ಫುಚ್ಕಾ ಚಾಪ್ ತಯಾರಿಸುತ್ತಿರುವ ಮಹಿಳೆ; ಅಯ್ಯಯ್ಯೋ ಎನ್ನುತ್ತಿರುವ ನೆಟ್ಟಿಗರು

| Updated By: ಶ್ರೀದೇವಿ ಕಳಸದ

Updated on: May 05, 2023 | 5:10 PM

Indian Chats : ತಟ್ಟೆಯಲ್ಲಿರುವ ತಿನಿಸನ್ನು ನೋಡಿದರೆ ಆಹಾ! ಎಂದೆನಿಸದೇ ಇರದು. ಆದರೆ ಇದನ್ನು ತಯಾರಿಸುವ ವಿಧಾನ ಮಾತ್ರ ನೆಟ್ಟಿಗರಿಗೆ ಮಹಾ ಕಿರಿಕಿರಿ ಉಂಟು ಮಾಡಿದೆ. ನೀವೇನಂತೀರಿ ಈ ವಿಡಿಯೋ ನೋಡಿದ ಮೇಲೆ?

ಫುಚ್ಕಾ ಚಾಪ್ ತಯಾರಿಸುತ್ತಿರುವ ಮಹಿಳೆ; ಅಯ್ಯಯ್ಯೋ ಎನ್ನುತ್ತಿರುವ ನೆಟ್ಟಿಗರು
ಫುಚ್ಕಾ ಚಾಪ್ ತಯಾರಿಸುತ್ತಿರುವ ಮಹಿಳೆ
Follow us on

Viral Video : ಉತ್ತರ ಭಾರತದ ರಸ್ತೆಬದಿಯ ತಿಂಡಿತಿನಿಸುಗಳು ಯಾವ ರೂಪದಲ್ಲೋ ನಿಮ್ಮ ಕಣ್ಣೆದುರು ಬಂದರೆ, ಎಂಥ ಡಯೆಟ್​ ಅನ್ನೂ ಮುರಿದು ಅಂಗಡಿಯ ಬಳಿ ಓಡಿಬಿಡಬೇಕು ಎನ್ನುವಂತಾಗುತ್ತದೆ. ಇದೀಗ ಮೇಲಿನ ಫೋಟೋ ನೋಡಿ ನಿಮಗೆ ಹಾಗೆ ಅನ್ನಿಸಿರಲು ಸಾಕು. ಆದರೆ ನೆಟ್ಟಿಗರಲ್ಲಿ ಕೆಲವರು ಇದು ಬಹಳ ರುಚಿಕಟ್ಟಾದ ತಿನಿಸು ಎಂದು ಕೊಂಡಾಡುತ್ತಿದ್ದರೆ, ಉಳಿದವರು ಅಯ್ಯೋ ಅಸಹ್ಯ ಎನ್ನಲು ಶುರು ಮಾಡಿದ್ದಾರೆ. ಯಾಕೆ ಹೀಗೆ? ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ನಿನ್ನೆ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ ಲಕ್ಷ ಜನರು ನೋಡಿದ್ದಾರೆ. ಸುಮಾರು 6,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನಾನಾಥರದ ಪ್ರತಿಕ್ರಿಯೆಗಳು ಜನರಿಂದ ಬಂದಿವೆ. ಹುಣಸೆಹಣ್ಣು, ಆಲೂ ಮತ್ತಿತರೇ ಮಸಾಲೆಯನ್ನು ಬರೀಗೈಯಿಂದ ಕಲಿಸುತ್ತಿರುವ ರೀತಿಯೇ ಕೆಲವರಿಗೆ ಅಸಹ್ಯ ಅನ್ನಿಸಿರಲು ಸಾಕು. ಶುಚಿತ್ವವನ್ನು ಬಯಸುವ ಜನರಿಗೆ ಇದು ಸರಿ ಎನ್ನಿಸಿಲ್ಲ.

ಇದನ್ನೂ ಓದಿ : ಅಬ್ಬಾ ಎಂಥ ಗುಡುಗು! ಅಪ್ಪನನ್ನು ತಬ್ಬಿಹಿಡಿವ ಎಳೆಗೂಸಿನ ವಿಡಿಯೋ ವೈರಲ್

ರುಚಿ ಒಂದಿದ್ದರೆ ಸಾಕೆ, ಶುಚಿತ್ವದ ಕಡೆ ಗಮನ ಕೊಡಬೇಡವೆ ಎಂದು ಹಲವಾರು ಜನರು ಪ್ರಶ್ನಿಸಿದ್ಧಾರೆ. ರಸ್ತೆಬದಿ ಆಹಾರವೆಂದರೆ ಹೀಗೇ ಇರುತ್ತದೆ. ಬೇಕಾದರೆ ತಿನ್ನಬೇಕು ಬೇಡವಾದರೆ ಸುಮ್ಮನಿರಬೇಕು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಆದರೆ ಬಹಳಷ್ಟು ಜನ ಅಸಹ್ಯವಾಗಿದೆ! ಎಂದೇ ಹೇಳಿದ್ದಾರೆ.

ರುಚಿ ಮತ್ತು ಶುಚಿಯ ವಾದ ಎಂದಿಗೂ ಪ್ರಚಲಿತವೇ. ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 5:09 pm, Fri, 5 May 23