ಬಂಡಿಪುರದಲ್ಲಿ ಪ್ರವಾಸಿಗರ ಮೇಲೆ ಆನೆ ದಾಳಿ: ಕಾರಿನಿಂದ ಇಳಿದ ತಪ್ಪಿಗೆ 25 ಸಾವಿರ ರೂ. ದಂಡ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಮತ್ತು ಮೂಲೆಹೊಳೆ ನಡುವೆ ಇತ್ತೀಚೆಗೆ ಕಾಡಿನ ಮಧ್ಯೆ ಕಾರಿನಿಂದ ಇಳಿದ ಪ್ರಯಾಣಿಕರ ಮೇಲೆ ಆನೆ ದಾಳಿ ಕೇಸ್ಗೆ ಸಂಬಂಧಿಸಿದಂತೆ ಬಂಡಿಪುರ ಅರಣ್ಯ ಇಲಾಖೆಯಿಂದ ಪ್ರಯಾಣಿಕರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಬಂಡೀಪುರ ಎಸಿಎಫ್ ಮತ್ತು ಮೂಲೆಹೊಳೆ ಆರ್ಎಫ್ಒರಿಂದ ವಿಚಾರಣೆ ಮಾಡಿ ಆಂಧ್ರದ ವಿಶಾಖಪಟ್ಟಣ ಮೂಲದ ಪ್ರವಾಸಿಗನಿಗೆ ದಂಡ ವಿಧಿಸಲಾಗಿದೆ.
ಚಾಮರಾಜನಗರ, ಫೆಬ್ರವರಿ 21: ಕಾಡಿನ ಮಧ್ಯೆ ಕಾರಿನಿಂದ ಇಳಿದ ಪ್ರಯಾಣಿಕರ ಮೇಲೆ ಆನೆ (Elephant) ದಾಳಿ ಕೇಸ್ಗೆ ಸಂಬಂಧಿಸಿದಂತೆ ಬಂಡಿಪುರ ಅರಣ್ಯ ಇಲಾಖೆಯಿಂದ ಪ್ರಯಾಣಿಕರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಫೆ.11ರಂದು ಬಂಡೀಪುರದ ಮೂಲೆಹೊಳೆ ಸಮೀಪ ಬಂಡೀಪುರ-ಕೇರಳ ಬಳಿ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಕಾರು ಬಿಟ್ಟು ಕಾಡಿನಲ್ಲಿ ರಸ್ತೆಗಿಳಿದ ಇಬ್ಬರನ್ನೂ ಕಾಡಾನೆ ಅಟ್ಟಾಡಿಸಿಕೊಂಡು ಬಂದಿತ್ತು. ಕೂದಲೆಳೆ ಅಂತರದಲ್ಲಿ ಇಬ್ಬರು ಪಾರಾಗಿದ್ದರು. ಮಾಧ್ಯಮ ವರದಿ ಆಧರಿಸಿ ಘಟನೆಗೆ ಕಾರಣವಾದ ಆಂಧ್ರ ಮೂಲದ ಇಬ್ಬರು ವ್ಯಕ್ತಿಗಳನ್ನು ವಿಚಾರಣೆ ಮಾಡಿದ ಅರಣ್ಯ ಇಲಾಖೆ ಆಂಧ್ರದ ವಿಶಾಖಪಟ್ಟಣ ಮೂಲದ ಪ್ರವಾಸಿಗ ಮೂರ್ತಿಗೆ 25 ಸಾವಿರ ರೂ. ದಂಡ ವಿಧಿಸಿದೆ. ಬಂಡೀಪುರ ಎಸಿಎಫ್ & ಮೂಲೆಹೊಳೆ ಆರ್ಎಫ್ಒರಿಂದ ವಿಚಾರಣೆ ಮಾಡಲಾಗಿದೆ.
ಪ್ರಾಣಿಗಳ ದಾಳಿಯನ್ನು ತಪ್ಪಿಸಲು ಅರಣ್ಯ ಇಲಾಖೆಯು ಅರಣ್ಯದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಿದೆ. ಆದರು ಕೂಡ ಕೇರಳದಿಂದ ಕರ್ನಾಟಕಕ್ಕೆ ಬರುವ ಮಾರ್ಗದಲ್ಲಿ ಇಬ್ಬರು ವ್ಯಕ್ತಿಗಳು ಫೋಟೋ ತೆಗೆಯಲು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾರಿನಿಂದ ಕೆಳೆಗೆ ಇಳಿದಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ಚಿತ್ರ ಸೆರೆ ಹಿಡಿಯಲು ನಿಂತ ಪ್ರವಾಸಿಗರು: ಆನೆ ತುಳಿತದಿಂದ ಕೂದಲೆಳೆ ಅಂತರದಿಂದ ಪಾರಾದ ವ್ಯಕ್ತಿ
ಕೆಳಗೆ ಇಳಿದು ಸೆರೆ ಹಿಡಿಯುವಾಗ ಆನೆ ಪ್ರತ್ಯಕ್ಷವಾಗಿದ್ದು, ಇಬ್ಬರನ್ನು ಅಟ್ಟಿಸಿಕೊಂಡು ಬಂದಿತ್ತು. ಆನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಲು ಆರಂಭಿಸಿದ್ದರು. ಓಡುವಾಗ ಓರ್ವ ವ್ಯಕ್ತಿ ಕೆಳಗೆ ಬಿದ್ದಿದ್ದಾನೆ. ಆನೆ ಆತನನ್ನು ಸೊಂಡಿಲಿನಿಂದ ತಿವಿದಿದ್ದು, ವ್ಯಕ್ತಿ ಪಕ್ಕದಲ್ಲಿರುವ ಮರದ ಹಿಂದೆ ಅವಿತುಕೊಂಡಿದ್ದಾನೆ. ನಂತರ ಆನೆ ಕಾಡಿನೊಳಗೆ ಹೋಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕಾಡಾನೆ ತುಳಿತಕ್ಕೆ ಮತ್ತೊಬ್ಬ ರೈತ ಬಲಿ
ರಾಮನಗರ: ಹೊರವಲಯ ಹಾಗೂ ಕನಕಪುರ ತಾಲೂಕು ಈಗ ರೈತರಿಗೆ ಡೇಂಜರ್ ಸ್ಪಾಟ್ ಆಗಿ ಪರಣಿಮಿಸಿದೆ. ಏಕೆಂದರೆ ಕೇವಲ ಮೂರು ತಿಂಗಳ ಅಂತರದಲ್ಲಿ ಎಂಟಕ್ಕೂ ಹೆಚ್ಚು ಬಾರಿ ಕಾಡಾನೆ ರೈತರ ಮೇಲೆ ಅಟ್ಯಾಕ್ ಮಾಡಿದ್ದು, ಒಬ್ಬ ಮಹಿಳೆ ಸೇರಿದಂತೆ ಮೂರು ಜನ ರೈತರು ತಮ್ಮ ಪ್ರಾಣ ಕಳೆದುಕೊಂಡು ಇನ್ನೊಬ್ಬ ಕಾರ್ಮಿಕ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.
ಇದನ್ನೂ ಓದಿ: ಆನೆ ಬಂತೊಂದ್ ಆನೆ; ರಸ್ತೆ ಮಧ್ಯೆ ಓಡಾಡುತ್ತ ವಾಹನಗಳ ತಪಾಸಣೆ ನಡೆಸಿದ ಒಂಟಿ ಸಲಗ, ಉಸಿರು ಬಿಗಿ ಹಿಡಿಯುವ ದೃಶ್ಯ
ತಾನು ಬೆಳೆದ ರಾಗಿ ಬೆಳೆ ಕಣವನ್ನು ಉಳಿಸಿಕೊಳ್ಳಲು ರಾತ್ರಿ ಕಣದ ಬಳಿ ಮಲಗಿದ್ದ ಗೇರೆಹಳ್ಳಿಯ ಪುಟ್ನಂಜ ಕೂಡ ಕಾಡಾನೆ ದಾಳಿಗೆ ತುತ್ತಾಗಿ ಬೆಳಗಾಗೋದ್ರಳಗೆ ಹೆಣವಾಗಿ ಪತ್ತೆಯಾಗಿದ್ದ. ರಾತ್ರಿ ಚಳಿ ಇರುವ ಹಿನ್ನೆಲೆ ಪ್ಲಾಸ್ಟಿಕ್ನ ಹೊದ್ದುಕೊಂಡು ಮಲಗಿದ್ದ, ಬೆಳಗಿನ ಜಾವ ಆಹಾರ ಹುಡುಕಿಕೊಂಡು ಬಂದ ಕಾಡಾನೆ ಕಣದ ಬಳಿ ಮಲಗಿದ್ದ ಪುಟ್ನಂಜನನ್ನು ಹೊಸಕಿ ಹಾಕಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.