ಅಪ್ಪನ 14 ವರ್ಷದ ಆಸೆಯನ್ನು ಮಗ ಈಡೇರಿಸಿದ ಅದ್ಭುತ ಕ್ಷಣ ಹೇಗಿದೆ ನೋಡಿ?

ಮಕ್ಕಳು ಹೆತ್ತವರಿಗೆ ನೀಡುವ ಸಣ್ಣ ಸಣ್ಣ ಖುಷಿಗಳೇ ಅವರಿಗೆ ದೊಡ್ಡ ಬಹುಮಾನ, ಮಕ್ಕಳಿಂದ ತಂದೆ -ತಾಯಿ ಯಾವುದನ್ನು ಅಪೇಕ್ಷೆ ಮಾಡುವುದಿಲ್ಲ, ಏಕೆಂದರೆ ಅವರು ತಮ್ಮ ಜೀವನವನ್ನು ಮಕ್ಕಳಿಗಾಗಿ ಮುಡಿಪಾಗಿಟ್ಟಿರುತ್ತಾರೆ. ಅದರಲ್ಲೂ ಅಪ್ಪ ತುಂಬಾ ವಿಶೇಷ, ಯಾಕೆಂದರೆ ಅವರು ಜೀವನದಲ್ಲಿ ತುಂಬಾ ಶ್ರಮ ಜೀವಿ. ಹಾಗಾಗಿ ಅವರಿಗೆ ಚಿಕ್ಕದಾಗಿ ಏನಾದರೂ ಮಾಡಿದ್ರು ಅದು ದೊಡ್ಡದು ಎಂದು ಹೇಳಿಕೊಳ್ಳುತ್ತಾರೆ. ಇಲ್ಲೊಂದು ಘಟನೆಯೊಂದು ನಡೆದಿದ್ದು, ಯುವಕನೊಬ್ಬ ತನ್ನ ತಂದೆಯ ಕನಸಿನ ಬೈಕನ್ನು ಸರ್ಪ್ರೈಸ್​​​​ ಗಿಫ್ಟ್ ಆಗಿ ನೀಡಿದ್ದಾನೆ.​​​​ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಅಪ್ಪನ 14 ವರ್ಷದ ಆಸೆಯನ್ನು ಮಗ ಈಡೇರಿಸಿದ ಅದ್ಭುತ ಕ್ಷಣ ಹೇಗಿದೆ ನೋಡಿ?
ವೈರಲ್​​ ವಿಡಿಯೋ
Updated By: ಮಾಲಾಶ್ರೀ ಅಂಚನ್​

Updated on: Jul 18, 2025 | 12:19 PM

ಹೆತ್ತವರಿಗೆ ತನ್ನ ಮಕ್ಕಳು ಚೆನ್ನಾಗಿ ಇರಬೇಕು, ಎಲ್ಲರಂತೆ ಬೆಳೆದು ಒಳ್ಳೆಯ ವ್ಯಕ್ತಿಯಾಗಬೇಕು ಎಂಬ ಆಸೆ ಇರುತ್ತದೆ. ಯಾವುದಕ್ಕೂ ಆಸೆ ಪಡದ ಜೀವಗಳು ಎಂದರೆ ಅದು ಅಪ್ಪ-ಅಮ್ಮ. ಅದರಲ್ಲೂ ಅಪ್ಪ ತುಂಬಾ ವಿಶೇಷ ಏಕೆಂದರೆ ತನ್ನ ಮಕ್ಕಳಿಗಾಗಿ ಜೀವನ ಪೂರ್ತಿ ಒದ್ದಾಡುತ್ತೇನೆ. ಅಂತಹ ಅಪ್ಪನಿಗೆ ಮಕ್ಕಳು ವಿಶೇಷ ಗಿಫ್ಟ್​​​ ನೀಡಿದ್ರೆ ಹೇಗಿರುತ್ತದೆ. ಇಂತಹದ್ದೊಂದು ವಿಶೇಷ ವಿಡಿಯೋ ಇದೀಗ ವೈರಲ್‌ ಆಗಿದ್ದು,  ಯುವಕನೋರ್ವ ತನ್ನ ಅಪ್ಪನಿಗೆ ನೀಡಿದ ಸ್ಪೆಷಲ್ ಗಿಫ್ಟ್​​​ ನೋಡಿದ್ರೆ ನೀವು ಭಾವುಕರಾಗುವುದು ಖಂಡಿತ. ಕೇರಳದ (Kerala) ಕೊಚ್ಚಿಯ ಯೂಟ್ಯೂಬರ್​​​  ಅಶ್ವಿನ್, ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್​​ನ್ನು ತನ್ನ ತಂದೆಗೆ ಗಿಫ್ಟ್ ನೀಡಿದ್ದಾನೆ. ಈ ಭಾವನಾತ್ಮಕ ದೃಶ್ಯ  ಅನೇಕರ ಮನಗೆದ್ದಿದೆ.

ಇನ್ನು ಈ ವಿಡಿಯೋ ಹಂಚಿಕೊಂಡಿರುವ ಅಶ್ವಿನ್​​​​​ ಹೀಗೆ ಶೀರ್ಷಿಕೆ ಬರೆದುಕೊಂಡಿದ್ದಾನೆ, “14 ವರ್ಷಗಳ ಹಿಂದೆ, ಅವರು ಬುಲೆಟ್ ಖರೀದಿಸಬೇಕೆಂದು ನನಗೆ ಹೇಳಿದ್ದರು. ಈ ಹಿಂದೆ ಅವರಿಗೆ ಅದನ್ನು ಖರೀದಿಸುವ ಅವಕಾಶ ಇದ್ರು ಅದನ್ನು ಖರೀದಿ ಮಾಡಿಲ್ಲ. ಬಹುಶಃ ಅವರಿಗೆ ನಮ್ಮ ಜೀವನ ಹಾಗೂ ಆ ಹಣದಲ್ಲಿ ಮಕ್ಕಳಿಗೆ ಏನಾದರೂ ಮಾಡುವ ಎಂಬ ಹಂಬಲ ಇದ್ದೀರಾಬಹುದು. ಆದರೆ ಇಂದು ನಾನು ಅವರು ಆಸೆ ಪಟ್ಟಿರುವ ಈ ಬೈಕ್​​ ನೀಡುತ್ತೇನೆ” ಎಂದು ಬರೆದಿಕೊಂಡಿದ್ದಾನೆ.

ಇದನ್ನೂ ಓದಿ
ವಿಕೆಟ್‌ ಕೀಪರ್‌ ಆಗಿ ಅದ್ಭುತ ಪ್ರದರ್ಶನ ನೀಡಿದ ಶ್ವಾನ
ಒಂದು ಕಡೆ ಸೂತಕ, ಇನ್ನೊಂದು ಕಡೆ ಮದುವೆ, ಇದನ್ನು ನಿಭಾಯಿಸಿದ್ದೇಗೆ ನೋಡಿ
ಹಾಡಿನ ಮೂಲಕ ರಿಕ್ಷಾ ಚಾಲಕನಿಗೆ ಸ್ವೀಟ್‌ ಆಗಿ ಬುದ್ಧಿವಾದ ಹೇಳಿದ ಪೊಲೀಸ್‌
ತಾಯಿಯನ್ನು ಶವ ಪೆಟ್ಟಿಗೆಯಲ್ಲಿ ಕೂರಿಸಿ ಮೆರವಣಿಗೆ ಮಾಡಿದ ಮಗ

ಇದನ್ನೂ ಓದಿ: ಗಲ್ಲಿ ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಆಗಿ ಮಿಂಚಿದ ಶ್ವಾನ; ವೈರಲ್‌ ಆಯ್ತು ವಿಡಿಯೋ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋದಲ್ಲಿ  ತನ್ನ ತಂದೆಗೆ ಅಶ್ವಿನ್ ರಾಯಲ್ ಎನ್‌ಫೀಲ್ಡ್ ಬುಲೆಟ್​​​ನ ಕೀಯನ್ನು ನೀಡುವುದನ್ನು ಕಾಣಬಹುದು. ಮಗ ಬೈಕ್​​​ನ ಕೀ ನೀಡುವಾಗ ಅವರ ಅಪ್ಪ ತುಂಬಾ ಅಚ್ಚರಿಯಿಂದ ನೋಡುತ್ತಾರೆ. ಅವರಿಗೆ ಈ ಸಪ್ರೈಸ್​​​​ ಬಗ್ಗೆ ಗೊತ್ತಿರಲಿಲ್ಲ.‌ ಅವರು ಮಗ ನೀಡಿದ ಸರ್ಪ್ರೈಸ್​​ ನೋಡಿ ಒಮ್ಮೆ ಶಾಕ್​ ಆಗಿದ್ದಾರೆ. ಮಗ ನಿಮಗೆ ಇದು ಎಂದು ಹೇಳಿದಾಗ ಅಪ್ಪ-ಅಮ್ಮ ಇಬ್ಬರು ಭಾವುಕರಾಗಿದ್ದಾರೆ. ಇನ್ನು ಈ ವಿಡಿಯೋ ಏಳು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋ ನೋಡಿದ ಬಳಕೆದಾರರು ಕಾಮೆಂಟ್‌ಗಳನ್ನು​​ ಮಾಡಿದ್ದಾರೆ. ಒಬ್ಬ ಬಳಕೆದಾರ ʼಇದು ಅದ್ಭುತವಾಗಿದೆ, ಅವನಿಗೆ ಅವರ ಆಶೀರ್ವಾದ ಯಾವಾಗಲೂ ಇರುತ್ತದೆʼ ಎಂದು ಹೇಳಿದ್ದಾರೆ. ʼಅವರ ಕಣ್ಣೀರೇ ಹೇಳುತ್ತಿದೆ ಮಗನ ಬಗ್ಗೆʼ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:18 pm, Fri, 18 July 25