ಆನೆಗಳು ನಿಜಕ್ಕೂ ಮುಗ್ಧ ಜೀವಿಗಳು. ನೋಡಲು ದೈತ್ಯಾಕಾರದಲ್ಲಿದ್ದರೂ ತನ್ನ ಸೌಮ್ಯ ಸ್ವಭಾವದಿಂದಲೇ ಎಲ್ಲರಿಗೂ ಕೂಡ ಇಷ್ಟವಾಗುತ್ತದೆ. ಪುಟಾಣಿ ಆನೆಗಳ ತುಂಟಾಟಗಳು ನೋಡುವುದಕ್ಕೆ ಚಂದ. ಹೌದು ತನ್ನ ಸಂಗಡಿಗರ ಜೊತೆಯಲ್ಲಿ ತುಂಟಾಟ ಆಡುತ್ತಾ ಇರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಆನೆಗಳು ತನ್ನ ತಂಟೆಗೆ ಯಾರು ಬಾರದೇ ಇದ್ದರೆ ತನ್ನ ಪಾಡಿಗೆ ಇರುತ್ತವೆ. ಆದರೆ ತೊಂದರೆ ಕೊಟ್ಟರೆ ಅಟ್ಟಾಡಿಸಿಕೊಂಡು ಬಂದು ಸೊಂಡಿಲಿನಿಂದ ಬೀಸಿ ಬಿಡುತ್ತವೆ. ಹೀಗಾಗಿ ಹಿಂಡು ಹಿಂಡಾಗಿ ಆನೆಗಳು ಕಂಡರೆ ಅದರ ಸುದ್ದಿಗೆ ಹೋಗುವ ಪ್ರಯತ್ನವನ್ನು ಯಾರು ಮಾಡುವುದಿಲ್ಲ. ಆದರೆ ಇವರಿಬ್ಬರೂ ಬೇಕು ಬೇಕಂತಲೇ ಆನೆಗಳನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.
ಯುವಕನೊಬ್ಬನು ಗುಂಪಿನಲ್ಲಿದ್ದ ಆನೆಗೆ ಕೋಲಿನಿಂದ ಹೊಡೆದಿದ್ದಾನೆ. ಅಲ್ಲೇ ಇದ್ದ ಮತ್ತೊಬ್ಬ ಯುವಕನು ಆತನಿಗೆ ಬೆಂಬಲ ನೀಡುವುದನ್ನು ಕಾಣಬಹುದು. ಇವರಿಬ್ಬರನ್ನು ನೋಡಿ ಸುಮ್ಮನಿದ್ದ ಆನೆಯೂ ಕೊನೆಗೆ ಇಬ್ಬರನ್ನು ಅಟ್ಟಾಡಿಸಿಕೊಂಡು ಬಂದಿದೆ. ಐಎಎಸ್ ಅಧಿಕಾರಿ ಸುರೇಂದ್ರ ಮೆಹ್ರಾ ಅವರು 2022 ರಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ಬಳಕೆದಾರರೊಬ್ಬನು ಟ್ವೀಟ್ ಮಾಡಿದ ವೀಡಿಯೊವನ್ನು ಮರು ಪೋಸ್ಟ್ ಮಾಡಿದ್ದಾರೆ.
Just madness..
What makes it possible for someone to think in that way ?
Such provocations definitely leads to Man-Animal conflict . 🐘#ResponsibleBehaviour #ManAnimalConflict #Wildlife #nature @susantananda3 @ntca_india pic.twitter.com/Il8jx4AqgZ— Surender Mehra IFS (@surenmehra) February 23, 2024
ಈ ವಿಡಿಯೋದ ಕೆಳಗೆ ‘ಇದು ಹುಚ್ಚುತನ. ಆ ರೀತಿಯಲ್ಲಿ ಯೋಚಿಸಲು ಯಾರಿಗಾದರೂ ಸಾಧ್ಯವೇ. ಇಂತಹ ಪ್ರಚೋದನೆಗಳು ಖಂಡಿತವಾಗಿಯೂ ಮನುಷ್ಯ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತವೆ” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ತುಣುಕಿನಲ್ಲಿಕಿನಲ್ಲಿ ಆನೆಗಳ ಹಿಂಡಿನ ಮುಂದೆ ಇಬ್ಬರು ವ್ಯಕ್ತಿಗಳು ನಿಂತಿರುವುದನ್ನು ನೋಡಬಹುದು. ಒಬ್ಬ ವ್ಯಕ್ತಿಯು ತನ್ನ ಮುಂಭಾಗದಲ್ಲಿರುವ ಆನೆಯ ಬಳಿಗೆ ಬಂದು ಕೋಲಿನಿಂದ ಚುಚ್ಚುತ್ತಿದ್ದಾನೆ. ಈ ವೇಳೆಯಲ್ಲಿ ಸುಮ್ಮನೆ ಇದ್ದ ಆನೆಯು ಇಬ್ಬರ ಮೇಲೆ ದಾಳಿಯಿಡಲು ಮುಂದಾಗಿದ್ದು, ಇಬ್ಬರೂ ಓಡಿ ಹೋಗುವುದರೊಂದಿಗೆ ವೀಡಿಯೊ ಕೊನೆಗೊಂಡಿದೆ.
ಇದನ್ನೂ ಓದಿ: ಮೊದ್ಲು ಮದುವೆ ಆಮೇಲೆ ಓದು, 13 ವರ್ಷಕ್ಕೆ ಮದುವೆಗೆ ರೆಡಿಯಾದ ಬಾಲಕ;ವಿಡಿಯೋ ವೈರಲ್
ಈ ವಿಡಿಯೋವು 16,000 ವೀಕ್ಷಣೆಗಳನ್ನು ಸಂಗ್ರಹಿಸಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ. ವಿಡಿಯೋ ನೋಡಿದ ಬಳಕೆದಾರರೊಬ್ಬರು, “ನಿಜ, ಈ ರೀತಿಯ ವರ್ತನೆಯನ್ನು ಮೊದಲು ತಪ್ಪಿಸಬೇಕು” ಎಂದಿದ್ದಾರೆ. ಮತ್ತೊಬ್ಬರು, ” ಇವರಿಬ್ಬರ ಮೇಲೆ ಕಟ್ಟುನಿಟ್ಟಾದ ಕ್ರಮದ ಅಗತ್ಯವಿದೆ,” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಇದು ಮೂರ್ಖ-ಪ್ರಾಣಿ ಸಂಘರ್ಷ” ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು, “ನಿಜವಾಗಿಯೂ ಆಘಾತಕಾರಿ ನಡವಳಿಕೆ. ಯುವಕರು ಆನೆ ಮೇಲೆ ದಾಳಿ ಮಾಡುತ್ತಿರುವ ರೀತಿಯಲ್ಲಿ, ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ” ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ