Viral Video: ಕಾರಿನ ಅಣ್ಣನಿಗೆ ಜೈ; ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಸೆದೆಬಡಿಯುತ್ತಿರುವ ಕಾರ್​ ಚಾಲಕ

|

Updated on: Aug 17, 2023 | 5:45 PM

Viral Video : ಇಂಥ ನೈಜ ವಿಡಿಯೋ ಅನ್ನು ಜನ್ಮದಲ್ಲಿಯೇ ನೋಡಿರಲಿಲ್ಲ. ಈ ಕಳ್ಳನಿಗೆ ತಕ್ಕ ಶಾಸ್ತಿ ಮಾಡಿದ ಕಾರ್​ ಅಣ್ಣ ಮಾತ್ರ ಹೀರೋ ಎಂದು ಜೈಕಾರ ಹೇಳುತ್ತಿದೆ ನೆಟ್​ ಮಂದಿ. ಕಾರಿನಲ್ಲಿ ಬಂದವರು ಪೊಲೀಸರಿರಬಹುದೇ? ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಯಾರೇ ಆಗಿರಲಿ ಇಂಥವರು ಜಗತ್ತಿನ ತುಂಬಾ ಇದ್ದರೆ ಅಪರಾಧ ಎನ್ನುವುದೇ ಇರುವುದಿಲ್ಲ ಎಂದಿದ್ದಾರೆ ಕೆಲವರು.

Viral Video: ಕಾರಿನ ಅಣ್ಣನಿಗೆ ಜೈ; ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಸೆದೆಬಡಿಯುತ್ತಿರುವ ಕಾರ್​ ಚಾಲಕ
ಕಳ್ಳನನ್ನು ಸೆದೆಬಡಿಯುತ್ತಿರುವ ಕಾರ್​ ಚಾಲಕ
Follow us on

Thief : ಕಾರು ಓಡಿಸುತ್ತಿರುವ ಅಣ್ಣನಿಗೆ ಪ್ರಣಾಮಗಳು. ಕಾರಿನ ಅಣ್ಣನಂಥವರು ಎಲ್ಲೆಡೆಯೂ ಬೇಕು. ಅಣ್ಣಾ ನೀವು ಗ್ರೇಟ್​ ನಿಮಗೆ ನಮಸ್ಕಾರಗಳು. ಕಳ್ಳನಿಗೆ ಬುದ್ಧಿ ಕಲಿಸಿದವರು ಪೊಲೀಸರೇ ಇರಬೇಕು. ಇಂಥ ಜನರಿದ್ದರೆ ಜಗತ್ತಿನಲ್ಲಿ ಅಪರಾಧಗಳೇ ಇರುವುದಿಲ್ಲ. ಡ್ರೈವರ್ (Driver)​ ಅಣ್ಣನಿಗೆ ಜೈ ರಾಮ್​ಜೀಕೀ. ಗ್ಯಾರಂಟೀ ಈ ಕಾರಿನೊಳಗೆ ಬಂದವರು ಸರ್ದಾರ್​ಜೀನೇ ಇರುತ್ತಾರೆ. ನಿಜವಾದ ಸಿನೆಮಾ ನೋಡಿದೆ ಈವತ್ತು. ಡ್ರೈವರಣ್ಣನಿಗೆ ಸಲಾಮ್​. ನೀವು ಸಹಾಯವನ್ನು ಮಾಡಿ ನನ್ನ ಹೃದಯವನ್ನು ಗೆದ್ದಿದ್ದೀರಿ. ಮೊದಲ ಸಲ ಇಂಥ ಒಳ್ಳೆಯ ವಿಡಿಯೋ ನೋಡಿ ಖುಷಿಯೂ ಆಯಿತು ನಗೂ ಕೂಡ ಬರುತ್ತಿದೆ… 7 ಲಕ್ಷಕ್ಕೂ ಅಧಿಕ ಜನರು ನೋಡಿರುವ ಈ ವಿಡಿಯೋದಡಿ ಸಹಸ್ರಾರು ಜನರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : Viral Video: ಸೆಲ್ಫೀ ತೆಗೆದುಕೊಳ್ಳುತ್ತಿರುವ ಗಾಂಧೀಜಿ, ಭಗತ್, ಬೋಸ್​, ಝಾನ್ಸೀ, ಪಾಂಡೆ, ತಿಲಕ್

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜು. 8ರಂದು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮೊದಲಿಗೆ ನೋಡಿದರೆ ಅಬ್ಬಾ ಎನ್ನಿಸುತ್ತದೆ. ಆದರೆ ಮತ್ತೆ ನೋಡಿದರೆ ಇದೇನು ಪೂರ್ವನಿಯೋಜಿತವೋ ಎಂದೆನ್ನಿಸುತ್ತದೆ. ಇನ್ನೂ ನೋಡಿದರೆ, ಇಲ್ಲ ಇಲ್ಲ ಆ ಪರಿ ಆ ಕಳ್ಳನನ್ನು ಗುದ್ದಿ ಗುದ್ದಿ ಬೀಳಿಸಿದ್ದಾನೆಂದರೆ ಇದು ಖಂಡಿತ ನಿಜವಾಗಿಯೂ ನಡೆದದ್ದೇ ಎನ್ನಿಸುತ್ತದೆ. ನೆಟ್ಟಿಗರಂತೂ ಪ್ರತಿಕ್ರಿಯೆಗಳ ಹೊಳೆಯನ್ನೇ ಹರಿಸಿದ್ದಾರೆ. ಕಾರಿನಲ್ಲಿ ಬಂದ ‘ಅಣ್ಣ’ನನ್ನು ಹೊಗಳಿದ್ದಾರೆ. ಆದರೆ ನಿಜಕ್ಕೂ ನಡೆದದ್ದು ಏನು?

ಮಹಿಳೆಯ ಬ್ಯಾಗ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನ ಅವಸ್ಥೆ ನೋಡಿ

ಮಹಿಳೆಯೊಬ್ಬಳು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿರುವಾಗ ದ್ವಿಚಕ್ರವಾಹನದಲ್ಲಿ ಬಂದ ಕಳ್ಳನೊಬ್ಬ ಬಂದು ಆಕೆಯ ಬ್ಯಾಗ್​ ಕದ್ದಿದ್ದಾನೆ. ಇನ್ನೇನು ದ್ವಿಚಕ್ರವಾಹನದ ಮೇಲೆ ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಎದುರಿನಿಂದ ಕಾರ್​ ಒಂದು ಬಂದಿದೆ. ತಕ್ಷಣವೇ ಕಳ್ಳನಿಗೆ ಗುದ್ದಿದೆ. ಒಂದಲ್ಲ ಎರಡಲ್ಲ ನಾಲ್ಕೈದು ಬಾರಿ. ಅಂತೂ ಆ ಕಳ್ಳನಿಗೆ ತಕ್ಕ ಶಾಸ್ತಿ ಮಾಡುವಲ್ಲಿ ಕಾರಿನೊಳಗಿನ ವ್ಯಕ್ತಿ ಯಶಸ್ವಿಯಾಗಿದ್ಧಾನೆ. ಇತ್ತ ಮಹಿಳೆ  ತನ್ನ ಬ್ಯಾಗ್ ಎತ್ತಿಕೊಂಡು ಹೊರಟಿದ್ದಾಳೆ.

ಇದನ್ನೂ ಓದಿ : Viral: ಉಬರ್ ಆಟೋ ರೈಡ್ ಕೇವಲ ರೂ 6, ಏನಿದು ಬೆಂಗಳೂರಿನಲ್ಲಿ ಮ್ಯಾಜಿಕ್?

ಈ ಘಟನೆ ಎಲ್ಲಿ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ. ಸಿನಿಮೀಯ ರೀತಿಯಲ್ಲಿ ನಡೆದ ಇದನ್ನು ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಕಳ್ಳನನ್ನು ಸೆದೆಬಡಿಯುವ ಮನುಷ್ಯರು ಎಲ್ಲೆಡೆಯೂ ಇರಲಿ ಎಂದು ಹಾರೈಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:41 pm, Thu, 17 August 23