Viral: ವ್ಯವಹಾರ ಶುದ್ಧವಾಗಿರಲಿ; ಸಾಲ ಕೇಳುವವರಿಗೆ ಅಂಗಡಿ ಮುಂಭಾಗ ಬೋರ್ಡ್ ಹಾಕಿ ಎಚ್ಚರಿಕೆ ಕೊಟ್ಟ ಮಾಲೀಕ

ದುಡ್ಡಿದ್ರೆ ದುನಿಯಾ. ಹಣಕ್ಕೆ ಬೆಲೆ ಕೊಡುವಷ್ಟು ಜನರು, ಈ ಸಂಬಂಧಗಳಿಗೆ ಬೆಲೆ ಕೊಡಲ್ಲ. ಎಷ್ಟೋ ಸಂಬಂಧಗಳು ಹಾಳಾಗುವುದು ಈ ಹಣದಿಂದಲೇ. ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎಂದು ಅಂಗಡಿಗಳಲ್ಲಿ ಬರೆದಿರುವುದನ್ನು ನೀವು ನೋಡಿರುತ್ತೀರಿ. ಇದೀಗ ಇಂತಹದ್ದೇ ಬೋರ್ಡ್‌ವೊಂದು ವೈರಲ್ ಆಗಿದ್ದು, ಖರೀದಿ ಮಾಡುವವರು ಸಾಲ ಕೇಳ್ಬೇಡಿ ಎಂದು ಅಂಗಡಿ ಮಾಲೀಕ ಎಚ್ಚರಿಕೆ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ವ್ಯವಹಾರ ಶುದ್ಧವಾಗಿರಲಿ; ಸಾಲ ಕೇಳುವವರಿಗೆ ಅಂಗಡಿ ಮುಂಭಾಗ ಬೋರ್ಡ್ ಹಾಕಿ ಎಚ್ಚರಿಕೆ ಕೊಟ್ಟ ಮಾಲೀಕ
ವೈರಲ್‌ ಪೋಸ್ಟ್‌
Image Credit source: Pinterest/ Instagram

Updated on: Apr 08, 2026 | 1:18 PM

ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಹಣದ ವಿಚಾರ ಬಂದ್ರೆ ಅತ್ಯಾಪ್ತರು ಸಹ ದೂರವಾಗಿ ಬಿಡ್ತಾರೆ. ಹೀಗಾಗಿ ವ್ಯಾಪಾರಸ್ಥರು ಹಾಗೂ ಅಂಗಡಿ ಮಾಲೀಕರು (shop owner) ವ್ಯವಹಾರ ವಿಷ್ಯದಲ್ಲಿ ಕಟ್ಟುನಿಟ್ಟಾಗಿ ಇರೋದನ್ನು ನೀವು ನೋಡಿರುತ್ತೀರಿ. ಅಷ್ಟೇ ಅಲ್ಲ, ಸಾಲ ಕೇಳಿ ಸ್ನೇಹ (Friendship) ಕಳೆದುಕೊಳ್ಳಬೇಡಿ ಅನ್ನೋದನ್ನು ದೊಡ್ಡ ಅಕ್ಷರದಲ್ಲಿ ಅಂಗಡಿಗಳಲ್ಲಿ ಬರೆದಿರುತ್ತಾರೆ. ಇದೀಗ ಇಂತಹದ್ದೇ ಅಂಗಡಿ ಮುಂಭಾಗದಲ್ಲಿನ  ಬೋರ್ಡ್‌ ಪೋಟೋ ವೈರಲ್‌ ಆಗಿದೆ. ಈ ಬೋರ್ಡ್‌ನಲ್ಲಿ ಸಾಲ ಕೇಳುವವರಿಗೆ  ಅಂಗಡಿ ಮಾಲೀಕ ಖಡಕ್ ವಾರ್ನಿಂಗ್‌ ನೀಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ನಿಕ್ಷೇಪ್ ಗೌಡ (Nikshep gowda) ಹೆಸರಿನ ಖಾತೆಯಲ್ಲಿ ಅಂಗಡಿ ಮುಂಭಾಗದಲ್ಲಿ ಹಾಕಲಾದ ದೊಡ್ಡ ಬೋರ್ಡ್‌ನ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಬೋರ್ಡ್‌ನಲ್ಲಿ ವ್ಯವಹಾರ ಶುದ್ಧವಾಗಿರಲಿ, ನಾಳೆ ಕೊಡ್ತೀನಿ, ಆಮೇಲೆ ಕೊಡ್ತೀನಿ, ಸ್ವಲ್ಪ ಹೊತ್ತಿನಲ್ಲಿ ಕೊಡ್ತೀನಿ, ಬಂದು ಕೊಡ್ತೀನಿ, ನಾ ಓಡಿ ಹೋಗ್ತಿನಾ?, ನನ್ನ ಮೇಲೆ ನಂಬಿಕೆ ಇಲ್ವಾ?, ನಾವೇನ್ ಮೋಸ ಮಾಡ್ತೀವಾ?, ದಿನಾ ನಾನು ಇಲ್ಲೇ ಬರ್ತಿನಿ? ಹಾಗೂ ನಾನು ಇದೇ ಊರಿನವನು, ಇನ್ನು ಮುಂತಾದ ವಾಕ್ಯಗಳನ್ನು ನಮ್ಮಲ್ಲಿ ದಯವಿಟ್ಟು ಬಳಸಬೇಡಿ. ಸ್ನೇಹ ಬೇರೆ ವ್ಯವಹಾರ ಬೇರೆ ನಮ್ಮಲ್ಲಿ ಸಾಲ ದೊರೆಯುವುದಿಲ್ಲ ಸಹಕರಿಸಿ ಎಂದು ಬರೆಯಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಬೀದಿ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ವ್ಯಕ್ತಿ

ಈ ಪೋಸ್ಟ್ ಮೂವತ್ತೇರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪಾಪ ತುಂಬಾ ಮೋಸ ಹೋಗಿದ್ದಾನೆ ಅನಿಸ್ತದೆ, ಅದಕ್ಕೆ ಹೀಗೆ ಬರೆದು ಹಾಕಿದ್ದಾನೆ ಅನಿಸ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ರೀತಿ ಇರುವವರಿಗೆ ಬೇಗನೆ ನಾಮ ಬೀಳೋದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೊಂದು ಬೆಂದಿರುವ ಜೀವ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us