Rakesh Jhunjhunwala: ಕುಳಿತಲ್ಲೇ ಕುಣಿದು ಕುಪ್ಪಳಿಸಿದ ಕಿಂಗ್ ಆಫ್ ಬುಲ್ ರಾಕೇಶ್ ಜುಂಜುನ್​ವಾಲಾ: ಇಲ್ಲಿದೆ ವೈರಲ್ ವಿಡಿಯೋ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 14, 2022 | 6:03 PM

ಇಂಡಿಯಾಸ್ ವಾರೆನ್ ಬಫೆಟ್ ಎಂದು ಕರೆಯಲ್ಪಟ್ಟ ಜುಂಜುನ್‌ವಾಲಾ ಅವರ ಉತ್ಸಾಹ ಮತ್ತು ಅದಮ್ಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದರು.

Rakesh Jhunjhunwala: ಕುಳಿತಲ್ಲೇ ಕುಣಿದು ಕುಪ್ಪಳಿಸಿದ ಕಿಂಗ್ ಆಫ್ ಬುಲ್ ರಾಕೇಶ್ ಜುಂಜುನ್​ವಾಲಾ: ಇಲ್ಲಿದೆ ವೈರಲ್ ವಿಡಿಯೋ
ಕಿಂಗ್ ಆಫ್ ಬುಲ್ ರಾಕೇಶ್ ಜುಂಜುನ್​ವಾಲಾ
Follow us on

ಸ್ಟಾಕ್-ಮಾರುಕಟ್ಟೆಯ ಕಿಂಗ್ ಆಫ್ ಬುಲ್ಸ್ ಎಂದೇ ಖ್ಯಾತಿಯನ್ನು ಹೊಂದಿದ್ದ ಮತ್ತು ಭಾರತದ ಹೊಸ ಖಾಸಗಿ ವಿಮಾನಯಾನ ಸಂಸ್ಥೆಯಾದ ಆಕಾಶ ಏರ್‌ನ ಸಂಸ್ಥಾಪಕ ರಾಕೇಶ್ ಜುಂಜುನ್​ವಾಲಾ (Rakesh Jhunjhunwala) ದೀರ್ಘಕಾಲದ ಅನಾರೋಗ್ಯದಿಂದಾಗಿ ಇಂದು (ಆಗಸ್ಟ್​ 14) ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು. ಇಂಡಿಯಾಸ್ ವಾರೆನ್ ಬಫೆಟ್ ಎಂದು ಕರೆಯಲ್ಪಟ್ಟ ಜುಂಜುನ್‌ವಾಲಾ ಅವರ ಉತ್ಸಾಹ ಮತ್ತು ಅದಮ್ಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದರು. ಸದ್ಯ ಅವರ ಸಕಾರಾತ್ಮಕತೆಯನ್ನು ಬಿಂಬಿಸುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಜುಂಜುನ್‌ವಾಲಾ ಅವರು ಮಧುಮೇಹದಿಂದ ಬಳಲುತ್ತಿದ್ದಾಗ ಗಾಲಿಕುರ್ಚಿಯಲ್ಲಿ ಕುಳಿತಿರುವುದನ್ನು ಕಾಣಬಹುದು.

ಗಾಲಿಕುರ್ಚಿಯಲ್ಲಿ ಕುಳಿತಿದ್ದರು ಸಹ ತಮ್ಮ 62ನೇ ವಯಸ್ಸಿನಲ್ಲಿ ಅವರು ಬಂಟಿ ಔರ್ ಬಬ್ಲಿ ಚಿತ್ರದ ಕಜ್ರಾ ರೇ ಹಾಡಿಗೆ ಕುಳಿತಲ್ಲೇ ಖುಷಿಯಾಗಿ ಖುಷಿಯಾಗಿ ನೃತ್ಯ ಮಾಡಿದ್ದಾರೆ. ಈ ದಿನವನ್ನು ದುಃಖದ ದಿನ ಎಂದು ನೆನಪಿಸಿಕೊಳ್ಳಲು ನಾನು ಬಯಸುವುದಿಲ್ಲ, ಹೌದು, ಆರ್‌ಜೆ ನಿಧನರಾದರು. ಆದರೆ ಅವರು ನನ್ನ ಹೃದಯದಲ್ಲಿ ಯಾವಾಗಲೂ ಇರುತ್ತಾರೆ. ಈ ವಿಡಿಯೋದಲ್ಲಿ ಅವರು ಎಷ್ಟು ಸಂತೋಷವಾಗಿದ್ದರು ಎಂಬುದನ್ನು ಕಾಣಬಹುದು ಎಂದು ವಿಡಿಯೋಕ್ಕೆ ಶೀರ್ಷಿಕೆ ನೀಡಲಾಗಿದೆ.

ಇದನ್ನೂ ಓದಿ: Rakesh Jhunjhunwala: ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್​ವಾಲಾ ನಿಧನ

ರಾಕೇಶ್ ಜುಂಜುನ್​ವಾಲಾ ತಮ್ಮದೇ ಖಾಸಗಿ ಓಡೆತನದ ಸ್ಟಾಕ್​ ಟ್ರೇಡಿಂಗ್ ಫರ್ಮ್​​​ ರೇರ್​​ ಎಂಟರ್​ಪ್ರೈಸಸ್​​ ಅವರ ಮತ್ತು ಅವರ ಪತ್ನಿಯ ಮೊದಲ ಎರಡು ಅಕ್ಷರಗಳನ್ನು ಕಂಪನಿಗೆ ಹೆಸರನ್ನಾಗಿ ಇಡಲಾಗಿದೆ. ಟೈಟಾನ್, ಸ್ಟಾರ್​ ಹೆಲ್ತ್​​, ಟಾಟಾ ಮೋಟಾರ್ಸ್​​​ ಮತ್ತು ಮೆಟ್ರೋ ಬಾಂಡ್​ಗಳು ಅವರ ದೊಡ್ಡ ಹಿಡುವಳಿಗಳಾಗಿವೆ. ಹಂಗಾಮಾ ಮೀಡಿಯಾ ಮತ್ತು ಆಪ್ಟೆಕ್‌ನ ಅಧ್ಯಕ್ಷರಾಗಿದ್ದರು, ಜೊತೆಗೆ ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್, ಕಾನ್‌ಕಾರ್ಡ್ ಬಯೋಟೆಕ್, ಪ್ರೊವೊಗ್ ಇಂಡಿಯಾ, ವೈಸ್‌ರಾಯ್ ಹೋಟೆಲ್‌ಗಳು ಮತ್ತು ಹೆಚ್ಚಿನವುಗಳಲ್ಲಿ ನಿರ್ದೇಶಕರಾಗಿದ್ದರು.

ಆಗಸ್ಟ್ 2022 ರ ಹೊತ್ತಿಗೆ, ಜುಂಜುನ್‌ವಾಲಾ ಅವರ ಅಂದಾಜು ನಿವ್ವಳ ಮೌಲ್ಯವು USD 5.8 ಶತಕೋಟಿ ಆಗಿದ್ದು, ಅವರು ಭಾರತದಲ್ಲಿ 36 ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಫೋರ್ಬ್ಸ್ ಜಾಗತಿಕ ಪಟ್ಟಿಯಲ್ಲಿ 438 ನೇ ಶ್ರೇಯಾಂಕವನ್ನು ಹೊಂದಿದ್ದರು.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.