Viral: ಕಡಲ ತೀರದಲ್ಲಿ ಕುಳಿತು ಯೋಗ ಮಾಡುತ್ತಿದ್ದ ವೇಳೆ ಅಪ್ಪಳಿಸಿದ ಅಲೆ; ನೀರಲ್ಲಿ ಕೊಚ್ಚಿ ಹೋದ ನಟಿ

ಇಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ರಷ್ಯಾ ಮೂಲದ ನಟಿಯೊಬ್ಬಳು ಸಮುದ್ರ ತಟದಲ್ಲಿರುವ ಬಂಡೆಯ ಮೇಲೆ ಕುಳಿತು ಯೋಗಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಅಲೆಯೊಂದು ಅಪ್ಪಳಿಸಿದ್ದು, ಆ ಅಲೆಯ ಅಬ್ಬರಕ್ಕೆ ಕೊಚ್ಚಿ ಹೋಗಿ ನಟಿ ದುರಂತ ಅಂತ್ಯ ಕಂಡಿದ್ದಾಳೆ. ಈ ಕುರಿತ ಆಘಾತಕಾರಿ ವಿಡಿಯೋವೊಂದು ವೈರಲ್‌ ಆಗಿದ್ದು, ನಟಿ ನೀರಲ್ಲಿ ಕೊಚ್ಚಿ ಹೋದ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.

Viral: ಕಡಲ ತೀರದಲ್ಲಿ ಕುಳಿತು ಯೋಗ ಮಾಡುತ್ತಿದ್ದ ವೇಳೆ ಅಪ್ಪಳಿಸಿದ ಅಲೆ; ನೀರಲ್ಲಿ ಕೊಚ್ಚಿ ಹೋದ ನಟಿ
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Dec 03, 2024 | 11:47 AM

ಸಮುದ್ರ ತೀರದಲ್ಲಿ ಎಷ್ಟು ಜೋಪಾನವಾಗಿದ್ದರೂ ಕಮ್ಮಿಯೇ. ಕೆಲವೊಂದು ಬಾರಿ ಶಾಂತ ರೀತಿಯಲ್ಲಿರುವ ಸಮುದ್ರ ಇದ್ದಕ್ಕಿದ್ದಂತೆ ರೌದ್ರ ರೂಪವನ್ನೇ ತಾಳುತ್ತವೆ. ಇದೇ ಕಾರಣಕ್ಕೆ ಕಡಲ ತೀರಗಳಲ್ಲಿ ಬಹಳ ಜೋಪಾನವಾಗಿ ಇರಬೇಕಾಗುತ್ತದೆ. ಹೀಗೆ ನೀರಿಗಿಳಿದ ಸಂದರ್ಭದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾದವರು ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ರಷ್ಯಾ ಮೂಲದ ನಟಿಯೊಬ್ಬಳು ಸಮುದ್ರ ತಟದಲ್ಲಿರುವ ಬಂಡೆಯ ಮೇಲೆ ಕುಳಿತು ಯೋಗಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಅಲೆಯೊಂದು ಅಪ್ಪಳಿಸಿದ್ದು, ಆ ಅಲೆಯ ಅಬ್ಬರಕ್ಕೆ ಕೊಚ್ಚಿ ಹೋಗಿ ನಟಿ ದುರಂತ ಅಂತ್ಯ ಕಂಡಿದ್ದಾಳೆ. ಈ ಕುರಿತ ಆಘಾತಕಾರಿ ವಿಡಿಯೋವೊಂದು ವೈರಲ್‌ ಆಗಿದ್ದು, ನಟಿ ನೀರಲ್ಲಿ ಕೊಚ್ಚಿ ಹೋದ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.

ಈ ಆಘಾತಕಾರಿ ಘಟನೆ ಥಾಯ್ಲೆಂಡ್‌ನ ಕೊಹ್‌ ಸಮುದ್ರ ತೀರದಲ್ಲಿ ನಡೆದಿದ್ದು, ಬಂಡೆಯ ಮೇಲೆ ಕುಳಿತು ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಅಲೆಯ ಹೊಡೆತಕ್ಕೆ ಸಿಲುಕಿ ರಷ್ಯಾ ಮೂಲದ ನಟಿಯೊಬ್ಬಳು ನೀರಲ್ಲಿ ಕೊಚ್ಚಿ ಹೋಗಿ ದುರಂತ ಅಂತ್ಯವನ್ನು ಕಂಡಿದ್ದಾಳೆ.

ರಷ್ಯಾದ ನೊವೊಬಿರ್ಸ್ಕ್‌ನ 24 ವರ್ಷ ನಟಿ ಕಮಿಲ್ಲಾ ಬೆಲ್ಯಾಟ್ಸ್ಕಯಾ ತನ್ನ ಗೆಳೆಯನೊಂದಿಗೆ ಥಾಯ್ಲೆಂಡ್‌ಗೆ ಪ್ರವಾಸ ಬಂದಿದ್ದು, ನವೆಂಬರ್‌ 29 ರಂದು ಪ್ರಶಾಂತವಾದ ಕಡಲ ತೀರದಲ್ಲಿರುವ ಬಂಡೆಯ ಮೇಲೆ ಕುಳಿತು ಆಕೆ ಧ್ಯಾನ ಮತ್ತು ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಬಂಡೆಯ ಮೇಲೆ ಜೋರಾಗಿ ಅಲೆಯೊಂದು ಅಪ್ಪಳಿಸಿದೆ. ಆ ಅಲೆಯ ರಭಸಕ್ಕೆ ನಟಿ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ. ಬಳಿಕ ರಕ್ಷಣಾ ತಂಡ ಸ್ಥಳಕ್ಕಾಗಮಿಸಿ ಆಕೆಯನ್ನು ಹುಡುಕುವ ಪ್ರಯತ್ನವನ್ನು ಮಾಡಿದ್ದು, ಇದು ಯಾವುದೇ ಫಲವನ್ನು ನೀಡಲಿಲ್ಲ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

South of Vietnam ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ರಷ್ಯಾ ಮೂಲದ ನಟಿ ಸಮುದ್ರ ತೀರದ ಬಂಡೆಯ ಮೇಲೆ ಕುಳಿತು ಯೋಗಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರಪಾಲಾದಂತಹ ಭಯಾನಕ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಇಲ್ಲಿ ಬಾಡಿಗೆಗೆ ಸಿಕ್ತಾರಂತೆ ಬಾಯ್​ಪ್ರೆಂಡ್ಸ್​, ಅಡುಗೆಯಿಂದ ಹಿಡಿದು ಪೋಷಕರನ್ನು ಇಂಪ್ರೆಸ್ ಮಾಡುವುದರಲ್ಲೂ ಎತ್ತಿದ ಕೈ

ಡಿಸೆಂಬರ್‌ 2 ರಂದು ಹಂಚಿಕೊಳ್ಳಲಾದ ಈ ವಿಡಿಯೋ 22 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ʼನಿಜಕ್ಕೂ ಈ ದೃಶ್ಯವನ್ನು ನೋಡಿದ್ರೆ ತುಂಬಾನೇ ಭಯ ಆಗುತ್ತೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಕೆಯ ಕುಟುಂಬ ಮತ್ತು ಗೆಳಯನಿಗೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ