ವರ್ಕ್​ ಫ್ರಂ ಮಂಟಪ್​​! ಕೊಲ್ಕತ್ತೆಯ ಈ ವರನನ್ನು ನೋಡಿದ ನೆಟ್ಟಿಗರ ಮುಖ ಸಪ್ಪೆ

Kolkata : ವರ್ಕ್​ ಫ್ರಂ ಹೋಮ್​, ವರ್ಕ್​ ಫ್ರಂ ಬಾರ್​, ವರ್ಕ್​ ಫ್ರಂ ಎನಿವೇರ್​, ವರ್ಕ್​ ಫ್ರಂ ಇನ್ನೂ ಎಲ್ಲೆಲ್ಲಿಂದಾನೋ ಅದೆಲ್ಲ ನಿಮ್​ನಿಮಗೇ ಗೊತ್ತು. ಆದರೆ ವರ್ಕ್​ ಫ್ರಂ ಮಂಟಪ್ ಗೊತ್ತಿತ್ತಾ? ಗೊತ್ತಿಲ್ಲವಾದರೆ ಬನ್ನಿ ಕೊಲ್ಕತ್ತೆಗೆ.

ವರ್ಕ್​ ಫ್ರಂ ಮಂಟಪ್​​! ಕೊಲ್ಕತ್ತೆಯ ಈ ವರನನ್ನು ನೋಡಿದ ನೆಟ್ಟಿಗರ ಮುಖ ಸಪ್ಪೆ
ತನ್ನ ಮದುವೆಯಲ್ಲಿಯೂ ಲ್ಯಾಪ್​ಟಾಪ್​ನೊಳಗೆ ಮುಳುಗಿದ ಕೊಲ್ಕತ್ತಾ ವರ
Updated By: ಶ್ರೀದೇವಿ ಕಳಸದ

Updated on: Nov 29, 2022 | 4:08 PM

Viral : ಕೊರೊನಾ ಸಮಯದಲ್ಲಿ ಇಡೀ ಸಮುದಾಯವನ್ನು ಭಾಗಶಃ ಆವರಿಸಿದ ಈ ವರ್ಕ್​ ಫ್ರಂ ಹೋಮ್​ ಸಂಸ್ಕೃತಿ ಈತನಕ ಬಂದು ನಿಲ್ಲುತ್ತದೆ ಎನ್ನುವ ಅಂದಾಜು ಯಾರಿಗಿತ್ತು? ಅಂತೂ ಗಾಣದೆತ್ತಿನಂತೆ 24 ತಾಸೂ ಲ್ಯಾಪ್​ಟ್ಯಾಪಿನೊಂದಿಗೆ ಸುತ್ತುವುದೇ ಇಂದಿನ ಕೆಲಸದ ಶೈಲಿ ಎಂಬಂತಾಗಿದೆ. ಈಗಿಲ್ಲಿ ನೋಡಿ, ಕೊಲ್ಕತ್ತೆಯ ವರಮಹಾಶಯನೊಬ್ಬ ತನ್ನದೇ ಮದುವೆ ನಡೆಯುತ್ತಿದ್ದರೂ ಆಫೀಸಿನ ಕೆಲಸದಲ್ಲಿ ಮುಳುಗಿದ್ದಾನೆ. ಪುರೋಹಿತರು ತಮ್ಮ ಪಾಡಿಗೆ ತಾವು ಮದುವೆಯ ವಿಧಿವಿಧಾನಗಳನ್ನು ಪೂರೈಸುತ್ತಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರಂತೂ ಛೇ ಛೇ ಎನ್ನುತ್ತಿದ್ದಾರೆ.

ಕೊಲ್ಕತ್ತಾ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ. ಪುರೋಹಿತರು ತಮ್ಮ ಪಾಡಿಗೆ ತಾವು ವರಮಹಾಶಯನೂ ಲ್ಯಾಪ್​ಟಾಪಿನಲ್ಲಿ ತನ್ನ ಪಾಡಿಗೆ ತಾನು. ಆದರೆ ಈತ ಲ್ಯಾಪ್​ಟಾಪಿನಲ್ಲಿ ಏನು ಕೆಲಸ ಮಾಡುತ್ತಿದ್ದಾನೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. 10,000ಕ್ಕಿಂತಲೂ ಹೆಚ್ಚು ಜನರು ಈ ಫೋಟೋ ಮೆಚ್ಚಿದ್ದಾರೆ. ಕೆಲವರು ಬಿದ್ದುಬಿದ್ದು ನಗುತ್ತಿದ್ದಾರೆ. ಇನ್ನೂ ಕೆಲವರು ಅಸಮಾಧಾನಗೊಂಡಿದ್ದಾರೆ.

ಈತನನ್ನು ಮದುವೆಯಾಗುವ ಹುಡುಗಿಯನ್ನು ಆ ದೇವರೇ ಕಾಪಾಡಬೇಕು ಎಂದಿದ್ದಾರೆ ಕೆಲವರು. ಇಂಥ ಕೆಟ್ಟ ಕೆಲಸದ ಸಂಸ್ಕೃತಿಗೆ ಪ್ರಚಾರ ನೀಡಬೇಡಿ ಎಂದಿದ್ದಾರೆ ಹಲವರು. ಇದು ಹೆಮ್ಮೆ ಪಡುವ ವಿಷಯವಲ್ಲ ಎಂದಿದ್ದಾರೆ ಇನ್ನೂ ಅನೇಕರು. ಇದನ್ನು ತಮಾಷೆಗಾಗಿ ಮಾಡಿರುವ ಸಾಧ್ಯತೆ ಇದೆ ಎಂದಿದ್ದಾರೆ ಕೆಲವರು. ಎಲ್ಲಾ ಜನಪ್ರಿಯತೆಗಾಗಿ ಇದು. ಇದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಇನ್ನೂ ಕೆಲವರು.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 4:08 pm, Tue, 29 November 22