
ಬೆಂಗಳೂರು, ಚೆನ್ನೈನಂತಹ ಮಹಾನಗರಗಳಲ್ಲಿ ಬಾಡಿಗೆಗೆ ಮನೆ ಸಿಗುವುದೇ ಕಷ್ಟ, ಅದರಲ್ಲೂ ಬ್ಯಾಚುಲರ್ಗೆ ಬಾಡಿಗೆ ಮನೆ ನೀಡಲು ಹಿಂದು-ಮುಂದು ನೋಡುತ್ತಾರೆ. ಆದರೆ ಇದೀಗ ಮತ್ತೊಂದು ವಿಚಾರಕ್ಕೆ ಬಾಡಿಗೆ ನೀಡುವವರು ಕಿರಿಕ್ ಮಾಡುತ್ತಿದ್ದಾರೆ ಎಂದು ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಹೌದು ಮಾಂಸಹಾರಿಗಳಿಗೆ (food-based discrimination) ಬಾಡಿಗೆ ಮನೆ ನೀಡುತ್ತಿಲ್ಲ. ಇದರಿಂದ ಅದೆಷ್ಟು ಮಾಂಸಹಾರಿಗಳಿಗೆ ಬಾಡಿಗೆ ಮನೆ ಸಿಗದೇ ಕಷ್ಟಪಡುತ್ತಿದ್ದಾರೆ. 90%ದಷ್ಟು ಮನೆ ಬಾಡಿಗೆ ನೀಡುವವರು ಈ ವಿಚಾರವೊಂದು ಕೇಳಿ ಕೇಳುತ್ತಾರೆ ಎಂದು ಈ ವೈರಲ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್ ಖಾತೆಯಲ್ಲಿ ಚೆನ್ನೈ ನಿವಾಸಿ ಪ್ರಶಾಂತ್ ರಂಗಸ್ವಾಮಿ ಎಂಬುವವರು, ಮನೆ ಮಾಲೀಕರಿಂದ ಬಂದ ಸಂದೇಶದ ಸ್ಕ್ರೀನ್‌ಶಾಟ್‌ನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಹೀಗಿದೆ ನೋಡಿ: “ಕ್ಷಮಿಸಿ ಸರ್. ಸಸ್ಯಾಹಾರಿ ಕುಟುಂಬಗಳನ್ನು ಮಾತ್ರ ನೋಡುತ್ತಿದ್ದೇನೆ” ಎಂದು ಮನೆ ಮಾಲೀಕರ ಸಂದೇಶ ಹಾಕಿದ್ದಾರೆ. ಮಾಂಸಹಾರಿಗಳು ಚೆನ್ನೈನಲ್ಲಿ ಬಾಡಿಗೆಗೆ ಫ್ಲಾಟ್‌ಗಳನ್ನು ಹುಡುಕಲು ತುಂಬಾ ಕಷ್ಟ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ದೊಡ್ಡ, ದೊಡ್ಡ ನಗರಗಳಲ್ಲಿ ಆಹಾರ ಆಧಾರಿತವಾಗಿ ತಾರತಮ್ಯ ಮಾಡುವ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಅನೇಕ ಕಡೆಯಲ್ಲಿ ಇಂತಹ ಘಟನೆಗಳು ನಡೆದಿದೆ. ಇದೀಗ ಈ ಒಂದು ವಿಚಾರ ವೈರಲ್ ಆಗಿದೆ. ಇಂತಹ ತಾರತಮ್ಯವನ್ನು ಮೊದಲು ನಿಲ್ಲಿಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಿದ್ದಾರೆ. ಕೆಲವು ಬಳಕೆದಾರರು ಈ ಪದ್ಧತಿಯನ್ನು ಖಂಡನೆ ಮಾಡಿದ್ದಾರೆ. ಜಾತಿ ಅಥವಾ ಧರ್ಮದ ಆಧಾರದ ಮೇಲೆ ಬಾಡಿಗೆದಾರರನ್ನು ತಿರಸ್ಕರಿಸುವ ಜನರು ಕಡಿಮೆ. ಇನ್ನು ಇದರಲ್ಲಿ ನೀವು ಮುಸ್ಲಿಮರಾಗಿದ್ದರೆ, ಕ್ಷಮಿಸಿ, ನಾವು ಮುಸ್ಲಿಮರಿಗೆ ಬಾಡಿಗೆಗೆ ನೀಡುವುದಿಲ್ಲ ಎಂಬ ಘಟನೆಗಳು ಕೂಡ ನಡೆದಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾಷೆ, ಮೈಬಣ್ಣ ನೋಡಿ ಉತ್ತರ ಭಾರತದವರು ಎಂದು ತಪ್ಪಾಗಿ ಭಾವಿಸುತ್ತಾರೆ, ಹೊಸ ಚರ್ಚೆಗೆ ಕಾರಣವಾಯಿತು ಈ ಪೋಸ್ಟ್
Eating non veg is injurious to finding flats for rent in Chennai . pic.twitter.com/MyWWYuJ0vB
— Prashanth Rangaswamy (@itisprashanth) June 26, 2025
ಇನ್ನು ಕೆಲವರು ಈ ಪೋಸ್ಟ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಾಡಿಗೆ ಯಾರಿಗೆ ನೀಡಬೇಕು ಎನ್ನುವುದು ಮಾಲೀಕರಿಗೆ ಗೊತ್ತು, ಅವರ ಆಸ್ತಿ, ಅದನ್ನು ಯಾರಿಗೂ ಬೇಕಾದರೂ ನೀಡಬಹುದು ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬ ಬಳಕೆದಾರ, ಅವರ ಮನೆ, ಅವರ ನಿಯಮಗಳು ಇರುತ್ತದೆ. ಬೇಕಾದರೆ ನೀವು ಸ್ವಂತ ಮನೆ ಖರೀದಿಸಿ, ವಾಸ ಮಾಡಿ ಎಂದು ಖಾರವಾಗಿ ಹೇಳಿದ್ದಾರೆ. ಮಾಂಸದ ವಾಸನೆಯು ದೈಹಿಕವಾಗಿ ಅಸ್ವಸ್ಥರನ್ನಾಗಿ ಮಾಡುತ್ತದೆ ಎಂದು ಸಸ್ಯಾಹಾರಿಗಳು ಹೇಳುತ್ತಾರೆ. ಮಾಂಸದ ವಾಸನೆಗಳನ್ನು ಪಕ್ಕದಲ್ಲಿದ್ದವರು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನೀವು ಒಂದು ಭೂಮಿ ಅಥವಾ ಮನೆಯನ್ನು ತೆಗೆದುಕೊಂಡು ನೋಡಿ, ಆಗಾ ನಿಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. ಆಹಾರ ಆದ್ಯತೆಗಳನ್ನು ಜಾತಿ ಆಧಾರಿತವಾಗಿ ಹೊರಗಿಡಬೇಡಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ