ಬರೋಬ್ಬರಿ 4ಕೋಟಿ ರೂ.ಗೆ ಹರಾಜಾದ ಈ ನಾಣ್ಯ; ಇದರ ವಿಶೇಷತೆ ಏನು?
ಅಮೆರಿಕದ ಗ್ರೇಟ್ ಕಲೆಕ್ಷನ್ ಹೆಸರಿನ ಸಂಸ್ಥೆಯೊಂದು ನಡೆಸಿದ ಹರಾಜಿನಲ್ಲಿ ಅಪರೂಪದ ನಾಣ್ಯವೊಂದನ್ನು ಸುಮಾರು 4.25 ಕೋಟಿ ರೂ.ಗೆ ಹರಾಜು ಮಾಡಲಾಗಿದೆ. ಈ ನಾಣ್ಯ 4 ಕೋಟಿಗೆ ಹರಾಜಾಗಲು ಕಾರಣವೇನು? ಏನಿದರ ವಿಶೇಷತೆ? ಸಂಪೂರ್ಣ ಮಾಹಿತಿ ಇಲ್ಲಿದೆ.
ಅಮೆರಿಕದ ಗ್ರೇಟ್ ಕಲೆಕ್ಷನ್ ಹೆಸರಿನ ಸಂಸ್ಥೆಯೊಂದು ನಡೆಸಿದ ಹರಾಜಿನಲ್ಲಿ ಅಪರೂಪದ ನಾಣ್ಯವೊಂದು ಸುಮಾರು 4.25 ಕೋಟಿ ರೂ.ಗೆ ಹರಾಜಾಗಿದೆ. ಈ ಬಗ್ಗೆ ಕ್ಯಾಲಿಫೋರ್ನಿಯಾ ಗ್ರೇಟ್ ಕಲೆಕ್ಷನ್ಸ್ ನ ಅಧ್ಯಕ್ಷ ಇಯಾನ್ ರಸೆಲ್ ಮಾಹಿತಿ ನೀಡಿದ್ದು, ಸದ್ಯ ಒಂದು ನಾಣ್ಯ ಬರೋಬ್ಬರಿ 4ಕೋಟಿಗೆ ಹರಾಜಾಗಿರುವುದು ಎಲ್ಲೆಡೆ ಸದ್ದು ಮಾಡುತ್ತಿದೆ.
ಈ ನಾಣ್ಯವನ್ನು 1975 ರಲ್ಲಿ ತಯಾರಿಸಲಾಗಿದ್ದು, ಇದು 20ನೇ ಶತಮಾನದ ಅಪರೂಪದ ನಾಣ್ಯಗಳಲ್ಲೊಂದು. ಈ ನಾಣ್ಯ ಅಮೆರಿಕದ ಕಾಸಿನದು ಎಂದು ಹರಾಜು ಏಜೆನ್ಸಿ ಹೇಳಿದೆ. ಈ ನಾಣ್ಯದ ಮೇಲೆ ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರ ಚಿತ್ರವಿರುವುದನ್ನು ಕಾಣಬಹುದು. ಇದರ ಹೊರತಾಗಿ ಪ್ರತಿ ನಾಣ್ಯದ ಮೇಲೆ ಮಾಡಲಾಗುವ ‘ಎಸ್’ ಚಿಹ್ನೆಯನ್ನು ಈ ನಾಣ್ಯದಲ್ಲಿ ಮಾಡಲಾಗಿಲ್ಲ. ಇಡೀ ಪ್ರಪಂಚದಲ್ಲಿ ಈ ರೀತಿಯ ಎರಡು ನಾಣ್ಯಗಳು ಮಾತ್ರ ಇವೆ, ಅದಕ್ಕಾಗಿಯೇ ಈ ನಾಣ್ಯವು ತುಂಬಾ ಅಪರೂಪವಾಗಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಪ್ಲಾಟ್‌ಫಾರ್ಮ್‌ನಿಂದ ಹಳಿ ಮೇಲೆ ಬಿದ್ದ ಯುವತಿ!
ಗ್ರೇಟ್ ಕಲೆಕ್ಷನ್ ಹೆಸರಿನ ಹರಾಜು ಸಂಸ್ಥೆಯು ಈ ಅಪರೂಪದ ನಾಣ್ಯದ ಹರಾಜನ್ನು ಆನ್‌ಲೈನ್‌ನಲ್ಲಿ ನಡೆಸಿತು. ಹರಾಜಿನ ಮೊದಲು, ಈ ನಾಣ್ಯವು ಓಹಿಯೋದ ಮೂವರು ಸಹೋದರಿಯರ ಬಳಿ ಇತ್ತು. ಆದರೆ, ಅವರ ಗುರುತನ್ನು ಗೌಪ್ಯವಾಗಿ ಇರಿಸಲಾಗಿದೆ. 1978ರಲ್ಲಿ ಈ ನಾಣ್ಯಗಳಲ್ಲಿ ಒಂದನ್ನು 15 ಲಕ್ಷ ರೂ.ಗೆ ಮಾರಾಟ ಮಾಡಿತ್ತು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:19 pm, Wed, 6 November 24