Viral Video : ‘ನಾವೂ ಅಳುತ್ತೇವೆ’ ಎಂದು ಒಪ್ಪಿಕೊಳ್ಳುವುದೇ ಮನಸಿನ ಸೌಂದರ್ಯ

Men : ನೀವು ಕೊನೆಯ ಬಾರಿ ಅತ್ತಿದ್ದು ಯಾವಾಗ ಎಂದು ಇನ್​ಸ್ಟಾಗ್ರಾಂನ ಕಂಟೆಂಟ್​ ಕ್ರಿಯೇಟರ್​ ಪ್ರಶ್ನಿಸಿದಾಗ ಈ ಯುವಕರು ಏನೆಲ್ಲ ಉತ್ತರಿಸಿದ್ದಾರೆ, ಓದಿ.

Viral Video : ‘ನಾವೂ ಅಳುತ್ತೇವೆ’ ಎಂದು ಒಪ್ಪಿಕೊಳ್ಳುವುದೇ ಮನಸಿನ ಸೌಂದರ್ಯ
ಉತ್ತರಿಸುತ್ತಿರುವ ಯುವಕರು
Edited By:

Updated on: Sep 02, 2022 | 10:26 AM

Viral Video : ಇನ್​ಸ್ಟಾಗ್ರಾಂನ ಕಂಟೆಂಟ್ ಕ್ರಿಯೇಟರ್​ಗಳು ಅಪರಿಚಿತರಿಗೆ ವಿಭಿನ್ನ ರೀತಿಯ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆಯುವ ಪ್ರವೃತ್ತಿಯಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ವಿಡಿಯೋಗೆ ಬರುವ ಪ್ರಕ್ರಿಯೆಗಳು ಅವರಲ್ಲಿ ಮತ್ತಷ್ಟು ಉತ್ಸಾಹ ತುಂಬುತ್ತವೆ ಮತ್ತು ಜನಪ್ರಿಯತೆಯನ್ನೂ ತಂದುಕೊಡುತ್ತವೆ. ಆ ಪ್ರಶ್ನೆಗಳು ಮೂರ್ಖತನದಿಂದಲೂ ಕೂಡಿರಬಹುದು. ಹಾಗೇ ಗಂಭೀರವಾಗಿಯೂ. ಈ ಪೈಕಿ ಒಂದು ಹೊಸ ವಿಡಿಯೋ ನೆಟ್ಟಿಗರನ್ನು ಭಾವನಾತ್ಮಕವಾಗಿ ಹಿಡಿದಿಟ್ಟಿದೆ. ಕಂಟೆಂಟ್ ಕ್ರಿಯೇಟರ್ ಕೆಲವು ಯುವಕರಿಗೆ ಕೇಳಿದ ಪ್ರಶ್ನೆ, ‘ಕೊನೆಯ ಬಾರಿ ನೀವು ಅತ್ತಿದ್ದು ಯಾವಾಗ?’

ಗುಡ್​ನ್ಯೂಸ್ ಮೂವ್‌ಮೆಂಟ್‌ ಎಂಬ ಪುಟದಲ್ಲಿ ಈ ವಿಡಿಯೋ ನೋಡಬಹುದಾಗಿದೆ. 1.5 ಲಕ್ಷ ವೀಕ್ಷಕರನ್ನು ಇದು ಸೆಳೆದಿದೆ. ‘ನಾವು ಅವರೆಲ್ಲರನ್ನೂ ಅಪ್ಪಿಕೊಳ್ಳಬಹುದೇ, ಅವರಿಗೆ ಅಪ್ಪುಗೆಯ ಅಗತ್ಯವಿದೆ ಎನ್ನಿಸುತ್ತಿದೆ’ ಎಂದು ಒಬ್ಬರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ‘ಇಂಥ ಪ್ರಾಮಾಣಿಕತೆಯನ್ನು ಪ್ರೀತಿಸುತ್ತೇನೆ’ ಎಂದಿದ್ದಾರೆ ಮತ್ತೊಬ್ಬರು. ‘ಪುರುಷರೂ ಅಳುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳಲು ಯಾವುದೇ ಸಮಸ್ಯೆಯಿಲ್ಲ ಎಂಬುದು ಎಷ್ಟು ಸುಂದರವಾಗಿದೆ’ ಎಂದಿದ್ದಾರೆ ಮಗದೊಬ್ಬರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:21 am, Fri, 2 September 22