ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ವಿವಿಧ ರೀತಿಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ಭಾವನಾತ್ಮಕವಾಗಿದ್ದರೆ, ಕೆಲವು ವಿಡಿಯೋಗಳು ನಮಗೆಲ್ಲರಿಗೂ ಜೀವನ ಪಾಠವನ್ನು ಕಲಿಸುವಂತಿರುತ್ತದೆ. ಇನ್ನೂ ಹಲವು ಹಾಸ್ಯಮಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇಂತಹ ದೃಶ್ಯಗಳಂತೂ ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಸದ್ಯ ಅಂತಹದೊಂದು ವಿಡಿಯೋ ವೈರಲ್ ಆಗಿದ್ದು, ಪ್ರಧಾನಿ ಮೋದಿ ಯಾರು ಎಂದು ಪತ್ರಕರ್ತೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಕೊಟ್ಟಂತಹ ಉತ್ತರವನ್ನು ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಖಾಸಗಿ ನ್ಯೂಸ್ ಚಾನೆಲ್ ಒಂದರ ರಿಪೋರ್ಟರ್ ಒಬ್ಬರು ಶಾಲಾ ವಿದ್ಯಾರ್ಥಿಗಳ ಬಳಿ ಜನರಲ್ ನಾಲೆಜ್ ಪ್ರಶ್ನೆಗಳನ್ನು ಕೇಳುತ್ತಿರುವ ದೃಶ್ಯವನ್ನು ಕಾಣಬಹುದು. ವೈರಲ್ ಆಗುತ್ತಿರುವ ಈ ವಿಡಿಯೋವನ್ನು @psyco_rider_143 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಪತ್ರಕರ್ತೆಯೊಬ್ಬರು ಶಾಲಾ ವಿದ್ಯಾರ್ಥಿಗಳ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಿರುವ ದೃಶ್ಯವನ್ನು ನೋಡಬಹುದು. ಮೊದಲಿಗೆ ಆ ಪತ್ರಕರ್ತೆ ವಿದ್ಯಾರ್ಥಿಯೊರ್ವನ ಬಳಿ ಲಾಲು ಪ್ರಸಾದ್ ಯಾದವ್ ಯಾರು ಗೊತ್ತಾ? ಎಂಬ ಪ್ರಶ್ನೆಯನ್ನು ಕೇಳುತ್ತಾರೆ, ಅದಕ್ಕೆ ಆ ಬಾಲಕ ಹಾ.. ಗೊತ್ತಿದೆ ಅನ್ನೋ ಉತ್ತರವನ್ನು ನೀಡುತ್ತಾನೆ. ಬಳಿಕ ಪತ್ರಕರ್ತೆ ಹಾಗಾದ್ರೆ ಅವರು ಯಾರು ಎಂದು ಹೇಳಬಹುದೇ ಎಂದು ಪ್ರಶ್ನೆ ಕೇಳುತ್ತಾರೆ. ಈ ಪ್ರಶ್ನೆಗೆ ಹೇಗೆ ಉತ್ತರಿಸುವುದು ಎಂದು ತಿಳಿಯದ ಆ ವಿದ್ಯಾರ್ಥಿ ನಗುತ್ತಾ, ನಾಚಿಕೆಯಿಂದ ಅಲ್ಲಿಂದ ಹೋಗಿಯೇ ಬಿಡುತ್ತಾನೆ.
ಆ ನಂತರ ರಿಪೋರ್ಟರ್ ವಿದ್ಯಾರ್ಥಿನಿಯೊಬ್ಬಳ ಬಳಿ ನರೇಂದ್ರ ಮೋದಿ ಯಾರು ಎಂಬ ಪ್ರಶ್ನೆಯನ್ನು ಕೇಳುತ್ತಾರೆ, ಅದಕ್ಕೆ ಆ ವಿದ್ಯಾರ್ಥಿನಿ ಬಹಳ ಆತ್ಮವಿಶ್ವಾಸದಿಂದ ಬಿಹಾರದ ಪ್ರಧಾನ ಮಂತ್ರಿ ಎಂದು ಥಟ್ಟನೆ ಉತ್ತರಿಸುತ್ತಾಳೆ. ತಾನು ತಪ್ಪು ಉತ್ತರ ನೀಡಿದ್ದೇನೆ ಎಂದು ಅರಿತ ಆ ಬಾಲಕಿ ತಕ್ಷಣವೇ ಅವರು ಭಾರತದ ಪ್ರಧಾನ ಮಂತ್ರಿ ಎಂಬ ಉತ್ತರವನ್ನು ನೀಡುತ್ತಾಳೆ. ವಿದ್ಯಾರ್ಥಿನಿಯ ಉತ್ತರವನ್ನು ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಇದನ್ನೂ ಓದಿ: ಈ ಹೆಡ್ ಪೋನ್ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 70 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ʼಒಬ್ಬ ಬಳಕೆದಾರರು ಪಾಪ ಆ ಹುಡುಗಿ ಸ್ವಲ್ಪ ನರ್ವಸ್ ಆಗಿ ಮೊದಲಿಗೆ ತಪ್ಪು ಉತ್ತರವನ್ನು ನೀಡಿದ್ದಾಳೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಿಹಾರದ ಶಿಕ್ಷಣ ಉತ್ತಮ ಗುಣಮಟ್ಟದ್ದಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ವಿದ್ಯಾರ್ಥಿಗಳ ಉತ್ತರವನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ