Viral: ರೀಲ್ಸ್ ನೋಡುತ್ತಾ ಮೊಬೈಲ್ ಡೇಟಾ ಖಾಲಿ ಮಾಡಿದ ಅತ್ತೆ, ಪೋಲಿಸ್ ಠಾಣೆ ಮೆಟ್ಟಿಲೇರಿದ ಸೊಸೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2023 | 6:14 PM

ಅತ್ತೆ ಸೊಸೆಯ ಮಧ್ಯೆ ಮನಸ್ತಾಪಗಳು ಇದ್ದಿದ್ದೆ ಅಲ್ವಾ.  ಅಡುಗೆ, ಮನೆ ಕೆಲಸ ಇತ್ಯಾದಿ ಸಣ್ಣಪುಟ್ಟ ಕಾರಣಗಳಿಗೆ ಅತ್ತೆ ಸೊಸೆ ಮಧ್ಯೆ ಜಗಳಗಳು ಏರ್ಪಡುತ್ತವೆ.  ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮೊಬೈಲ್ ಡೇಟಾ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತೆ ಮತ್ತು ಸೊಸೆಯ ನಡುವೆ ಜಗಳ ಏರ್ಪಟ್ಟಿದೆ. ಹೌದು ಅತ್ತೆ ಪ್ರತಿದಿನ ರೀಲ್ಸ್ ವಿಡಿಯೋಗಳನ್ನು ನೋಡುತ್ತ ನನ್ನ ಮೊಬೈಲ್ ಡೇಟಾವನ್ನೆಲ್ಲಾ ಖಾಲಿ ಮಾಡುತ್ತಾರೆ ಎಂದು ಸೊಸೆಯು ಅತ್ತೆಯ ವಿರುದ್ಧ ದೂರು ನೀಡಲು ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾರೆ. 

Viral: ರೀಲ್ಸ್ ನೋಡುತ್ತಾ ಮೊಬೈಲ್ ಡೇಟಾ ಖಾಲಿ ಮಾಡಿದ ಅತ್ತೆ, ಪೋಲಿಸ್ ಠಾಣೆ ಮೆಟ್ಟಿಲೇರಿದ ಸೊಸೆ
ಸಾಂದರ್ಭಿಕ ಚಿತ್ರ
Follow us on

ಅತ್ತೆ ಸೊಸೆಯ ನಡುವಿನ ಜಗಳ ಸಾಮಾನ್ಯ.  ಅಡುಗೆ, ಮನೆಕೆಲಸ, ವರದಕ್ಷಿಣೆ ಇತ್ಯಾದಿ ಕಾರಣಗಳಿಗೆ ಅತ್ತೆ ಮತ್ತು ಸೊಸೆಯ ಮಧ್ಯೆ ಜಗಳಗಳು ಏರ್ಪಡುತ್ತವೆ. ಈ ವಿಚಾರಗಳ ಕಾಣದಿಂದ ಸೊಸೆಯಂದಿರು ತಮ್ಮ ಅತ್ತೆಯ ವಿರುದ್ಧ ದೂರು ನೀಡಲು ಪೋಲಿಸ್ ಠಾಣೆಯ ಮೆಟ್ಟಿಲೇರಿದ ಹಲವು ಘಟನೆಗಳನ್ನು ನಾವು ನೋಡಿರುತ್ತೇವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಅತ್ತೆ ಮತ್ತು ಸೊಸೆಯ ನಡುವೆ ಮೊಬೈಲ್ ಡೇಟಾ ವಿಚಾರದಲ್ಲಿ ಜಗಳ ಏರ್ಪಟ್ಟು, ಸೊಸೆಯು ಅತ್ತೆಯ ವಿರುದ್ಧ ದೂರು ನೀಡಲು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.  ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ.  ಹೌದು ನನ್ನ ಅತ್ತೆ ಪ್ರತಿದಿನ ನನ್ನ ಮೊಬೈಲ್ ಅಲ್ಲಿ ರೀಲ್ಸ್ ವಿಡಿಯೋ, ಫೇಸ್ಬುಕ್ ನೋಡುತ್ತಾ ಮೊಬೈಲ್  ಡೇಟಾವನ್ನೆಲ್ಲಾ ಖಾಲಿ ಮಾಡುತ್ತಿದ್ದಾರೆ. ನಾನು ಕೆಲಸವನ್ನೆಲ್ಲಾ ಮುಗಿಸಿ ಸ್ವಲ್ಪ ಹೊತ್ತು ಮೊಬೈಲ್ ನೋಡೋಣ ಅಂತಾ ಕೂತ್ಕೊಂಡ್ರೆ, ಡೇಟಾ ಎಲ್ಲಾ ಖಾಲಿಯಾಗಿರುತ್ತಿತ್ತು ಎಂದು ಅತ್ತೆಯ ವಿರುದ್ಧ ಸೊಸೆಯೊಬ್ಬರು ದೂರನ್ನು ದಾಖಲಿಸಿದ್ದಾರೆ.  ಅಲ್ಲದೆ ಅತ್ತೆಯ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಆ ಮಹಿಳೆ ಒತ್ತಾಯಿಸಿದ್ದು, ಪೋಲಿಸರು ಸೊಸೆ ಹಾಗೂ ಅತ್ತೆ ಇಬ್ಬರನ್ನೂ ಸಮಧಾನಪಡಿಸಿ, ರಾಜಿ ಸಂಧಾನ ಮಾಡಿಸಿ ಮನೆಗೆ ಕಳುಹಿಸಿದ್ದಾರೆ.

ಉತ್ತರ ಪ್ರದೇಶದ ಕೋತ್ವಾಲಿ ಸದರ್ ಬಜಾರ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ಈ ಪ್ರದೇಶದಲ್ಲಿ ವಾಸವಿರುವಂತಹ  ನವವಿವಾಹಿತೆ ಮಹಿಳೆಯೊಬ್ಬರು ನನ್ನ ಅತ್ತೆ ಪ್ರತಿದಿನ ನನ್ನ ಮೊಬೈಲ್ ಅಲ್ಲಿ ರೀಲ್ಸ್ ವೀಡಿಯೋಗಳು ಹಾಗೂ ಫೇಸ್ಬುಕ್ ನೋಡುತ್ತಾ ಸಮಯ ಕಳೆಯುವ  ಮೂಲಕ ಪ್ರತಿದಿನವೂ  ದೈನಂದಿನ ಡೇಟಾವನ್ನೆಲ್ಲಾ ಖಾಲಿ ಮಾಡಿಬಿಡುತ್ತಾರೆ. ಬೆಳಗ್ಗೆ ನಾನು ಕೆಲಸದಲ್ಲಿ ನಿರತಳಾಗಿರುತ್ತಿದ್ದೆ,  ಆ ಸಂದರ್ಭದಲ್ಲಿ ಮೊಬೈಲ್ ನೋಡಲು ನನಗೆ ಸಮಯವಿರುತ್ತಿರಲಿಲ್ಲ, ರಾತ್ರಿ ಸ್ವಲ್ವ ಬಿಡುವಿನ ಸಮಯದಲ್ಲಿ ಮೊಬೈಲ್ ನೋಡೋಣಾ ಅಂದ್ರೆ ಮೊಬೈಲ್ ಅಲ್ಲಿ ಪೂರ್ತಿ ಡೇಟಾ ಖಾಲಿಯಾಗಿರುತ್ತಿತ್ತು,  ಈ ಬಗ್ಗೆ ತನ್ನ ಪತಿಗೂ ದೂರು ನೀಡಿದ್ದೆ ಎಂದು ಮಹಿಳೆ ಹೇಳಿದ್ದಾರೆ, ಅಲ್ಲದೆ ಇದೇ ವಿಚಾರವಾಗಿ ಪತಿಯೊಂದಿಗೂ ಜಗಳವಾಡಿದ್ದರು.

ಇದನ್ನೂ ಓದಿ: ಬೇಗ ರಸ್ತೆ ದಾಟ್ರೋ, ತನ್ನ ಮರಿಗಳನ್ನು ರಸ್ತೆ ದಾಟಿಸಲು ತಾಯಿ ಕರಡಿ ಪಟ್ಟಪಾಡು ನೋಡಿ 

ಇದಾದ ಬಳಿಕವೂ ಅತ್ತೆಯ ಸ್ವಭಾವದಲ್ಲಿ ಯಾವುದೇ ಬದಲಾವಣೆ ಕಾಣದಿದ್ದಾಗ, ಮಹಿಳೆಯು ಪೋಲಿಸ್ ಠಾಣೆ ಮೆಟ್ಟಿಲೇರಿ  ಅತ್ತೆ ಹಾಗೂ ಪತಿಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಮಹಿಳೆಯು ನನ್ನ  ಅತ್ತೆ ನನ್ನ ಮೊಬೈಲ್ ಡೇಟಾವನ್ನು ಖಾಲಿ ಮಾಡುತ್ತಾರೆ  ಎಂದು ಪೋಲಿಸರಿಗೆ ದೂರು ನೀಡಿದ್ದಾರೆ. ಅಲ್ಲದೆ   ತನ್ನ ಅತ್ತೆ ಮತ್ತು ಪತಿ ವರದಕ್ಷಿಣೆಗಾಗಿ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇದಾದ ಬಳಿಕ ಪೋಲಿಸರು ಮಹಿಳೆ, ಆಕೆಯ ಪತಿ ಮತ್ತು ಅತ್ತೆಗೆ ಕೌನ್ಸೆಲಿಂಗ್ ನಡೆಸಿ ಅತ್ತೆ ಸೊಸೆಯನ್ನು ಸಮಧಾನಪಡಿಸಿ, ಸಂಧಾನ ಮಾಡಿಸಿ ಮನೆಗೆ ಕಳುಹಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: