ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಒಂದು ಪುಣ್ಯಕಾರ್ಯದಲ್ಲಿ ಭಾಗಿಯಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ದಿನದಂದು ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ವಿಶೇಷವಾಗಿ ರಾಮಭಕ್ತರು ತಮ್ಮ ಊರುಗಳಿಂದ ಪಾದಯಾತ್ರೆ ಮೂಲಕವೇ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುವೆ ಎಂಬ ತಮ್ಮ ಸಂಕಲ್ಪದಂತೆ ಇದಾಗಲೇ ಅಯೋಧ್ಯೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಅದೇ ರೀತಿ ಭಕ್ತಿಯ ಅಸಾಧಾರಣ ಪ್ರದರ್ಶನದಲ್ಲಿ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಬದ್ರಿ ಪ್ರಸಾದ್ ವಿಶ್ವಕರ್ಮ ಅಲಿಯಾಸ್ ಬದ್ರಿ ಬಾಬಾ ತಮ್ಮ ಪ್ರತಿಜ್ಞೆಯಂತೆ ಜನವರಿ 11 ರಂದು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಬಟಿಯಾಗಢದಿಂದ ತಮ್ಮ ಜಡೆಯ ಮೂಲಕ ರಾಮ ರಥವನ್ನು ಎಳೆದುಕೊಂಡು ಹೋಗುವ ಮೂಲಕ ಅಯೋಧ್ಯೆಗೆ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಗಾಜಿಪುರ, ರಾಧಾನಗರ, ಚೌಕ್ ಹುಸೇಂಗಜ್ ಮಾರ್ಗವಾಗಿ ಸುಮಾರು 566 ಕಿಮೀ ಗೂ ಹೆಚ್ಚು ದೂರವನ್ನು ಕ್ರಮಿಸಿ ಜನವರಿ 22 ರಂದು ಬದ್ರಿ ಬಾಬಾ ಅಯೋಧ್ಯೆಯನ್ನು ತಲುಪುವ ನಿರೀಕ್ಷೆಯಿದೆ.
1992ರಲ್ಲಿ ಬದ್ರಿ ಬಾಬಾ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ, ತನ್ನ ಜಡೆಯಲ್ಲಿಯೇ ರಥವನ್ನು ಎಳೆಯುತ್ತಾ, ಪಾದಯಾತ್ರೆಯ ಮೂಲಕವೇ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವೇ ಎಂಬ ಪ್ರತಿಜ್ಞೆಯನ್ನು ಮಾಡಿದ್ದರು. ಇದೀಗ ತನ್ನ ಪ್ರತಿಜ್ಞೆಯಂತೆ ಬದ್ರಿ ಬಾಬಾ ಅವರು ದಾಮೋಹ್ ಜಿಲ್ಲೆಯಿಂದ ಜಡೆಯ ಮೂಲಕ ರಾಮ ರಥವನ್ನು ಎಳೆಯುತ್ತಾ, ಅಯೋಧ್ಯೆಗೆ ಪಾದಯಾತ್ರೆಯನ್ನು ಹೊರಟಿದ್ದಾರೆ.
#WATCH | Rae Bareilly, Uttar Pradesh: Saint Badri pulls the chariot of Lord Ram using his braid, as he travels 566 km from Damoh to Ayodhya for the grand Pran Pratishtha ceremony on January 22. pic.twitter.com/HpxTFGrtot
— ANI (@ANI) January 19, 2024
ಸುದ್ದಿ ಸಂಸ್ಥೆ ANI ತನ್ನ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಜನವರಿ 22 ರಂದು ನಡೆಯಲಿರುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಡೆಯಲ್ಲಿ ರಾಮ ರಥವನ್ನು ಎಳೆಯುತ್ತಾ, ದಾಮೋಹ್ ನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟಿರುವ ಬದ್ರಿ ಬಾಬಾ” ಎಂಬ ಶೀರ್ಷಿಕೆಯನ್ನು ಬರೆದಿಕೊಂಡಿದೆ.
ಇದನ್ನೂ ಓದಿ: ಮಾನವೀಯ ಮೌಲ್ಯವನ್ನು ಈ ದಂಪತಿಗಳನ್ನು ನೋಡಿ ನಾವು ಕಲಿಯಬೇಕು ನೋಡಿ
ವಿಡಿಯೋದಲ್ಲಿ ಕಾವಿ ಬಟ್ಟೆಯನ್ನು ತೊಟ್ಟಿರುವ ಬದ್ರಿ ಬಾಬಾ ಅವರು ತನ್ನ ಜಡೆಗೂದಲಿಗೆ ಹಗ್ಗವನ್ನು ಕಟ್ಟಿ ಅದರಲ್ಲಿ ರಾಮ ರಥವನ್ನು ಎಳೆಯುತ್ತಾ ಪುಣ್ಯ ಭೂಮಿ ಅಯೋಧ್ಯೆಗೆ ಪಾದಯಾತ್ರೆ ಹೊರಟಿರುವುದನ್ನು ಕಾಣಬಹುದು.
Published On - 6:06 pm, Fri, 19 January 24