ಅಪ್ಪ-ಅಮ್ಮನ ಕನಸಿನ ಹಾರಾಟ, ಸಿಬ್ಬಂದಿಯಾಗಿ ವಿಮಾನದಲ್ಲಿ ಸೇವೆ ಮಾಡುವ ಸೌಭಾಗ್ಯ ನನ್ನದು

ಇಂಡಿಗೋ ವಿಮಾನದ ಸಿಬ್ಬಂದಿಯೊಬ್ಬರು ತಮ್ಮ ತಂದೆ -ತಾಯಿ ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಜತೆಗೆ ವಿಮಾನದಲ್ಲಿ ಅವರು ಒಬ್ಬ ಕ್ಯಾಬಿನ್ ಸಿಬ್ಬಂದಿಯಾಗಿ ತನ್ನ ಹೆತ್ತವರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಹೆಮ್ಮೆಯಿಂದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ.

ಅಪ್ಪ-ಅಮ್ಮನ ಕನಸಿನ ಹಾರಾಟ, ಸಿಬ್ಬಂದಿಯಾಗಿ ವಿಮಾನದಲ್ಲಿ ಸೇವೆ ಮಾಡುವ ಸೌಭಾಗ್ಯ ನನ್ನದು
ವೈರಲ್​​ ವಿಡಿಯೋ
Updated By: ಮಾಲಾಶ್ರೀ ಅಂಚನ್​

Updated on: Jun 23, 2025 | 4:49 PM

ಒಬ್ಬ ಮಗಳಿಗೆ ತನ್ನ ಹೆತ್ತವರಿಗೆ ತಾನು ಮಾಡುವ ವೃತ್ತಿ ಬಗ್ಗೆ ಅಥವಾ ಸಾಧನೆಯನ್ನು ಕಣ್ಣಾರೆ ತೋರಿಸಬೇಕು ಎಂಬ ಆಸೆಯಿರುತ್ತದೆ. ಇಂತಹದ್ದೇ ವಿಡಿಯೋವೊಂದು ಇನ್ಸ್ಟಾದಲ್ಲಿ  ಸಖತ್​​ ವೈರಲ್​ ಆಗಿದೆ. ಇಂಡಿಗೋ ವಿಮಾನದ (IndiGo) ಸಿಬ್ಬಂದಿ ಪರ್ಮಿತಾ ರಾಯ್ ಎಂಬವವರು, ತನ್ನ ತಂದೆ -ತಾಯಿಯನ್ನು ವಿಮಾನದಲ್ಲಿ ಕಂಡು ಭಾವುಕಾರಾಗಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಕ್ಯಾಬಿನ್ ಸಿಬ್ಬಂದಿ ಪರ್ಮಿತಾ ರಾಯ್ ಇದು ನನ್ನ ಹೃದಯಸ್ಪರ್ಶಿ ಕ್ಷಣ ಎಂದು ಹೇಳಿದ್ದಾರೆ. ವಿಮಾನದಲ್ಲಿ ತಮ್ಮ ಪೋಷಕರನ್ನು ಸ್ವಾಗತಿಸುವ ಅವಕಾಶ ಸಿಕ್ಕ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನನ್ನ ಜತೆಗೆ ಅಪ್ಪ – ಅಮ್ಮ ಇಬ್ಬರು ಕೂಡ ಕನಸಿನ ಹಾರಾಟ ನಡೆಸಿದ್ದಾರೆ. ಇದನ್ನು ಬಣ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ವಿಡಿಯೋದಲ್ಲಿ ನೋಡಬಹುದು, ಪರ್ಮಿತಾ ರಾಯ್ ಅವರ ತಾಯಿ ಮೊದಲಿಗೆ ಬರುತ್ತಾರೆ. ಆ ಸಮಯದಲ್ಲಿ ತಾಯಿಯ ಕಾಲಿಗೆ ಬಿದ್ದು ಆರ್ಶೀವಾದ ಪಡೆಯುತ್ತಾರೆ. ನಂತರ ಹಿಂದಿನ ಸಾಲಿನಿಂದ ಅವರ ತಂದೆ ಕೂಡ ಬರುತ್ತಾರೆ. ಅವರ ಕಾಲಿಗೂ ಬಿದ್ದು ಆರ್ಶೀವಾದ ಪಡೆಯುತ್ತಾರೆ. ಪರ್ಮಿತಾ ರಾಯ್ ಅವರು ತಾಯಿ ಕೂಡ ತನ್ನ ಮಗಳನ್ನು ನೋಡಿ ಮುಗ್ದ ನಗುವಿನಿಂದ ಆರೈಸುತ್ತಾರೆ. ಇದೀಗ ಈ ವಿಡಿಯೋ 2 ಲಕ್ಷಕ್ಕೂ ಹೆಚ್ಚಿನ ವಿಕ್ಷಣೆಯನ್ನು ಪಡೆದುಕೊಂಡಿದೆ. ಅನೇಕ ಜನರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ
ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳು, ಸೂಪರ್ ಮ್ಯಾನ್ ಆದ ಅಪ್ಪ
ಫುಡ್ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್ ನೀಡಿದ ಮನೆಮಂದಿ
ಶ್ವಾನದ ಮೇಲೆ ಕಾರು ಹತ್ತಿಸಿ, ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ವ್ಯಕ್ತಿ
ನಿಂತ ಮಳೆನೀರಲ್ಲಿ ಕುಣಿಯಲು ಹೋಗಿ ಮುಗ್ಗರಿಸಿ ಬಿದ್ದ ಯುವತಿ

ಇದನ್ನೂ ಓದಿ: ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:


ಪರ್ಮಿತಾ ರಾಯ್ ಅವರು ತಾಯಿ ಮತ್ತು ತಂದೆ ತಮ್ಮ ಮಗಳ ಬಗ್ಗೆ ಹೆಮ್ಮೆಯಿಂದ ನೋಡುವುದನ್ನು ಅವರ ಕಣ್ಣಿನಲ್ಲಿ ಕಾಣಬಹುದು. ಕರ್ತವ್ಯದ ವೇಳೆ ತನ್ನ ಹೆತ್ತವರನ್ನು ಸತ್ಕರಿಸುವ ಅವಕಾಶ ಸಿಕ್ಕ ಸುಂದರ ಕ್ಷಣದ ಬಗ್ಗೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ಕಮೆಂಟ್​ ಮಾಡಿದ್ದು, ಈ ಭಾಗ್ಯ ನಿಮಗೆ (ಪರ್ಮಿತಾ ರಾಯ್​​ಗೆ) ಸಿಕ್ಕಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.  ಒಬ್ಬ ಬಳಕೆದಾರ ಇದು ತುಂಬಾ ಆರೋಗ್ಯಕರ ಕ್ಷಣ, ಅವರ ಮುಖದಲ್ಲಿರುವ ಹೆಮ್ಮೆಯೇ ಎಲ್ಲವನ್ನೂ ಹೇಳುತ್ತದೆ ಎಂದು ಹೇಳಿದ್ದಾರೆ.  ನೀವು ನಿಮ್ಮ ಹೆತ್ತವರನ್ನು ಸಾಧ್ಯವಾದಷ್ಟು ಸಂತೋಷ ಹಾಗೂ ಹೀಗೆ ಹೆಮ್ಮೆ ಪಡುವಂತೆ ಮಾಡಿ ಎಂದು  ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ವಿಮಾನದಲ್ಲಿ ಅವರು ತಂದೆ -ತಾಯಿ ಪಾದಗಳನ್ನು ಸ್ಪರ್ಶಿಸುವುದನ್ನು ನೋಡಿದಾಗ ನನ್ನ ಕಣ್ಣುಗಳಲ್ಲಿ ನೀರು ಬಂತು ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ