Viral Video: ಅಮ್ಮಾ ಅಂತ ತನ್ನದೇ ಸಂಭಾಷಣೆಯಲ್ಲಿ ಕೂಗುವ ಗಿಳಿಯ ವಿಡಿಯೋ ವೈರಲ್

ಸಾಕಿದ ಗಿಳಿಯೊಂದು ಅಮ್ಮಾ ಎಂದು ತನ್ನದೇ ಸಂಭಾಷಣೆಯಲ್ಲಿ ಕರೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಸೂರೆಗೊಳಿಸುತ್ತಿದೆ.

Viral Video: ಅಮ್ಮಾ ಅಂತ ತನ್ನದೇ ಸಂಭಾಷಣೆಯಲ್ಲಿ ಕೂಗುವ ಗಿಳಿಯ ವಿಡಿಯೋ ವೈರಲ್
ವೈರಲ್ ಆದ ಗಿಳಿ
Edited By:

Updated on: May 28, 2022 | 8:26 AM

ಪ್ರಾಣಿಗಳಿಗೆ ಮನುಷ್ಯರಂತೆ ಮಾತನಾಡಲು ಬರುವುದಿಲ್ಲ. ಆದರೆ ಅವುಗಳಿಗೆ ಅವುಗಳದ್ದೇ ಆದ ಸಂಭಾಷಣೆ ಇರುತ್ತದೆ. ಅದರಂತೆ ಗಿಳಿ (Parrot)ಯು ತಾಯಿಯನ್ನು ಕರೆಯುತ್ತಿರುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದ್ದು, ನೆಟ್ಟಿಗರ ಮನ ಸೂರೆಗೊಳಿಸಿದೆ. ಅಲ್ಲದೆ, ಅವರು ಕಾಮೆಂಟ್ ಬಾಕ್ಸ್​ನಲ್ಲಿ ಗಿಳಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೋರಾ ಫತೇಹಿ ಡಾನ್ಸ್​​ ವಿಡಿಯೋ ವೈರಲ್​

ವೈರಲ್ ವಿಡಿಯೋದಲ್ಲಿರುವಂತೆ, ಮನೆಯಲ್ಲಿ ಸಾಕಿದ ಗಿಳಿಯೊಂದು ಟೇಬಲ್ ಮೇಲೆ ಕುಳಿತುಕೊಂಡು, ‘ಅಮ್ಮಾ’, ‘ಮಾ’ ಎಂದು ತನ್ನದೇ ಸಂಭಾಷಣೆಯಲ್ಲಿ ಕರೆಯುತ್ತಿದೆ. ಮಾ ಎಂದು ಕರೆಯುವ ಗಿಳಿಯ ಕೂಗೇ ಕೇಳಲು ಬಲು ಇಂಪಾಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತನ್ನ ಟ್ವಿಟರ್ ಖಾತೆಯಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದು, 5ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಇದನ್ನೂ ಓದಿ: Viral Video: ಕ್ಲಿಷ್ಟಕರ ಪಾರ್ಕಿಂಗ್​ನಿಂದ ಸಲೀಸಾಗಿ ಕಾರು ಹೊರತಂದ ಚಾಲಕ

ಇಲ್ಲಿ ತಾಯಿ ಓರ್ವ ಮಹಿಳೆಯಾಗಿದ್ದು, ಆಕೆ ಕೆಲಸದಲ್ಲಿ ನಿರತಳಾಗಿದ್ದಾಗ ಗಿಳಿ ಆಕೆಯನ್ನು ಕಾಯುತ್ತಿರುತ್ತದೆ. ಬರುವುದು ಕಾಣಿಸದೇ ಇದ್ದಾಗ ಅದು ತನ್ನ ಸಂಭಾಷಣೆ ಮೂಲಕ ಅಮ್ಮಾ ಎಂದು ಕರೆಯುತ್ತದೆ. ಆಗ ವಿಡಿಯೋದಲ್ಲಿ ಕಾಣಿಸದ ಆ ಮಹಿಳೆ ಆಯಿ ಬೇಟಾ (ಬರುತ್ತಿದ್ದೇನೆ ಮಗಾ) ಎಂದು ಹಿಂದಿಯಲ್ಲಿ ಹೇಳುತ್ತಾಳೆ. ಪಕ್ಷಿ ಮತ್ತು ಮನುಷ್ಯನ ಸಂಭಾಷಣೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು,  ನೆಟ್ಟಿಗರು ಗಿಳಿಯ ಇಂಪಾದ ಕೂಗಿಗೆ ಫಿದಾ ಆಗಿದ್ದಾರೆ. ಅಲ್ಲದೆ, ತಮ್ಮದೇ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಸೆಲ್ಫಿ ವಿಡಿಯೋ ಮಾಡುವಾಗ ಬಂದು ಸ್ಕರ್ಟ್​ ಎತ್ತಿ ನೋಡುವುದೇ? ಛಿ! ನಾಟಿ ಮಂಕಿ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:00 am, Sat, 28 May 22