Viral: ಜನ ಹೀಗೂ ಇರ್ತಾರಾ; ಟ್ರೈನ್‌ನಲ್ಲಿ ಬಡ ವ್ಯಾಪಾರಿಯ ಬುಟ್ಟಿಯಲ್ಲಿದ್ದ ಕಾಳುಗಳನ್ನೇ ಕದ್ದು ತಿಂದ ಪ್ರಯಾಣಿಕರು
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ದೃಶ್ಯಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್ ಆಗಿದ್ದು, ಟ್ರೈನ್‌ನಲ್ಲಿ ಮೊಳಕೆಕಾಳು ವ್ಯಾಪಾರ ಮಾಡಲು ಬಂದಿದ್ದ ಬಡ ವ್ಯಾಪಾರಿಯ ಬುಟ್ಟಿಯಿಂದ ಪ್ರಯಾಣಿಕರು ಹಣ ಪಾವತಿ ಮಾಡದೆ ಬೇಕಾಬಿಟ್ಟಿಯಾಗಿ ಮೊಳಕೆ ಕಾಳುಗಳನ್ನು ಎಗರಿಸಿದ್ದು, ಪ್ರಯಾಣಿಕರ ಈ ದುರ್ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಕೆಲವರು ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುತ್ತಿರುತ್ತಾರೆ. ಅಂತಹವರ ಬಳಿ ಹೆಚ್ಚಿನವರು ಚೌಕಾಸಿ ಮಾಡದೆ ವಸ್ತುಗಳನ್ನು ಖರೀದಿ ಮಾಡ್ತಾರೆ. ಆದ್ರೆ ಇಲ್ಲೊಂದು ನಾಚಿಕೆಗೇಡಿನ ಘಟನೆ ನಡೆದಿದ್ದು, ಟ್ರೈನ್‌ನಲ್ಲಿ ಮೊಳಕೆಕಾಳು ವ್ಯಾಪಾರ ಮಾಡಲು ಬಂದಿದ್ದ ಬಡ ವ್ಯಾಪಾರಿಯ ಬುಟ್ಟಿಯಿಂದ ಪ್ರಯಾಣಿಕರು ಹಣ ಪಾವತಿ ಮಾಡದೆ ಬೇಕಾಬಿಟ್ಟಿಯಾಗಿ ಮೊಳಕೆ ಕಾಳುಗಳನ್ನು ಎಗರಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಪ್ರಯಾಣಿಕರ ಈ ದುರ್ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಟ್ರೈನ್‌ನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದ ಕಾರಣ, ಈಗ ಬೋಗಿಯೊಳಗೆ ಹೋದ್ರೆ ಒಳ್ಳೆಯ ವ್ಯಾಪಾರ ಆಗುತ್ತೆ ಎಂದು ಬಡ ವ್ಯಾಪಾರಿಯೊಬ್ಬ್ರು ಮೊಳಕೆಕಾಳುಗಳನ್ನು ಮಾರುತ್ತಾ ರೈಲಿನೊಳಗೆ ಹೋಗಿದ್ದಾರೆ. ಆದ್ರೆ ಅಲ್ಲಿ ಲಜ್ಜೆಗೆಟ್ಟ ಪ್ರಯಾಣಿಕರು ಒಂದು ರೂಪಾಯಿ ಹಣ ಪಾವತಿ ಮಾಡದೆ ವ್ಯಾಪಾರಿಯ ಬುಟ್ಟಿಯೊಳಗಿದ್ದ ಕಾಳುಗಳನ್ನು ಕದ್ದು ತಿಂದಿದ್ದು ಮಾತ್ರವಲ್ಲದೆ ವ್ಯಾಪಾರಿಯ ಅಸಹಾಯಕತೆಯನ್ನು ಕಂಡು ನಕ್ಕಿದ್ದಾರೆ. ಪ್ರಯಾಣಿಕರ ಈ ದುರ್ವರ್ತನೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Sprouts seller got looted in train while the spectators laughed pic.twitter.com/PpB6YdAllK
— Ghar Ke Kalesh (@gharkekalesh) February 18, 2025
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬಡ ವ್ಯಾಪಾರಿಯೊಬ್ಬ ಕಾಳುಗಳನ್ನು ಮಾರುತ್ತಾ ರೈಲಿನೊಳಗೆ ಬರುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ವ್ಯಾಪಾರಿ ರೈಲಿನೊಳಗೆ ಬಂದಾಗ ಅಲ್ಲಿದ್ದ ಪ್ರಯಾಣಿಕರು ಹಣ ಪಾವತಿ ಮಾಡಿ ಕಾಳುಗಳನ್ನು ಕೊಂಡುಕೊಳ್ಳುವ ಬದಲು ಬೇಕಾಬಿಟ್ಟಿಯಾಗಿ ಬುಟ್ಟಿಯೊಳಗೆ ಕೈ ಹಾಕಿ ಹಣ ಕೊಡದೆ ಕಾಳುಗಳನ್ನು ಕದ್ದು ತಿಂದಿದ್ದಾರೆ.
ಇದನ್ನೂ ಓದಿ: ವೇದಿಕೆಯಲ್ಲಿ ಮೈಮರೆತು ನೃತ್ಯ ಮಾಡುತ್ತಿದ್ದ ಪ್ರೇಮಿಗಳು, ಹುಡುಗಿ ಅಣ್ಣನಿಂದ ಯುವಕನಿಗೆ ಕಪಾಳಮೋಕ್ಷ
ಫೆಬ್ರವರಿ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾಚಿಕೆಯಿಲ್ಲದ ಜನ ಪ್ರಾಮಾಣಿಕವಾಗಿ ದುಡಿಯುವ ವ್ಯಕ್ತಿಯನ್ನು ಲೂಟಿ ಮಾಡುತ್ತಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಜನರಿಗೆ ನೈತಿಕ ಮೌಲ್ಯ ಇಲ್ಲದಿದ್ದಾಗ, ರಾಷ್ಟ್ರವೇ ನಾಶವಾಗುತ್ತದೆʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆ ಕದ್ದು ತಿಂದು ನಂತ್ರ ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರ ಆಗುತ್ತೆ ಎಂದು ಇವರೆಲ್ಲಾ ಭಾವಿಸಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




