ಸೋಶಿಯಲ್ ಮೀಡಿಯಾವು ಬಹು ದೊಡ್ಡ ಮನೋರಂಜನಾ ಜಗತ್ತಾಗಿ ಸೃಷ್ಟಿಯಾಗಿದೆ. ಇದರ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡವರು ಅನೇಕರಿದ್ದಾರೆ. ಅಂತಹವರ ಸಾಲಿಗೆ ಅಯ್ಯೋ ಶ್ರದ್ಧಾ ಎಂದೇ ಖ್ಯಾತಿ ಗಳಿಸಿಕೊಂಡಿರುವ ಶ್ರದ್ಧಾ ಜೈನ್ ಕೂಡ ಸೇರುತ್ತಾರೆ. ಅಯ್ಯೋ ಶ್ರದ್ಧಾ ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿಯೂ ವಿಡಿಯೋ ಮಾಡಿ ಶೇರ್ ಮಾಡುವ ಇವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಆದರೆ ಇದೀಗ ದೇಶದ ಪ್ರಧಾನಿಯವರು ಶ್ರದ್ಧಾ ಜೈನ್ ಅವರು ಸೃಜನಶೀಲ ಕ್ರಿಯೇಟರ್ ಪ್ರಶಸ್ತಿಯನ್ನು ನೀಡಿದ್ದಾರೆ. ಈ ವೇಳೆಯಲ್ಲಿ ಶ್ರದ್ಧಾರವರನ್ನು ಅಯ್ಯೋ ಎನ್ನುತ್ತಲೇ ತಮಾಷೆ ಮಾಡಿದ್ದಾರೆ.
ಹೌದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ಪ್ರಖ್ಯಾತ ಆರ್‌ಜೆ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ಶ್ರದ್ಧಾ ಜೈನ್ ಅವರಿಗೆ ಮಹಿಳಾ ವಿಭಾಗದಲ್ಲಿ ಸೃಜನಶೀಲ ಕ್ರಿಯೇಟರ್ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿ ಸ್ವೀಕರಿಸಲು ಶ್ರದ್ಧಾರವರು ವೇದಿಕೆಗೆ ಬರುತ್ತಿದ್ದಂತೆ ಪ್ರಧಾನಿ ಮೋದಿ ಅಯ್ಯೋ.. ಎನ್ನುತ್ತಲೇ ಕಾಲೆಳೆದಿದ್ದಾರೆ. ಈ ವೇಳೆಯಲ್ಲಿ ಶ್ರದ್ಧಾರವರು ಜೋರಾಗಿ ನಕ್ಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವೊಂದು ವೈರಲ್ ಆಗಿವೆ.
ನಮ್ಮ ತುಳುವೆರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ದೇಶದ ಪ್ರಧಾನಿ ಮೋದಿಯವರು ಅಯ್ಯೋ ಎನ್ನುತ್ತಾ ಶ್ರದ್ಧಾರವರಿಗೆ ತಮಾಷೆ ಮಾಡುವುದನ್ನು ನೋಡಬಹುದು. ಆ ಬಳಿಕ ಮಹಿಳಾ ವಿಭಾಗದಲ್ಲಿ ಅತ್ಯಂತ ಸೃಜನಶೀಲ ಕ್ರಿಯೇಟರ್ ಪ್ರಶಸ್ತಿಯನ್ನು ನೀಡಿದ್ದು, ಈ ವೇಳೆ ಪ್ರಧಾನಿ ಮೋದಿ, ‘ಶ್ರದ್ಧಾ ಜೊತೆಗೆ ಇದು ನನ್ನ ಎರಡನೇ ಭೇಟಿ, ಈ ಪ್ರಶಸ್ತಿ ಅವರಿಗೆ ಕೊಡಲು ಖುಷಿಯಾಗುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ: ಹಾವಿನ ವಿಷ ಮಾನವನ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ವಿಡಿಯೋ ವೈರಲ್
ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಶ್ರದ್ಧಾರವರು, ‘ಮನೆಯಲ್ಲಿ ಸ್ಮಾರ್ಟ್ಫೋನ್ ಇಟ್ಟುಕೊಂಡು ಕಂಟೆಂಟ್ ಮಾಡುವುದು ಕೂಡ ಒಂದು ಕೌಶಲ್ಯ ಎನ್ನುವುದನ್ನು ಈ ಪ್ರಶಸ್ತಿಯೂ ಸಾಬೀತು ಮಾಡುತ್ತಿದೆ. ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು’ ಎಂದು ತಿಳಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋಗೆ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಳಕೆದಾರರೊಬ್ಬರು, ಒಳ್ಳೆಯದಾಗಲಿ, ಇನ್ನು ಅನೇಕ ಪ್ರಶಸ್ತಿಗಳು ಸಿಗುವಂತಾಗಲಿ ಎಂದಿದ್ದಾರೆ. ಮತ್ತೊಬ್ಬರು, ಕರಾವಳಿ ಎನ್ನುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ