
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳನ್ನು ನೋಡಿದಾಗ ನಗಬೇಕೋ ಅಳಬೇಕೋ ತಿಳಿಯಲ್ಲ. ಕೆಲವೊಮ್ಮೆ ನಮ್ಮ ಜನ ಬುದ್ಧಿವಂತರೋ ದಡ್ಡರೋ ಎನ್ನುವ ಅನುಮಾನ ಬರುತ್ತೆ. ಊರಿಗೆ ರಸ್ತೆಯಾದ್ರೆ (Road) ಸಹಜವಾಗಿ ಆ ಗ್ರಾಮಸ್ಥರಿಗೆ ಖುಷಿಯಾಗುತ್ತೆ. ಆದರೆ ಈ ಗ್ರಾಮದ ಜನರು ಡಾಂಬರೀಕರಣಗೊಂಡ ರಸ್ತೆಯ ಡಾಂಬರನ್ನೇ ಕಿತ್ತು ಬಕೆಟ್‌ಗೆ ತುಂಬಿಸಿಕೊಂಡು ಹೋಗಿದ್ದಾರೆ. ಈ ಘಟನೆಯೂ ಬಿಹಾರದಲ್ಲಿ (Bihar) ನಡೆದಿದೆ ಎನ್ನಲಾಗಿದೆ. ಈ ಘಟನೆಯೂ ಬಿಹಾರದಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಗ್ರಾಮದ ಜನರು ಸಿಕ್ಕಾಪಟ್ಟೆ ಬುದ್ಧಿವಂತರು ಎಂದು ಕಾಲೆಳೆದಿದ್ದಾರೆ.
@thatinadicmonk ಹೆಸರಿನ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಹೊಸ ರಸ್ತೆ, ಶೋಚನೀಯ ಸ್ಥಿತಿ ನಿರ್ಮಾಣ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಹೀಗೆ ಕದ್ದಿದ್ದಾರೆ. ಮೀಸಲಾತಿಯನ್ನು ಮೂಲಭೂತವಾಗಿ ಅಗತ್ಯ ನೀತಿಯಾಗಿ ನಂಬುವ, ಪೀಳಿಗೆಯಿಂದ ಪೀಳಿಗೆಗೆ ಉಚಿತ ಸಾರಿಗೆಯನ್ನು ಪ್ರೋತ್ಸಾಹಿಸುವ ದೇಶವು ಯಾವಾಗಲೂ ಇಂತಹ ವ್ಯಕ್ತಿಗಳನ್ನು ಉತ್ಪಾದಿಸುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ರಸ್ತೆಗೆ ಡಾಂಬರೀಕರಣ ಮಾಡಿ ಹೋಗಿದ್ದು, ರಸ್ತೆಯೂ ಹೊಸದರಂತೆಯೇ ಕಾಣುತ್ತಿದೆ. ಆದರೆ ಗ್ರಾಮಸ್ಥರು ರಸ್ತೆಗೆ ಹಾಕಿದ್ದ ಡಾಂಬರನ್ನು ಹಾರೆಯಿಂದ ಕಿತ್ತು ಬಕೆಟ್ ಗೆ ತುಂಬಿಸಿಕೊಳ್ಳುತ್ತಿರುವುದನ್ನು ಕಾಣಬಹುದು.
Brand new road, Pathetic construction. And got stolen by bhimtas for personal use.
The country that fundamentally believes reservation as a necessary policy, encourages freeloading as a generational privilege will always produce leeches like these. pic.twitter.com/enbJH1xJQM
— Based Monk 📢(#Unreserved) (@thatindicmonk) August 31, 2025
ಇದನ್ನೂ ಓದಿ:ಈಜುಕೊಳದಂತಾದ ಬೆಂಗಳೂರು ಡಬಲ್ ಡೆಕ್ಕರ್ ಫ್ಲೈಓವರ್: ವಿಡಿಯೋ ವೈರಲ್, ಎಂಜಿನಿಯರಿಂಗ್ ಅದ್ಭುತ ಎಂದ ನೆಟ್ಟಿಗರು
ಆಗಸ್ಟ್ 31 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಬಳಕೆದಾರರೊಬ್ಬರು, ತಮ್ಮ ಊರು ಅಭಿವೃದ್ಧಿಯತ್ತ ಸಾಗುತ್ತಿರುವುದನ್ನು ಪ್ರೋತ್ಸಾಹಿಸಬೇಕು, ಈ ರೀತಿ ಮಾಡುವುದನ್ನು ಸರಿಯಲ್ಲ ಎಂದಿದ್ದಾರೆ. ಇನ್ನೊಬ್ಬರು ಯಾವ ಕಾರಣಕ್ಕಾಗಿ ಕಾಂಕ್ರೀಟ್ ಹಾಕಲಾದ ರಸ್ತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಗ್ರಾಮಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:21 pm, Tue, 2 September 25