ಮರಳು ಮತ್ತು 12 ವಿಧದ ತರಕಾರಿಗಳನ್ನು ಬಳಸಿ ದೇವಿ ದುರ್ಗೆಯ ಕಲಾಕೃತಿ ರಚಿಸಿದ ಕಲಾವಿದ ಸುದರ್ಶನ್​ ಪಟ್ನಾಯಕ್

Viral News: ಕಲಾವಿದ ಸುದರ್ಶನ್ ಪಟ್ನಾಯಕ್ ಮರಳು ಜತೆಗೆ 12 ವಿಧದ ತರಕಾರಿಗಳನ್ನು ಬಳಸಿ ದುರ್ಗಾದೇವಿಯ ಕಲಾಕೃತಿ ತಯಾರಿಸಿದ್ದಾರೆ. ಇದೀಗ ಇವರ ಈ ಕಲೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಮರಳು ಮತ್ತು 12 ವಿಧದ ತರಕಾರಿಗಳನ್ನು ಬಳಸಿ ದೇವಿ ದುರ್ಗೆಯ ಕಲಾಕೃತಿ ರಚಿಸಿದ ಕಲಾವಿದ ಸುದರ್ಶನ್​ ಪಟ್ನಾಯಕ್
ಮರಳು ಮತ್ತು 12 ವಿಧದ ತರಕಾರಿಗಳನ್ನು ಬಳಸಿ ದೇವಿ ದುರ್ಗೆಯ ಕಲಾಕೃತಿ ರಚಿಸಿದ ಕಲಾವಿದ
Edited By:

Updated on: Oct 15, 2021 | 12:31 PM

ಜಗತ್ತಿನಲ್ಲಿ ಪ್ರತಿಭಾವಂತರಿಗೆ ಯಾವುದೇ ಕೊರತೆಯಿಲ್ಲ. ಕೆಲವರ ಪ್ರತಿಭೆಗಳನ್ನು ಗುರುತಿಸಲು ಸಾಮಾಜಿಕ ಜಾಲತಾಣ ಉತ್ತಮ ವೇದಿಕೆಯಾಗಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಅದೆಷ್ಟೋ ಜನರ ಕೌಶಲ್ಯಗಳು, ಹವ್ಯಾಸಗಳು ಮತ್ತು ಅವರ ಪ್ರತಿಭೆಗಳು ಗುರುತಿಸಲ್ಪಟ್ಟಿವೆ. ನವರಾತ್ರಿ ವಿಶೇಷವಾಗಿ ಮರಳು ಕಲಾವಿದ, ಮರಳು ಮತ್ತು ತರಕಾರಿಗಳನ್ನು ಬಳಸಿ ದುರ್ಗಾದೇವಿಯ ಕಲಾಕೃತಿಯನ್ನು ರಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್​ ವೈರಲ್​ ಆಗಿದ್ದು ಕಲಾವಿದನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಮರಳು ಜತೆಗೆ 12 ವಿಧದ ತರಕಾರಿಗಳನ್ನು ಬಳಸಿ ದುರ್ಗಾದೇವಿಯ ಕಲಾಕೃತಿ ತಯಾರಿಸಿದ್ದಾರೆ. ಇದೀಗ ಇವರ ಈ ಕಲೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಅದ್ಭುತವಾಗಿ ರಚನೆಯಾದ ದುರ್ಗಾದೇವಿಯ ಕಲಾಕೃತಿ ನೆಟ್ಟಿಗರಿಗೆ ಬಹಳ ಇಷ್ಟವಾಗಿದೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಹ್ಯಾಪಿ ನವರಾತ್ರಿ ಎಂದು ಶುಭ ಹಾರೈಸುವ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ. ಅದ್ಭುತ ಕಲೆ ಎಂದು ಓರ್ವರು ಹೇಳಿದ್ದಾರೆ. ನೀವು ಒಳ್ಳೆಯ ಕಲಾವಿದರು ಎಂದು ಮತ್ತೋರ್ವರು ಹೇಳಿದ್ದಾರೆ. ಇಂತಹ ಸುಂದರ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದಾಗ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಇದನ್ನೂ ಓದಿ:

Puri Ratha Yatra 2021: ಪುರಿ ಬೀಚ್​ನಲ್ಲಿ ಅರಳಿದ ಮರಳು ಕಲೆ! ಜಗನ್ನಾಥ ದೇವರನ್ನು ಚಿತ್ರಿಸಿದ ಕಲಾವಿದ

Heartwarming: ಬೆಂಗಳೂರು ಚಿತ್ರ ಕಲಾವಿದ ಸ್ಟೀವನ್ ಹ್ಯಾರಿಸ್ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ