
Viral Video of Frogs : ಈ ವಿಡಿಯೋ 13 ಮಿಲಿಯನ್ ವೀಕ್ಷಕರನ್ನು ಮನ ಸೆಳೆದಿವೆ. ಒಂದೇ ಬಾಟಲಿಯ ಕ್ಯಾಪ್ ಮೇಲೆ ತೇಲಲು ಈ ಎರಡೂ ಕಪ್ಪೆಗಳು ಪ್ರಯತ್ನಿಸುತ್ತಿವೆ. ನನ್ನನ್ನೂ ಕರೆದುಕೊಂಡು ಹೋಗು ಎಂದು ಇನ್ನೊಂದು ಕಪ್ಪೆ ಕ್ಯಾಪ್ ಮೇಲೆ ಏರಲು ನೋಡುತ್ತಿದೆ. ಆದರೆ ಕ್ಯಾಪ್ ಮೇಲಿರುವ ಕಪ್ಪೆ ಅದಕ್ಕೆ ಆಸ್ಪದ ಕೊಡುತ್ತಿಲ್ಲ. ಹಿಂಗಾಲಿನಿಂದ ಆ ಕಪ್ಪೆಯನ್ನು ತಳ್ಳುತ್ತಲೇ ಇದೆ. ನಾವಷ್ಟೇ ಹೀಗೆ ಎಂದುಕೊಂಡಿದ್ದೆವು ಈ ಪ್ರಾಣಿಗಳೂ…! ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ, ಬಿದ್ದು ಬಿದ್ದು ನಗುತ್ತಿದ್ದಾರೆ, ಉರುಳಾಡಿ ಹೊರಳಾಡಿ ನಗುತ್ತ ಈ ಅಪರೂಪದ ವಿಡಿಯೋ ಕಂಟೆಂಟ್ ಹಂಚಿಕೊಂಡಿದ್ದಾರೆ. ಬ್ಯುಟೆಂಗೆಬೀಡೆನ್ ಎನ್ನುವವರು ಫೈನಲ್ ಸೀನ್ ಆಫ್ ಟೈಟಾನಿಕ್ ಎಂಬ ಶೀರ್ಷಿಕೆಯಲ್ಲಿ ಟ್ವಿಟರ್ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಸ್ಪರ್ಧೆ ಎನ್ನುವುದು, ತನ್ನ ಉಳಿವು ಎನ್ನುವುದು, ಸ್ವಾರ್ಥ ಎನ್ನುವುದು, ತನ್ನ ಗುರಿ ಎನ್ನುವುದು ಪ್ರಾಣಿಗಳಲ್ಲೂ ಎಷ್ಟು ಸ್ಪಷ್ಟವಾಗಿದೆ ಅಲ್ಲವೆ? ವಿಡಿಯೋ ನೋಡಿದರೆ ಯಾರಿಗೂ ನಗು ಬರುವಂಥದ್ದೇ ಆದರೆ ವಾಸ್ತವ!
ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:41 pm, Mon, 15 August 22