AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಯುವಕರು ನಾಚುವಂತೆ ಡಾನ್ಸ್ ಮಾಡಿದ ವೃದ್ಧ, ಡಾನ್ಸ್ ನೋಡಿ ಭೇಷ್ ಎಂದ ನೆಟ್ಟಿಗರು!

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಡಾನ್ಸ್ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವು ಡಾನ್ಸ್ ವಿಡಿಯೋವನ್ನು ನೋಡಿದರೆ ಹೀಗೂ ಡಾನ್ಸ್ ಮಾಡಬಹುದಾ ಎಂದು ನೆಟ್ಟಿಗರಿಗೆ ಅನಿಸುವುದಿದೆ. ಇದೀಗ ವೃದ್ಧರೊಬ್ಬರು ಜಬರ್ದಸ್ತ್ ಆಗಿ ಹುಂಜದ ಡಾನ್ಸ್ ಮಾಡಿದ್ದಾರೆ. ವೃದ್ಧನ ಈ ಡಾನ್ಸ್ ಸ್ಟೆಪ್ ನೋಡಿ ನೆಟ್ಟಿಗರು ಫುಲ್ ಪಿದಾ ಆಗಿದ್ದು, ವೃದ್ಧನನ್ನು ಹಾಡಿ ಹೊಗಳಿದ್ದಾರೆ.

Viral Video : ಯುವಕರು ನಾಚುವಂತೆ  ಡಾನ್ಸ್ ಮಾಡಿದ ವೃದ್ಧ, ಡಾನ್ಸ್ ನೋಡಿ ಭೇಷ್ ಎಂದ ನೆಟ್ಟಿಗರು!
old man did the murg dance
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ|

Updated on: Feb 03, 2024 | 12:15 PM

Share

ಸೋಶಿಯಲ್ ಮೀಡಿಯಾಗಳೇ ಹಾಗೆ, ಇದು ಸಾಮಾನ್ಯರನ್ನು ಫೇಮಸ್ ಮಾಡಿ ಬಿಡುತ್ತದೆ. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಏನು ಶೇರ್ ಮಾಡಿದರೂ ಕೂಡ ವೈರಲ್ ಆಗುತ್ತಿರುತ್ತದೆ. ತನ್ನ ವಿಶಿಷ್ಠ, ವಿಚಿತ್ರ ವಿಡಿಯೋಗಳ ಮೂಲಕ ಅನೇಕರು ಹೆಸರು ಮಾಡಿದ್ದಾರೆ. ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ತೋರಿಸಿ ಹಲವರು ನೆಟ್ಟಿಗರಿಂದ ಶಭಾಷ್ ಗಿರಿ ಪಡೆದುಕೊಂಡಿದ್ದಾರೆ.ಆದರೆ ಇದೀಗ ವೃದ್ಧಯೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿಯೂ ಭರ್ಜರಿಯಾಗಿ ಸ್ಟೆಪ್ ಹಾಕಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಮಾರಂಭವೊಂದರಲ್ಲಿ ವೃದ್ಧರು ಮನಸ್ಸು ಬಿಚ್ಚಿ ಹುಂಜದ ನೃತ್ಯ ಮಾಡಿರುವ ವಿಡಿಯೋವೊಂದು ಇದಾಗಿದೆ. ಈ ವಿಡಿಯೋದಲ್ಲಿ ವೃದ್ಧರೊಬ್ಬರು ಸಾಂಪ್ರದಾಯಿಕ ಕುರ್ತಾ ಹಾಗೂ ಧೋತಿಯನ್ನು ಧರಿಸಿದ್ದು, ಬಾಯಿಯಲ್ಲಿ ಸಿಗರೇಟ್ ಇಟ್ಟುಕೊಂಡು ಹೊಗೆ ಬಿಡುತ್ತಾ, ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಹಾಡಿಗೆ ತಕ್ಕಂತೆ ಎಕ್ಸ್ಪ್ರೆಸ್ ನೀಡುತ್ತಾ, ಹುಂಜದಂತೆ ಕುಣಿದಿದ್ದು, ವಯಸ್ಸು ಎಷ್ಟಾದರೆ ಏನಂತೆ, ಡಾನ್ಸ್ ಮಾಡಲು ಮನಸ್ಸು ಇದ್ದರೆ ಸಾಕು ಎನ್ನುವುದನ್ನು ವೃದ್ಧರೊಬ್ಬರು ತೋರಿಸಿಕೊಟ್ಟಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋದ ಪ್ರಾರಂಭದಲ್ಲಿ ವೃದ್ಧರೊಬ್ಬರು ತನ್ನ ಬಾಯಲ್ಲಿ ಸಿಗರೇಟ್ ಇಟ್ಟುಕೊಂಡು, ಹಾಡಿಗೆ ತಕ್ಕಂತೆ ಕುಣಿಯಲು ಪ್ರಾರಂಭಿಸಿದ್ದಾರೆ. ಅಲ್ಲೇ ಇದ್ದವರು ಈ ವೃದ್ಧನ ಹುಂಜದ ನೃತ್ಯ ನೋಡಿ ಸಖತ್ ಟ್ರಿಲ್ ಆಗಿದ್ದು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದಾರೆ. ಈ ವಿಡಿಯೋವನ್ನು ವಿಕಾಸ್ ಕುಮಾರ್ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈಗಾಗಲೇ ವೀಕ್ಷಣೆಗಳನ್ನು ಕಾಣುತ್ತಿದ್ದು, ನೆಟ್ಟಿಗರು ವೃದ್ಧನನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: ಬ್ಯಾಂಕ್​​​ಗೆ ಹೆಲ್ಮೆಟ್ ಧರಿಸಿ ಬಂದು 8.53 ಲಕ್ಷ ರೂ. ದೋಚಿ ಪರಾರಿಯಾದ ವ್ಯಕ್ತಿ

ವಿಡಿಯೋ ನೋಡಿದ ನೆಟ್ಟಿಗರು ಈಗಾಗಲೇ ನಾನಾ ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು, “ನಾನು ಅವರ ಆಹಾರದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ’ ಎಂದಿದ್ದಾರೆ. ಮತ್ತೊಬ್ಬರು ‘ ನನಗೆ ಕೇವಲ 25 ವರ್ಷ, ಈಗಲೇ ನನ್ನ ಕಾಲುಗಳು, ಬೆನ್ನು, ಕುತ್ತಿಗೆ ಮತ್ತು ಎಲ್ಲವೂ ಈಗಾಗಲೇ ನೋವಿನಿಂದ ಕೂಡಿದೆ. ಆದರೆ ಅವರು ಹೇಗೆ ಆರೋಗ್ಯಕರ ಮತ್ತು ಶಕ್ತಿಯುತರಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್