Viral: ಈಚಲು ಮರದ ಮೇಲೆ ಕುಳಿತು ಶೇಂದಿ ಸವಿದ ಗಿಣಿ ಕುಟುಂಬ

ಗಿಣಿಗಳು ಮನುಷ್ಯರಂತೆಯೇ ಸಂಭಾಷಣೆ ನಡೆಸುವ ದೃಶ್ಯವನ್ನು ನೋಡಿರುತ್ತೀರಿ ಅಲ್ವಾ. ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿಯೂ ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತಿರುತ್ತವೆ. ಆದ್ರೆ ಇಲ್ಲೊಂದು ಗಿಳಿಗಳ ಕುಟುಂಬ ಮನುಷ್ಯರಂತೆ ಮಾತನಾಡುವುದು ಮಾತ್ರವಲ್ಲ ಮನುಷ್ಯರಂತೆ ಶೇಂದಿ ಸೇವಿಸಲು ಕಲಿತಿದೆ. ಹೌದು ಪ್ರತಿನಿತ್ಯ ಬೆಳಗ್ಗೆ ಈಚಲು ಮತ್ತು ತಾಳೆ ಮರದ ಬಳಿ ಬರುವ ಈ ಗಿಳಿಗಳು ಶೇಂದಿ ಸವಿದು ಹೋಗುತ್ತಿವೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿವೆ.

Viral: ಈಚಲು ಮರದ ಮೇಲೆ ಕುಳಿತು ಶೇಂದಿ ಸವಿದ ಗಿಣಿ ಕುಟುಂಬ
ವೈರಲ್​ ಪೋಸ್ಟ್
Edited By:

Updated on: Dec 30, 2024 | 4:12 PM

ಗಿಳಿಗಳು ತುಂಬಾನೇ ಬುದ್ಧಿವಂತ ಪಕ್ಷಿಗಳು. ಅವುಗಳು ಮನುಷ್ಯರಂತೆಯೇ ಮಾತನಾಡಬಲ್ಲವು. ಇಂತಹ ಸಾಕಷ್ಟು ಉಲ್ಲಾಸದಾಯಕ ದೃಶ್ಯವನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ಖತರ್ನಾಕ್‌ ಗಿಳಿಗಳು ನಾವು ಮನುಷ್ಯರಂತೆ ಮಾತನಾಡುವುದು ಮಾತ್ರವಲ್ಲ, ನಾವು ಅವರಂತೆಯೇ ಶೇಂದಿ ಕೂಡಾ ಕುಡಿಯಬಲ್ಲೆವು ಎನ್ನುತ್ತಾ ಈಚಲು ಮರದಿಂದ ಫ್ರೆಶ್‌ ಶೇಂದಿ ಕುಡಿದು ಸಂಭ್ರಮಿಸಿವೆ. ಹೌದು ಪ್ರತಿನಿತ್ಯ ಬೆಳಗ್ಗೆ ಈಚಲು ಮತ್ತು ತಾಳೆ ಮರದ ಬಳಿ ಬರುವ ಈ ಗಿಳಿಗಳು ಶೇಂದಿ ಸವಿದು ಹೋಗುತ್ತಿವೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿವೆ.

ಈ ಘಟನೆ ತೆಲಂಗಾಣದ ರಾಮ ಚಿಲುಕ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್‌ನಲ್ಲಿ ನಡೆದಿದ್ದು, ಇಲ್ಲಿನ ಯಾದವ ನಗರದ ಬಳಿಯಿರುವ ಈಚಲು ಮತ್ತು ತಾಳೆ ಮರದ ಹತ್ತಿರ ಬರುವ ಗಿಳಿಗಳು ಮರದ ಮೇಲೆ ಕಟ್ಟಿರುವ ಮಡಕೆಯಿಂದ ಶೇಂದಿ ಕುಡಿದು ಹೋಗುತ್ತಿವೆ. ಒಂದು ಪ್ರತಿದಿನ ಬೆಳಗ್ಗೆ ಗುಂಪುಗುಂಪಾಗಿ ಬರುವ ಈ ಗಿಳಿಗಳು ಸಿಹಿಯಾದ ಶೇಂದಿ ಕುಡಿದು ಹೋಗುತ್ತಿದೆಯಂತೆ. ಹೀಗೆ ಗಿಣಿಗಳು ಶೇಂದಿ ಕುಡಿಯುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ ಫೋನಿನಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ