Doctor: ಟ್ವಿಟರ್ನಲ್ಲಿ “ದ ಲಿವರ್ ಡಾಕ್” ಎಂಬ ಉಪಾಧಿಯಿಂದ ಕಳೆದ ಆರೆಂಟು ತಿಂಗಳಲ್ಲಿ ಜನಪ್ರಿಯತೆ ಗಳಿಸಿರುವ ಡಾ. ಆ್ಯಬಿ ಫಿಲಿಪ್ (Abby Philip) ಒಬ್ಬ ನುರಿತ Hepatologist (Hepatology ಎಂದರೆ ಪಿತ್ತಜನಕಾಂಗ ಹಾಗೂ ಮೇದೋಜ್ಜೀರಕ ಗ್ರಂಥಿಗಳಿಗೆ ಸಂಬಂಧಪಟ್ಟ ಅಧ್ಯಯನ), ಸಂಶೋಧಕ, ಅಷ್ಟೇ ಅಲ್ಲದೇ ಆರೋಗ್ಯ, ಯೋಗಕ್ಷೇಮ, ಹಾಗೂ ಪಥ್ಯದ ಕುರಿತು ತಪ್ಪು ಮಾಹಿತಿ ಕೊಡುವ “ಬೊಗಳೆ ತಜ್ಞ”ರ ಬಂಡವಾಳ ಬಯಲು ಮಾಡುವುದರಲ್ಲಿ ಇವರು ನಿರತರು. ಈ ಕೆಲಸವನ್ನು ಅವರು ತಪಸ್ಸಿನಂತೆ ನಡೆಸಿಕೊಂಡು ಹೋಗುತ್ತಿದ್ದಾರೆ.
Part 1 of 2
ಇದನ್ನೂ ಓದಿToday is 1st July, 2023.
Today is National Doctors’ Day.
This is going to be long.
And painful.
But hopeful nonetheless.So please, stay with me.
I received this wedding card last week from a man who was admitted to my intensive care unit, exactly a year ago. He… pic.twitter.com/vWo3WXTBQz
— TheLiverDoc (@theliverdr) July 1, 2023
ಆಯುಶ್ (AYUSH) ಕಸುಬುದಾರರ (ಇವರನ್ನು ವೈದ್ಯರೆಂದು ಅವರು ಒಪ್ಪುವುದಿಲ್ಲ) ಸುಳ್ಳುಗಳನ್ನು ಬಯಲಿಗೆಳೆಯುವುದನ್ನು ತಮ್ಮ ಬಿಡುವಿನ ವೇಳೆಯ ಮುಖ್ಯ ಕಾಯಕವನ್ನು ಮಾಡಿಕೊಂಡಾಗಿನಿಂದ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರನ್ನೂ ಹೇರಳವಾಗಿ ವಿರೋಧಿಗಳನ್ನೂ ಕಟ್ಟಿಕೊಂಡಿದ್ದಾರೆ. ಇವರ ಪ್ರತಿಯೊಂದು ಟ್ವೀಟ್ ಮಾಹಿತಿಪೂರ್ಣವಾಗಿರುತ್ತದೆ. ಅಲ್ಲದೇ ಹರಿತವಾದ ವ್ಯಂಗ್ಯದಿಂದ ನಿರುಪಯುಕ್ತ ಪ್ರತಿಕ್ರಿಯೆಗಳನ್ನು ಕತ್ತರಿಸಿ ಹಾಕುತ್ತಾರೆ. ಹೀಗಾಗಿ ಇವರನ್ನು ಫಾಲೋ ಮಾಡುವವರಿಗೆ ಹೊಸ ತಿಳುವಳಿಕೆ ಹಾಗೂ ಮನರಂಜನೆ ಎರಡೂ ಸಿಗುತ್ತವೆ.
ಇದನ್ನೂ ಓದಿ : Viral Video: ವಿಶ್ರಾಂತಿಯಲ್ಲಿದ್ದ ಪ್ರಯಾಣಿಕರ ಮುಖದ ಮೇಲೆ ನೀರು ಸುರಿಯುತ್ತಿರುವ ಪೊಲೀಸ್; ಆಕ್ರೋಶಗೊಂಡ ನೆಟ್ಟಿಗರು
ಇವರ ವಾಗ್ದಾಳಿಗೆ ಸಿಲುಕುವುವವರು ಆಯುರ್ವೇದ, ನ್ಯಾಚುರೋಪತಿ ಹಾಗೂ ವಿಶೇಷವಾಗಿ ಹೋಮಿಯೋಪತಿ ವೈದ್ಯರು. ಈ ಔಷಧಿಗಳಿಂದ ಒಳ್ಳೆಯದಂತೂ ಏನೂ ಆಗುವುದಿಲ್ಲ ಬದಲಿಗೆ ಅವನ್ನು ತಯಾರಿಸುವ ರೀತಿಯಿಂದ ದೇಹಕ್ಕೆ ಹಾನಿಯಾಗುವ ಸಾಧ್ಯತೆಗಳು ತುಂಬಾ ಹೆಚ್ಚು ಎಂದು ವಿಸ್ತಾರವಾಗಿ ಸಂಶೋಧನಾ ಪ್ರಬಂಧಗಳನ್ನು ಉದ್ಧರಿಸಿ ವಾದಿಸುತ್ತಾರೆ. ಪುರಾತನ ಕಾಲದಿಂದ ನಮಗೆ ಗೊತ್ತಿರುವ ಅನೇಕ ಮನೆಮದ್ದುಗಳಿಂದ ಏನೂ ಪ್ರಯೋಜನವಿಲ್ಲ ಎಂದು ಸಾಧಿಸಿ ಬಹುತೇಕರಲ್ಲಿ ತಲ್ಲಣ ಸೃಷ್ಟಿಸಿದ್ದಾರೆ.
ಇದನ್ನೂ ಓದಿ : Viral Video: ಫೇರೋ ನಾ ನಜರಿಯಾ; ”ಇವರಂತೆ ಈತನಕ ಈ ಹಾಡಿಗೆ ಯಾರೂ ನರ್ತಿಸಿರಲಿಲ್ಲ”
ಇಂದು ಈ ಲಿವರ್ ಡಾಕ್ ಎಂದಿನಂತಲ್ಲದೇ ಒಂದು ವೈಯಕ್ತಿಕ ಟಿಪ್ಪಣಿ ಬರೆದುಕೊಂಡಿದ್ದಾರೆ. ಆಪತ್ತಿನ ಸನ್ನಿವೇಶದಲ್ಲಿ ತಮ್ಮ ಬಳಿ ಬಂದಿದ್ದ ಒಬ್ಬ ರೋಗಿಯನ್ನು ತಮ್ಮ ತಂಡದೊಂದಿಗೆ ಧೈರ್ಯ ಮತ್ತು ಸಾಹಸದಿಂದ ಹಿಂದೆಂದೂ ಬಳಸಿರದ ಹೊಸ ಪ್ರಾಯೋಗಿಕ ಚಿಕಿತ್ಸೆಯ ಮೂಲಕ ಬದುಕಿಸಿದ್ದನ್ನು ಆರ್ದ್ರವಾಗಿ ಕಟ್ಟಿಕೊಟ್ಟಿದ್ಧಾರೆ. ಅದನ್ನು ಓದಿದರೆ ನಿಮಗೂ ಕಣ್ಣಾಲಿ ತುಂಬಿಬರುವುದು ಖಚಿತ.
ಇಂದು ವೈದ್ಯರ ದಿನ (National Doctor’s Day). ಅತ್ಯಂತ ಒತ್ತಡದ ಪರಿಸ್ಥಿತಿಗಳನ್ನು ನಿಭಾಯಿಸಿ ನಮ್ಮನ್ನು ಗುಣಪಡಿಸುವ ವೈದ್ಯರಿಗೆ ನಮಿಸೋಣ. ಆ್ಯಬಿ ಫಿಲಿಪ್‌ರಂಥ ವೈದ್ಯರ ಸಂತತಿ ಸಾವಿರವಾಗಲಿ ಎಂದು ಹಾರೈಸೋಣ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:12 pm, Sat, 1 July 23