Video : ಎಷ್ಟು ಚಂದ ನೋಡಿ, ಮದುವೆ ಸಮಾರಂಭದಲ್ಲಿ ಹರಿನಾಮ ಸಂಕೀರ್ತನೆಯ ಸೊಬಗು

ಭಾರತೀಯ ಮದುವೆಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಆವರಿಸಿಕೊಂಡು ಬಿಟ್ಟಿದೆ. ಇತ್ತೀಚೆಗಿನ ದಿನಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮದುವೆಯ ಶಾಸ್ತ್ರ ಸಂಪ್ರದಾಯವನ್ನು ಬದಲಾವಣೆ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು.ಆದರೆ ಇದೀಗ ಈ ಮದುವೆಯೂ ತನ್ನ ವಿಶಿಷ್ಟತೆಯಿಂದಲೇ ಎಲ್ಲರ ಗಮನ ಸೆಳೆದಿದೆ. ಹೌದು, ಮದುವೆಯಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗಾಯಕರೊಬ್ಬರು ಸಿನಿಮಾ ಹಾಡುಗಳ ಬದಲಿಗೆ ಹರಿನಾಮ ಸಂಕೀರ್ತನೆಯನ್ನು ಹಾಡಿದ್ದಾರೆ. ಈ ಅಪರೂಪದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈ ವಿಡಿಯೋ ಮೆಚ್ಚುಗೆಗೆ ಪಾತ್ರವಾಗಿದೆ.

ಮದುವೆ (marriage) ಅಂದ್ರೆನೇ ಒಂಥರಾ ಸಂಭ್ರಮ. ಫ್ಯಾಮಿಲಿ, ಫ್ರೆಂಡ್ಸ್‌ ಎಲ್ಲರೂ ಜೊತೆ ಸೇರಿ ಹಾಡು ಕುಣಿತ, ಮೋಜಿ ಮಸ್ತಿ ಮಾಡುತ್ತಾ ಸಂಭ್ರಮಿಸುತ್ತಾರೆ.ಈಗಂತೂ ಮದುವೆಯಲ್ಲಿ ಸಂಗೀತ್, ಮೆಹಂದಿ ಹೀಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುವ ಮೂಲಕ ವಿವಿಧ ರೀತಿ ಕಾರ್ಯಕ್ರಮಗಳನ್ನು ಆಯೋಜಿಸುವುದಿದೆ. ಅಷ್ಟೇ ಅಲ್ಲದೇ, ಈಗಿನ ಮದುವೆಗಳಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮ (orchestra program) ಇರಲೇಬೇಕು ಎನ್ನುವಂತಾಗಿದೆ. ಈ ಕಾರ್ಯಕ್ರಮದಲ್ಲಿಯೂ ಸಿನಿಮಾ ಹಾಡುಗಳದ್ದೇ ಕಾರುಬಾರು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಸಮಾರಂಭವೊಂದರಲ್ಲಿ ಗಾಯಕರೊಬ್ಬರು ಸಿನಿಮಾ ಹಾಡುಗಳ ಬದಲಿಗೆ ಹರಿನಾಮ ಸಂಕೀರ್ತನೆ (harinam sankirtan)ಯನ್ನು ಅದ್ಭುತವಾಗಿ ಹಾಡಿದ್ದಾರೆ. ಇವರೊಂದಿಗೆ ಬಂದ ಅತಿಥಿ ಬಾಂಧವರು ಕೂಡ ಧ್ವನಿ ಸೇರಿಸಿದ್ದಾರೆ.ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮೆಚ್ಚುಗೆಯ ಪ್ರತಿಕ್ರಿಯೆಗಳ ಮೂಲಕ ಕಾಮೆಂಟ್ ಮಾಡಿದ್ದಾರೆ.

Jagadish puttur ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ ಸನಾತನ ಧರ್ಮ ಸಂಸ್ಕೃತಿಯನ್ನು ನಾವೇ ಉಳಿಸಿ ಬೆಳೆಸಬೇಕು ಇಂದು ನಡೆದ ಚಿ. ಸಚಿನ್ ಶೆಟ್ಟಿ ಮತ್ತು ದಿಶಾ ಶೆಟ್ಟಿ ರವರ ಮದುವೆ ಕಾರ್ಯಕ್ರಮದಲ್ಲಿ ಎಷ್ಟು ಸುಂದರ ನೋಡಿ ಹರಿನಾಮ ಸಂಕೀರ್ತನೆ. ಇದು ನವ ಜೋಡಿ, ವಧು ವರರಿಗೆ ಸೇರಿದ ಬಂಧು ಮಿತ್ರರು ಆಶೀರ್ವಾದ ಮಾಡಿದಂತೆ. ಇಂತ ಸಂಸ್ಕಾರ ಭರಿತ ಕಾರ್ಯಕ್ರಮಗಳು ನಮ್ಮ ಮನೇ ಮನೆಯ ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಸಂಸ್ಕಾರಯುತವಾಗಿ ನಡೀಬೇಕು.ನಾವು ಹಿರಿಯರು ಕಿರಿಯರು. ಅದನ್ನು ಈಗ ಬೆಳೆಸಿದರೆ. ನಮ್ಮ ಮುಂದಿನ ಪೀಳಿಗೆ ಮಕ್ಕಳು ಅನುಸರಿಸಿ ಅದನ್ನು ಬೆಳೆಸ್ತಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ : ಇದನ್ನೂ ಓದಿ : ಮದ್ವೆಯಾಗದಿದ್ರೆ ನಷ್ಟಕ್ಕಿಂತ ಲಾಭವೇ ಹೆಚ್ಚಂತೆ, ವೈರಲ್ ಆಯ್ತು ಮಹಿಳೆಯ ಪೋಸ್ಟ್

ಇದನ್ನೂ ಓದಿ
ಅಪ್ಪನಿಗೆ ನೆರಳಾದ ಮುದ್ದಿನ ಮಗಳು
ನಮ್ಮ ಜನರೇಷನ್‌ ಲಕ್ಕಿ ಎನ್ನಲು ಇವೆ ಕಾರಣ ನೋಡಿ
ಆರ್‌ಸಿಬಿ ಗೆದ್ದ ಖುಷಿಗೆ ಪಬ್ಲಿಕ್‌ನಲ್ಲಿ ಕಿಸ್ ಮಾಡಿದ ಪ್ರೇಮಿಗಳು
ಪ್ಲೀಸ್ ನನ್ನ ಬಿಟ್ಟೋಗ್ಬೇಡ, ನಿನ್ನ ಜತೆ ನಾನು ಬರ್ತೀನಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಮದುವೆ ಸಮಾರಂಭದಲ್ಲಿ ಆರ್ಕೆಸ್ಟ್ರಾ ಆಯೋಜಿಸಲಾಗಿರುವುದನ್ನು ನೋಡಬಹುದು. ಈ ಕಾರ್ಯಕ್ರಮದಲ್ಲಿ ಗಾಯಕರೊಬ್ಬರು ಸಿನಿಮಾ ಹಾಡುಗಳ ಬದಲಿಗೆ ಹರಿನಾಮ ಕೀರ್ತನೆಯನ್ನು ತಮ್ಮ ಅದ್ಭುತ ಕಂಠಸಿರಿಯಲ್ಲಿ ಹಾಡುತ್ತಿರುವುದನ್ನು ನೋಡಬಹುದು. ಮದುವೆಗೆ ಬಂದ ಅತಿಥಿ ಬಾಂಧವರು ಚಪ್ಪಾಳೆ ತಟ್ಟುತ್ತಾ ಗಾಯಕರೊಂದಿಗೆ ಧ್ವನಿಗೂಡಿಸಿರುವುದನ್ನು ಈ ಸಮಾರಂಭವನ್ನು ಮತ್ತಷ್ಟು ಸೊಗಸಾಗಿಸಿದೆ. ಈ ವಿಡಿಯೋವೊಂದು 3.7 ಕೆ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸುವ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದಿದ್ದಾರೆ.

ಬಳಕೆದಾರರ ಕಾಮೆಂಟ್‌ಗಳು ಹೀಗಿವೆ

ಬಳಕೆದಾರರೊಬ್ಬರು, ಒಳ್ಳೆಯ ಹಾಗೂ ಎಲ್ಲರಿಗೂ ಮಾದರಿಯಾಗಬಲ್ಲ ಕಾರ್ಯಕ್ರಮ. ಈ ಕಾರ್ಯಕ್ರಮ ಆಯೋಜಿಸಿದವರಿಗೂ, ನಡೆಸಿಕೊಡುತ್ತಿರುವವರಿಗೂ ಅಭಿನಂದನೆಗಳು. ಭಗವಂತ ಇಬ್ಬರನ್ನು ಅನುಗ್ರಹಿಸಲಿ. ನೂತನ ವಧುವರರಿಗೆ ಶುಭಾಶಯಗಳು. ಬಾಳು ಬಂಗಾರವಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬಹಳ ಅದ್ಭುತ ಗಾಯಕರು ನೀವು. ಈ ತರಹದ ಬದಲಾವಣೆಯಿಂದ ಖುಷಿಯಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಒಳ್ಳೆಯ ಸಂದೇಶ ಕೊಟ್ಟಿದ್ದಾರೆ ಶುಭಾಶಯಗಳು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ