಷ್ಪಾ ಸುರೇಶ

Viral: ಸೇಕ್ರೆಡ್​ ಫೈರ್; 16 ವರ್ಷಗಳ ದಾಸವಾಳ ಪುಷ್ಪಾ ಕನಸು ನನಸಾದದ್ದು ಹೀಗೆ
ಬೆಂಗಳೂರಿನ ಪುಷ್ಪಾ ಸುರೇಶ ಸೃಷ್ಟಿಸಿದ ''ಸೇಕ್ರೆಡ್​ ಫೈರ್'' ತಳಿಯ ದಾಸವಾಳ (ಬಲಭಾಗದಲ್ಲಿ)
Follow us on

Bengaluru: ಸಾಗರದ ಪುಷ್ಪಾ ಸುರೇಶ ನೆಲೆಸಿರುವುದು ಬೆಂಗಳೂರಿನ ತಲಘಟ್ಟಪುರದಲ್ಲಿ. ದಾಸವಾಳ ಕೃಷಿಯಲ್ಲಿ ಅಂತಾರಾಷ್ಟ್ರೀಯ ಮಟ್ಟಿದಲ್ಲಿ ಹೆಸರು ಮಾಡಿದ ಇವರು ಈತನಕ ಸುಮಾರು 8,000 ದಾಸವಾಳ ತಳಿಗಳ ಸೃಷ್ಟಿಗೆ ಕಾರಣೀಕರ್ತರಾಗಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಸವಾಳ ಸಂಸ್ಥೆಗಳು (Hibiscus Society) ಏರ್ಪಡಿಸುವ ಸ್ಪರ್ಧೆಗಳಲ್ಲಿ ಇವರು ಬಹುಮಾನಗಳನ್ನೂ ಪಡೆದಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ದಾಸವಾಳ ಸಂಸ್ಥೆಯ ಭಾರತದ ಪ್ರತಿನಿಧಿಯೂ ಇವರಾಗಿದ್ದಾರೆ. ಇದೀಗ ಇವರ ಮುಡಿಗೆ ಮತ್ತೊಂದು ಗರಿ ಏರಿದೆ. ಇವರು ಸೃಷ್ಟಿಸಿದ ಸೇಕ್ರೆಡ್​ ಫೈರ್​ (Sacred Fire) ದಾಸವಾಳ ತಳಿಗೆ ಜೂ. 25ರಂದು ಫ್ಲೋರಿಡಾದಲ್ಲಿ Seedling of the year 2023 ಮನ್ನಣೆ ದೊರೆತಿದೆ.

‘ನನ್ನ 16 ವರ್ಷಗಳ ಕನಸು ನನಸಾಗಿದೆ. ಈ ಕನಸಿನಲ್ಲಿ ನನ್ನ ಗೆಳತಿ ಶ್ಯಾಮಲಾ ಅವರ ಪಾಲೂ ಇದೆ. ಇದು ಒಬ್ಬ ದಾಸವಾಳದ ಹೈಬ್ರಿಡೈಝರ್​ಗೆ ಸಲ್ಲುವ ಅತ್ಯುನ್ನತ ಗೌರವ ಮತ್ತು ಹೆಮ್ಮೆ. ಈ ತಳಿಯನ್ನು ಬೆಳೆಸಿ ಹಂಚಿದವರು ಫ್ಲೋರಿಡಾದ Martindale nurseryಯ Matt, ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ. ಈ ತಳಿ ಹೀಗೊಂದು ಗೌರವಕ್ಕೆ ಪಾತ್ರವಾಗಬೇಕೆಂದರೆ 3 ವರ್ಷಗಳ ಪ್ರಕ್ರಿಯೆಗೆ ಒಳಪಡಬೇಕು.’

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral: ಲುಂಗೀಧಾರಿ ಬೇರ್​ ಗ್ರಿಲ್ಸ್​; ‘ಜಂಗಲ್​ ಸರ್ವೈವರ್‘ನ ಮುಂದಿನ ಅತಿಥಿ ಯಾರು?

‘ಮೊದಲ ಹಂತದಲ್ಲಿ, ಈ ತಳಿ ಫ್ಲೋರಿಡಾದಲ್ಲಿ ನಡೆಯುವ ದಾಸವಾಳ ಪ್ರದರ್ಶನದಲ್ಲಿ ಬಹುಮಾನ ಪಡೆದುಕೊಂಡಿತು (Best of Show Seedling -BOSS). ನಂತರ ಇದರ ಗಿಡವನ್ನು Seedling Evaluation Committee (SEC ) ಗೆ ಕೊಡಲಾಯಿತು. ಆಮೇಲೆ ಮೂರು ವರ್ಷಗಳ ಕಾಲ ಈ ಗಿಡವನ್ನು ಬೆಳೆಸಿ ಇದರ ಮಾನದಂಡವನ್ನು (ಬೆಳವಣಿಗೆ, ಹೂ ಬಿಡುವ ರೀತಿ ಇತ್ಯಾದಿ) ನಿರ್ಧರಿಸಲಾಯಿತು. ನಂತರ ಇದೇ ರೀತಿ ಬೆಳೆಸಿದ ಗಿಡಗಳೊಡನೆ ತುಲನೆ ಮಾಡಲಾಯಿತು. ಅಂತಿಮ ಸುತ್ತಿನಲ್ಲಿದ್ದ ನಾಲ್ಕು ತಳಿಗಳ ಪೈಕಿ ಅತೀ ಹೆಚ್ಚು ಅಂಕ ಪಡೆದ ಸೇಕ್ರೆಡ್​ ಫೈರ್ ತಳಿಯನ್ನು Seedling of the year ಎಂದು ಘೋಷಿಸಲಾಯಿತು’ ಎನ್ನುತ್ತಾರೆ ಪುಷ್ಪಾ ಸುರೇಶ.

ಇದನ್ನೂ ಓದಿ : Viral Video: ಎಲ್ಲಿಯ ಉಡುಪಿ ಎಲ್ಲಿಯ ಚಿಕ್ಕಬಳ್ಳಾಪುರ; ಇಲ್ಲಿದೆ ಗಣೇಶ್ ಮತ್ತು ಶ್ರೀವಿದ್ಯಾ ಕಲಾಹೂರಣ

ಈತನಕ ಇವರು ಸೃಷ್ಟಿಸಿದ ದಾಸವಾಳದ ಬೀಜಗಳು ತೈವಾನ್​, ಜಪಾನ್​, ಬ್ರೆಝಿಲ್​, ಇಂಗ್ಲೆಂಡ್​, ಇಂಡೋನೇಷಿಯಾ, ಅಮೆರಿಕಾ, ಸೇರಿದಂತೆ ಅನೇಕ ದೇಶಗಳ ನೆಲದಲ್ಲಿ ಬೆಳೆಯುತ್ತಿವೆ. 2015ರಲ್ಲಿ ಈ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಪರಿಗಣಿಸಿದ ರಾಜ್ಯ ತೋಟಗಾರಿಕೆ ಇಲಾಖೆಯು ಇವರ ನೇತೃತ್ವದಲ್ಲಿ ಲಾಲ್​ಬಾಗ್​ನಲ್ಲಿ 300 ದಾಸವಾಳದ ಸಸಿಗಳನ್ನು ನೆಡಲು ಅವಕಾಶ ಕಲ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:48 pm, Mon, 26 June 23