Viral Video: ಸಾಬೂನು ತಿನ್ನುತ್ತಿರುವ ಯುವತಿ; ಹೊಟ್ಟೆಯಲ್ಲಿ ನೊರೆಗುಳ್ಳೆಗಳೆದ್ದವೋ? ಎಂದ ನೆಟ್ಟಿಗರು

Hyper Realistic : ತಾನೇ ತಯಾರಿಸಿದ ಈ ಸೋಪ್​ ಅನ್ನು ಈ ಯುವತಿ ಮನಃಪೂರ್ವಕವಾಗಿ ತಿನ್ನುತ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಎಲ್ಲ ಬಿಟ್ಟು ಸೋಪ್ ತಿನ್ನುವ ದರ್ದು ಏನಿತ್ತು ಎಂದು ಕೆಲವರು. ಅಯ್ಯೋ ನನಗೆ ಈ ವಿಡಿಯೋ ನೋಡಲಾಗುತ್ತಿಲ್ಲ ಎಂದು ಇನ್ನೂ ಕೆಲವರು. ನಿಮ್ಮ ಸೃಜನಶೀಲತೆ ಅದ್ಭುತ ಎಂದು ಒಂದಿಷ್ಟು ಜನ.

Viral Video: ಸಾಬೂನು ತಿನ್ನುತ್ತಿರುವ ಯುವತಿ; ಹೊಟ್ಟೆಯಲ್ಲಿ ನೊರೆಗುಳ್ಳೆಗಳೆದ್ದವೋ? ಎಂದ ನೆಟ್ಟಿಗರು
'ಸಾಬೂನು' ತಿನ್ನುತ್ತಿರುವ ಸುಚಿ ದತ್ತಾ

Updated on: Oct 07, 2023 | 11:47 AM

Soap: ಏನೇನೋ ತಿಂದು ವಿಶ್ವದಾಖಲೆ (World Record) ಮಾಡಿರುವ ಅನೇಕರನ್ನು ನೋಡಿದ್ದೀರಿ. ಆದರೆ ಸಾಬೂನು?! ಊಹಿಸಿಕೊಳ್ಳಲೂ ಕಷ್ಟವೆನ್ನಿಸುವ ಸಂಗತಿ ಇದು. ಕೆಮಿಕಲ್​ಯುಕ್ತ ಸಾಬೂನನ್ನು ತಿನ್ನುವುದೆಂದರೆ ಹುಚ್ಚೇ ಇರಬೇಕು ಎಂದು ನೀವು ಅಂದುಕೊಳ್ಳಲೂಬಹುದು. ಆದರೆ ಇಲ್ಲೊಬ್ಬ ಯುವತಿ ಸಾಬೂನು ತಿಂದು ನೆಟ್ಟಿಗರ ಕುತೂಹಲವನ್ನು ಹೆಚ್ಚಿಸಿದ್ದಾಳೆ. ಅನೇಕರು ಹುಬ್ಬೇರಿಸಿದ್ದಾ, ಮುಖವನ್ನೂ ಕಿವುಚಿದ್ದಾರೆ. ಈ ಸುದ್ದಿಯನ್ನು ಓದುತ್ತ ನಿಮಗೆ ಹೇಗೆನ್ನಿಸುತ್ತಿದೆ? ಒಂದು ಕೈಯಲ್ಲಿ ಡೆಟಾಲ್ ಇನ್ನೊಂದು ಕೈಯಲ್ಲಿ ದೊಡ್ಡ ಸಾಬೂನು ಹಿಡಿದುಕೊಂಡ ಈಕೆ ಕಚಕಚನೆ ಸಾಬೂನು ತಿನ್ನಲು ಶುರುಮಾಡುತ್ತಾಳೆ. ಅದು ಸ್ವಾದಿಷ್ಠವಾಗಿದೆ ಎಂಬ ಮುಖಭಾವವನ್ನೂ ಗಮನಿಸಬಹುದು.

ಇದನ್ನೂ ಓದಿ : Viral: ನಾಥೂರಾಮ ಗೋಡ್ಸೆ;’ಅವನು ಕೊಲೆಗಡುಕನೇ ಆಗಿರಲಿ, ಹಿಂದೂವಾಗಿದ್ದಲ್ಲಿ ಎಲ್ಲಾ ಕ್ಷಮ್ಯ, ಹೊಸ ಭಾರತಕ್ಕೆ ಸ್ವಾಗತ’

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಸೆ.4ರಂದು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು ಈತನಕ 1.3 ಲಕ್ಷ ಜನರು ಲೈಕ್ ಮಾಡಿದ್ದಾರೆ. ಈ ಸಾಬೂನನ್ನು ತಿನ್ನುವಾಕೆ ಸುಚಿ ದತ್ತಾ. ಈಕೆಯೇ ಈ ಹೈಪರ್ ರಿಯಲಿಸ್ಟಿಕ್​ ಸೋಪ್​ ತಯಾರಿಸಿದ್ದಾಳೆ. ನಾನು ಸೋಪ್​ ತಿನ್ನಲು ಇಷ್ಟಪಡುತ್ತೇನೆ ಎಂದು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಾಳೆ.

ಸೋಪ್​ ತಿನ್ನುತ್ತಿರುವ ಸುಚಿ ದತ್ತಾ

ಸಾಬೂನಿನ ವಿನ್ಯಾಸದಲ್ಲಿರುವ ಕೇಕ್​ ಎಂದು ಗೊತ್ತಾಯಿತೆ? ಸುಚಿ ದತ್ತಾ ಒಬ್ಬ ಬೇಕರ್​. ಈ ವಿಡಿಯೋ ಅನ್ನು ಈತನಕ ಸುಮಾರು 3 ಮಿಲಿಯನ್​ ಜನರು ನೋಡಿದ್ದಾರೆ. ನೂರಾರು ಜನರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ದಾರೆ. ಅಯ್ಯೋ ಈ ಸಾಬೂನು ನಿಮ್ಮ ದೇಹಕ್ಕೆ ತುಂಬಾ ಹಾನಿಕರ! ಎಂದಿದ್ದಾರೆ. ಕೆಲಸ ಸೆಕೆಂಡುಗಳ ಕಾಲ ನನಗೆ ನಂಬಲು ಆಗಲೇ ಇಲ್ಲ ಎಂದಿದ್ದಾರೆ ಇನ್ನೊಬ್ಬರು. ಅಯ್ಯೋ ನಿಮ್ಮ ಹೊಟ್ಟೆಯಲ್ಲಿ ಸಾಬೂನು ಗುಳ್ಳೆಗಳು ಏಳುತ್ತಿರುತ್ತವೆ ಎಂದಿದ್ದಾರೆ ಮತ್ತೊಬ್ಬರು. ನನಗೂ ಒಂದು ಸಾಬೂನು ಕೊಡಬಹುದೆ? ಎಂದು ಕೇಳಿದ್ದಾರೆ ಕೆಲವರು.

ಇದನ್ನೂ ಓದಿ : Viral: ‘2 ಲಕ್ಷಕ್ಕೆ ಮಾರಾಟಕ್ಕಿರುವ ಅಪ್ಪ’ 8 ವರ್ಷದ ಮಗಳು ಬರೆದ ಸೇಲ್ ನೋಟ್​ ವೈರಲ್

ಯಾಕೋ ನನ್ನ ಹೊಟ್ಟೆಯೆಲ್ಲ ತಳಮಳಿಸುತ್ತಿದೆ, ಕೇಕ್​ ಎಂದು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ ಎಂದಿದ್ದಾರೆ ಒಬ್ಬರು. ನಿಜ, ಈಗಂತೂ ಏನೇನೋ ವಿನ್ಯಾಸದಲ್ಲಿ ಕೇಕ್ ಮಾಡುತ್ತಾರೆ. ಬಾಲ್ಯದಲ್ಲಿ ನಮಗೆ ಆಯ್ಕೆಗಳೇ ಇರಲಿಲ್ಲ. ಕೇಕ್​ ಎಂದರೆ ಹೀಗೇ ಎನ್ನುವುದು ಮನಸ್ಸಿನಲ್ಲಿ ಅಚ್ಚಾಗಿಬಿಟ್ಟಿದೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ