ಶ್ರೀಕಾಕುಳಂ ತೀರದಲ್ಲಿ ಅಪರೂಪದ ಅತಿ ದೊಡ್ಡ ಭಾರೀ ಮೀನು ಪತ್ತೆ, ವಿಡಿಯೋ ವೈರಲ್
ಅಪರೂಪದ ಹಾಗೂ ಬೃಹತ್ ಗಾತ್ರದ ಮೀನು ಆಗಿರುವುದರಿಂದ ಡೊಂಕೂರು ಸುತ್ತಮುತ್ತಲಿನ ಗ್ರಾಮಸ್ಥರು ಮೀನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇಷ್ಟು ದೊಡ್ಡ ಗಾತ್ರದ ಮೀನನ್ನು ನೋಡಿದ ಕೆಲವರು ಫೋಟೋ ತೆಗೆಸಿಕೊಂಡರು. ಶಾಲೆಗೆ ಹೋಗುವ ಮಕ್ಕಳು ಮೀನಿನ ಮೇಲೆ ಹತ್ತಿ ಜಿಗಿದು ಮೋಜು ಮಾಡಿದರು. ವಿಷಯ ತಿಳಿದು ಪಲಾಸ ಕಾಶಿಬುಗ್ಗ ಅರಣ್ಯ ವಲಯದ ಅಧಿಕಾರಿ ಮುರಳಿನಾಯುಡು ಆಗಮಿಸಿ ಸತ್ತ ಮೀನನ್ನು ಪರಿಶೀಲಿಸಿದರು
ಶ್ರೀಕಾಕುಳಂ ಆಂಧ್ರಪ್ರದೇಶ ರಾಜ್ಯದ ಅತಿ ಉದ್ದದ ಕರಾವಳಿಯನ್ನು ಹೊಂದಿರುವ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ 193 ಕಿ.ಮೀ. ಬಂಗಾಳಕೊಲ್ಲಿಯು ಕರಾವಳಿಯುದ್ದಕ್ಕೂ ವ್ಯಾಪಿಸಿದೆ. ಹಾಗಾಗಿಯೇ ಈ ಕರಾವಳಿ ಪ್ರದೇಶದಲ್ಲಿ ಆಗಾಗ ಹಲವು ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಅಪರೂಪದ ಸಮುದ್ರ ಜೀವಿಗಳು ಕಣ್ಮನ ಸೆಳೆಯುತ್ತವೆ. ಇತ್ತೀಚೆಗೆ ಇಚ್ಚಾಪುರ ಮಂಡಲ ಹಾಗೂ ಡೊಂಕೂರು ಕಡಲ ತೀರದಲ್ಲಿ ಅಪರೂಪದ ಬೃಹತ್ ಗಾತ್ರದ ಮೀನು ಕೊಚ್ಚಿಕೊಂಡು ಬಂದಿದೆ. ಅದರೆ ಅದಾಗಲೇ ಸತ್ತಿತ್ತು. ಇದು ಸುಮಾರು 16 ಅಡಿ ಉದ್ದ ಮತ್ತು ಸುಮಾರು 6 ಅಡಿ ಅಗಲವಿದೆ.
ಅಪರೂಪದ ಮೀನಿನ ತೂಕ ಎರಡು ಟನ್ ಎಂದು ಸ್ಥಳೀಯ ಮೀನುಗಾರರು ಅಂದಾಜಿಸಿದ್ದಾರೆ. ಇಷ್ಟೊಂದು ಬೃಹತ್ ಗಾತ್ರದ ಮೀನು ಏಕೆ ಕೊಚ್ಚಿಕೊಂಡು ಬಂತು ಎಂಬುದರ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ಆದರೆ, ಅದು ಆಹಾರದ ಕೊರತೆ ಅಥವಾ ಅನಾರೋಗ್ಯದಿಂದ ಸಾವನ್ನಪ್ಪಿರಬಹುದು ಅಥವಾ ಸಮುದ್ರದಲ್ಲಿ ಭಾರವಾದ ದೋಣಿಗಳು ಹಾದುಹೋದಾಗ ಗಾಯಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಮೀನನ್ನು ಪುಲಿ ಬಗ್ಗು ಪೊರ್ರ ಮೀನು ಎಂದು ಕರೆಯುತ್ತಾರೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು.
ಮೀನು ನೋಡಲು ಮುಗಿಬಿದ್ದರು ಸ್ಥಳೀಯರು ಅಪರೂಪದ ಹಾಗೂ ಬೃಹತ್ ಗಾತ್ರದ ಮೀನು ಆಗಿರುವುದರಿಂದ ಡೊಂಕೂರು ಸುತ್ತಮುತ್ತಲಿನ ಗ್ರಾಮಸ್ಥರು ಮೀನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇಷ್ಟು ದೊಡ್ಡ ಗಾತ್ರದ ಮೀನನ್ನು ನೋಡಿದ ಕೆಲವರು ಫೋಟೋ ತೆಗೆಸಿಕೊಂಡರು. ಶಾಲೆಗೆ ಹೋಗುವ ಮಕ್ಕಳು ಮೀನಿನ ಮೇಲೆ ಹತ್ತಿ ಜಿಗಿದು ಮೋಜು ಮಾಡಿದರು. ವಿಷಯ ತಿಳಿದು ಪಲಾಸ ಕಾಶಿಬುಗ್ಗ ಅರಣ್ಯ ವಲಯದ ಅಧಿಕಾರಿ ಮುರಳಿನಾಯುಡು ಆಗಮಿಸಿ ಸತ್ತ ಮೀನನ್ನು ಪರಿಶೀಲಿಸಿದರು. ಸತ್ತ ಮೀನಿನ ಮರಣೋತ್ತರ ಪರೀಕ್ಷೆ ನಡೆಸಿ ಸಮುದ್ರ ತೀರದಲ್ಲಿ ಹೂಳಲಾಯಿತು.
ಇದನ್ನೂ ಓದಿ: ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಶ್ವಾಸಕೋಶದಲ್ಲಿ ಜಿರಳೆ ಪತ್ತೆ
ಈ ಹಿಂದೆಯೂ ದಡಕ್ಕೆ ಬಂದ ಬೃಹತ್ ಮೀನುಗಳು ಈ ಹಿಂದೆಯೂ ಸಿಕ್ಕೋಳು ದಡದಲ್ಲಿ ಭಾರಿ ಗಾತ್ರದ ಮೀನುಗಳು ಕೊಚ್ಚಿಬಂದ ಪ್ರಕರಣಗಳು ನಡೆದಿವೆ. 2022ರ ಎಪ್ರಿಲ್‌ನಲ್ಲಿ ಸಂತಬೊಮ್ಮಾಲಿ ಮಂಡಲದ ಎಂ. ಸುನ್ನಪಲ್ಲಿ ಗ್ರಾಮದಲ್ಲಿ 2022ರ ಮೇ ತಿಂಗಳಲ್ಲಿ ಬೃಹತ್ ಮೀನು ಕೊಚ್ಚಿಕೊಂಡು ಬಂದಿತ್ತು. 2023ರಲ್ಲಿ ವಜ್ರಪು ಕೊತ್ತೂರು ಮಂಡಲದ ಕಡಲತೀರಕ್ಕೆ ಮತ್ತೊಂದು ಮೀನು ಈಜಿಕೊಂಡು ಮರಳು ದಿಬ್ಬಗಳಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರು ಅದನ್ನು ಸಮುದ್ರ ತೀರಕ್ಕೆ ತಳ್ಳಿದ್ದರು. ನಿಧಾನವಾಗಿ ಅದು ಸಮುದ್ರದ ನೀರನ್ನು ತಲುಪಿಕೊಂಡಿತ್ತು. 2022 ರಲ್ಲಿ, ಚಿನ್ನದ ಬಣ್ಣದ ರಥವು ಸಂತಬೊಮ್ಮಾಲಿ ಮಂಡಲದ ಕಡಲತೀರವನ್ನು ತಲುಪಿದ ಸಂದರ್ಭವನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ