Viral Video: ನಿಮ್ಮನ್ನು ಈ ರೀತಿ ನೋಡೋಕೆ ತುಂಬಾ ನೋವಾಗುತ್ತೇ, ದಯವಿಟ್ಟು RCBಗೆ ಬಂದ್ಬಿಡಿ ಕೆ.ಎಲ್‌ ರಾಹುಲ್​​ಗೆ ಅಭಿಮಾನಿಗಳ ಮನವಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 09, 2024 | 5:12 PM

ನಿನ್ನೆ ನಡೆದ ಐಪಿಎಲ್‌ ಪಂದ್ಯದಲ್ಲಿ ತಂಡ ನಿರೀಕ್ಷಿತ ಪ್ರದರ್ಶನ  ನೀಡಿಲ್ಲ ಎಂದು ಎಲ್‌ಎಸ್‌ಜಿ ಮಾಲೀಕ ಸಂಜೀವ್‌ ಗೊಯೆಂಕಾ ಕ್ಯಾಮೆರಾ ಎದುದೇ ತಂಡದ ನಾಯಕ ಕೆ.ಎಲ್‌ ರಾಹುಲ್‌ ವಿರುದ್ಧ ಗರಂ ಆಗಿದ್ರು. ಈ ಕುರಿತ ವಿಡಿಯೋ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ದಯವಿಟ್ಟು ಆರ್‌ಸಿಬಿ ಗೆ ಬಂದ್ಬಿಡು ಗುರು ಎಂದು ಕೆ.ಎಲ್‌ ರಾಹುಲ್‌ ಗೆ ಅಭಿಮಾನಿಗಳು ಮನವಿ ಮಾಡಿದ್ದಾರೆ.

Viral Video: ನಿಮ್ಮನ್ನು ಈ ರೀತಿ ನೋಡೋಕೆ ತುಂಬಾ ನೋವಾಗುತ್ತೇ, ದಯವಿಟ್ಟು RCBಗೆ ಬಂದ್ಬಿಡಿ ಕೆ.ಎಲ್‌ ರಾಹುಲ್​​ಗೆ ಅಭಿಮಾನಿಗಳ ಮನವಿ
Follow us on

ಬುಧವಾರ  ನಡೆದ ಐಪಿಎಲ್‌ ಪ್ಲೇ-ಆಫ್‌ ರೇಸ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವೆ ರೋಚಕ ಪಂದ್ಯ ಏರ್ಪಟ್ಟಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ LSG  ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 164 ರನ್‌ ಕಳೆ ಹಾಕಿತು. ನಂತರ ಬ್ಯಾಟಿಂಗ್‌ ಶುರು ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು 9.4 ಓವರ್‌ಗಳಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.  ಇದರಿಂದ ನಿರಾಸೆಗೊಂಡ  ಎಲ್‌ಎಸ್‌ಜಿ ಪ್ರಾಂಚೈಸಿ ಮಾಲೀಕ ಸಂಜೀವ್‌ ಗೊಯೆಂಕಾ ಕ್ಯಾಮೆರಾ ಎದುರೇ ತಂಡದ ನಾಯಕ ಕೆ.ಎಲ್‌ ರಾಹುಲ್‌ ವಿರುದ್ಧ ಗರಂ ಆಗಿದ್ದಾರೆ.

ಸಂಜೀವ್‌ ಗೋಯೆಂಕಾ ಮತ್ತು ಕೆಎಲ್‌ ರಾಹುಲ್‌ ನಡುವಿನ ಸಂಭಾಷಣೆಯ ಈ ವಿಡಿಯೋ ದೃಶ್ಯಾವಳಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಎಲ್‌.ಎಸ್.ಜಿ ಮಾಲಕನ ವಿರುದ್ಧ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ದಯವಿಟ್ಟು ನಮ್ಮ ಆರ್‌ಸಿಬಿ ತಂಡಕ್ಕೆ ಬಂದ್ಬಿಡು ಗುರು ಎಂದು ಕೆಎಲ್ ರಾಹುಲ್‌ ಬಳಿ ಮನವಿ ಮಾಡಿದ್ದಾರೆ.

ಈ ಕುರಿತ ವಿಡಿಯೋವನ್ನು ಬೆಳಗಾವಿ ಕನ್ನಡಿಗರು (@belagavi_kannadigaru) ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನಿನ್ನ ಈ ರೀತಿ ನೋಡೋಕೆ ನೋವಾಗುತ್ತೆ ಗುರು, ಕೆಎಲ್‌ ಕಮ್‌ ಬ್ಯಾಕ್‌ ಟು ಆರ್‌ಸಿಬಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್‌ ವಿಡಿಯೋದಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ನೀಡಿಲ್ಲ ಎಂದು ಎಲ್‌.ಎಸ್.ಜಿ ಪ್ರಾಂಚೈಸಿ ಮಾಲೀಕ ಸಂಜೀವ್‌ ಗೊಯೆಂಕಾ ಅವರು ಕೆಎಲ್‌ ರಾಹುಲ್‌ ಜೊತೆ ಗರಂ ಆಗಿ ಮಾತನಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪ್ರಿಯತಮೆಗೆ ದುಬಾರಿ ಗಿಫ್ಟ್​​ ಕೊಡಲು ಹಲವೆಡೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹೆಚ್ಚಿನ ಅಭಿಮಾನಿಗಳು ಹೌದು ಗುರು, ದಯವಿಟ್ಟು ಆರ್‌ಸಿಬಿ ಗೆ ಬಂದ್ಬಿಡು ಗುರು ಎಂದು ಕೆಎಲ್‌ ರಾಹುಲ್‌ ಗೆ ಮನವಿ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:11 pm, Thu, 9 May 24