AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Super Worm Moon 2021: ಇಂದು ಮತ್ತು ನಾಳೆ ರಾತ್ರಿ ಪ್ರಕಾಶಮಾನ, ಪೂರ್ಣಪ್ರಮಾಣದ ಚಂದ್ರನನ್ನು ನೋಡಲು ತಪ್ಪಿಸಿಕೊಳ್ಳಬೇಡಿ

ವಸಂತ ಮಾಸದ ಆಗಮನವಾಗಿದೆ. ಇದೇ ಸಮಯದಲ್ಲಿ ಚಂದ್ರ ಸಂಪೂರ್ಣ ಸ್ವರೂಪ ದರ್ಶನವಾಗುತ್ತಿದೆ. ಅಲ್ಲದೇ ಎಂದಿಗಿಂತ ಹೆಚ್ಚು ಪ್ರಕಾಶಮಾನವಾಗಿಯೂ ಚಂದ್ರ ಗೋಚರಿಸಲಿದ್ದಾನೆ. ಹೀಗಾಗಿ ಚಂದ್ರ ದರ್ಶನ ಮಾಡುವ ಅನುಭವ ಮುದ ನೀಡುವುದಂತೂ ಖಚಿತ .

Super Worm Moon 2021: ಇಂದು ಮತ್ತು ನಾಳೆ ರಾತ್ರಿ ಪ್ರಕಾಶಮಾನ, ಪೂರ್ಣಪ್ರಮಾಣದ ಚಂದ್ರನನ್ನು ನೋಡಲು ತಪ್ಪಿಸಿಕೊಳ್ಳಬೇಡಿ
ಸಾಂದರ್ಭಿಕ ಚಿತ್ರ
guruganesh bhat
| Edited By: |

Updated on: Mar 28, 2021 | 9:48 PM

Share

ಬಾಹ್ಯಾಕಾಶದಲ್ಲಿ ಮಹತ್ವದ ವಿದ್ಯಮಾನವೊಂದನ್ನು ವೀಕ್ಷಿಸಲು ಇನ್ನೊಂದು ದಿನಗಳ ಅವಕಾಶ ಮಾತ್ರವಷ್ಟೇ ಇದೆ. ನಿನ್ನೆ (ಮಾರ್ಚ್ 27) ಯಿಂದ ಚಂದ್ರ ಅತ್ಯಂತ ಪ್ರಕಾಶಮಾನವಾಗಿಯೂ, ಪೂರ್ಣಪ್ರಮಾಣದಲ್ಲಿಯೂ ಕಾಣಿಸುತ್ತಾನೆ. ಸುಂದರ ಚಂದ್ರ ಈ ಸ್ವರೂಪವನ್ನು ಇಂದು ಮತ್ತು ನಾಳೆ ರಾತ್ರಿ, ಹೆಚ್ಚೆಂದರೆ ಬುಧವಾರದ ಬೆಳಗು ಜಾವದವರೆಗೆ (ಮಾರ್ಚ್ 28, 29ರ ರಾತ್ರಿ ಮತ್ತು ಮಾರ್ಚ್ 30ರ ಬೆಳಗಿನ ಜಾವ) ಮಾತ್ರ ವೀಕ್ಷಿಸಬಹುದಾಗಿದೆ. ಈ ಕುರಿತು ನಾಸಾ ತನ್ನ ವೆಬ್​ಸೈಟ್​ನಲ್ಲಿ ಬರೆದುಕೊಂಡಿದೆ.

ಪೂರ್ವ ಆಕಾಶದಲ್ಲಿ ಭಾನುವಾರ ರಾತ್ರಿ ಚಂದ್ರನು ತನ್ನ ಪೂರ್ಣ ಮತ್ತು ಪ್ರಕಾಶಮಾನವಾಗಿರುತ್ತಾನೆ, ಶನಿವಾರ ಬೆಳಿಗ್ಗೆಯಿಂದ ಸೋಮವಾರ ರಾತ್ರಿಯವರೆಗೆ ಮಂಗಳವಾರ ಮುಂಜಾನೆ ಸುಮಾರು ಮೂರು ದಿನಗಳವರೆಗೆ ಚಂದ್ರನು ಪೂರ್ಣವಾಗಿ ಕಾಣಿಸಿಕೊಳ್ಳುತ್ತಾನೆ. ಅಲ್ಲದೇ ಉತ್ತರ ಭಾರತದ ಹಲವೆಡೆ ಈ ಸಮಯದಲ್ಲಿ ಹೋಳಿ ಹಬ್ಬದ ಚಂದ್ರ ಎಂದು ಕರೆಯುವ ಪದ್ಧತಿಯೂ ಜನಸಾಮಾನ್ಯರಲ್ಲಿದೆ.

ಸಹಜವಾಗಿ ಈ ಚಂದಿರನೂ ಒಂದು ಬಗೆಯ ಸೂಪರ್ ಮೂನ್ ಆಗಿದ್ದಾನೆ. ಈ ಸಮಯದಲ್ಲಿ ಚಂದಿರನ ಪ್ರಕಾಶಮಾನ ಶೇ 30ರಷ್ಟು ಹೆಚ್ಚಿರುತ್ತದೆ. ಅಲ್ಲದೇ ಗಾತ್ರದಲ್ಲೂ ಶೇ 12ರಷ್ಟು ಹೆಚ್ಚು ದೊಡ್ಡದಾಗಿ ಚಂದ್ರ ಕಾಣಿಸುತ್ತಾನೆ.

ವಸಂತ ಮಾಸದ ಆಗಮನವಾಗಿದೆ. ಇದೇ ಸಮಯದಲ್ಲಿ ಚಂದ್ರ ಸಂಪೂರ್ಣ ಸ್ವರೂಪ ದರ್ಶನವಾಗುತ್ತಿದೆ. ಅಲ್ಲದೇ ಎಂದಿಗಿಂತ ಹೆಚ್ಚು ಪ್ರಕಾಶಮಾನವಾಗಿಯೂ ಚಂದ್ರ ಗೋಚರಿಸಲಿದ್ದಾನೆ. ಹೀಗಾಗಿ ಚಂದ್ರ ದರ್ಶನ ಮಾಡುವ ಅನುಭವ ಮುದ ನೀಡುವುದಂತೂ ಖಚಿತ .

ಇದನ್ನೂ ಓದಿ: ‘ಚಂದ್ರಲೋಕಕ್ಕೆ ಪ್ರವಾಸ.. ಮನೆಗೊಂದು ಸಣ್ಣ ಹೆಲಿಕಾಪ್ಟರ್​’ -ತಮಿಳುನಾಡಿನ ಅಭ್ಯರ್ಥಿಯ ಚುನಾವಣಾ ಪ್ರಣಾಳಿಕೆಗಳಿವು ; ಇದರಲ್ಲಿದೆ ಒಂದು ​ಟ್ವಿಸ್ಟ್

ಹತ್ತರೀ ಸಾಧನಕೇರಿ ಬಸ್: ಸೂರ್ಯ ಮುಳುಗುವ ಮುನ್ನ ಓಡೋಡಿ ಬರುವ ಜನ, ಕೈ ಮುಗಿವ ಹಾಗೆ ಮುಳುಗಲ್ಲಿ ಮುಳುಗಿ…

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ