
ತಿರುಮಲ, ಏಪ್ರಿಲ್ 12: ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (tirupati venkeshwara swami temple) ಕ್ಕೆ ವಿವಿಧ ರಾಜ್ಯ ಸೇರಿದಂತೆ, ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಇಲ್ಲಿಗೆ ಬರುವ ಭಕ್ತರು ದೇವಸ್ಥಾನ ವಸ್ತ್ರಸಂಹಿತೆ ಸೇರಿದಂತೆ ಇನ್ನಿತ್ತರ ನಿಯಮ (rules) ಗಳನ್ನು ಪಾಲಿಸಲೇಬೇಕು. ಅದಲ್ಲದೇ, ಭಕ್ತರು ದೀರ್ಘ ಕ್ಯೂ ನಿಂತು, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲೇಬೇಕು. ಇದೀಗ ಮೂವರು ಭಕ್ತರು ಚಪ್ಪಲಿ (sandal) ಧರಿಸಿ ಮುಖ್ಯದ್ವಾರ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಹೌದು, ಈ ಮೂಲಕ ತಿರುಮಲ ದೇವಾಲಯದಲ್ಲಿರುವ ಶ್ರೀವಾರಿ ದೇವಾಲಯ (shreevari temple) ದ ಪ್ರಾವಿತ್ರ್ಯಕ್ಕೆ ಮತ್ತೊಮ್ಮೆ ಧಕ್ಕೆ ಉಂಟಾಗಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
greatandhra ಹೆಸರಿನ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಮೂವರು ಭಕ್ತರು ಚಪ್ಪಲಿ ಧರಿಸಿ ಶ್ರೀವಾರಿ ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅದಲ್ಲದೇ, ಸರತಿ ಸಾಲನ್ನು ದಾಟಿ ಒಂದೇ ಬಾರಿಗೆ ದೇವಾಲಯದ ಮುಖ್ಯ ದ್ವಾರವನ್ನು ತಲುಪಿದ್ದಾರೆ. ಹೌದು, ಸ್ವಲ್ಪ ತಡವಾಗಿದ್ದರೂ ಕೂಡ ಆ ಮೂವರು ಚಪ್ಪಲಿ ಧರಿಸಿಕೊಂಡು ದೇವಸ್ಥಾನ ಪ್ರವೇಶಿಸುತ್ತಿದ್ದರು. ಆದರೆ,ಈ ವೇಳೆ ಅಲ್ಲೇ ಕರ್ತವ್ಯದಲ್ಲಿದ್ದ ಟಿಟಿಡಿ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿರುವುದನ್ನು ಕಾಣಬಹುದು. ಕೊನೆಗೆ ಈ ಮೂವರು ತಮ್ಮ ಚಪ್ಪಲಿಯನ್ನು ಮುಖ್ಯದ್ವಾರದಲ್ಲೇ ಬಿಟ್ಟು ದೇವಾಲಯದೊಳಗೆ ಪ್ರವೇಶಿಸಿದ್ದಾರೆ.
ಇದನ್ನೂ ಓದಿ : ಪ್ರೇಯಸಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಹಾಸ್ಟೆಲ್ಗೆ ಬಂದ ವಿದ್ಯಾರ್ಥಿ, ಮುಂದೇನಾಯ್ತು ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
తిరుమలలో రోజుకు ఒక అపచారం.. వీఐపీలు అయితే పట్టించుకోరా?
పవిత్ర పుణ్యక్షేత్రాన్ని అసలు పట్టించుకోరా?
తాజాగా శ్రీవారి ఆలయం ఎదుట వరకు చెప్పులతో వచ్చిన భక్తులు.
మాఢ వీధుల్లో కూడా చెప్పులకు అనుమతి లేనిది.. ఆలయ ద్వారం ఎదుట వరకూ ఎలా అనుమతిస్తారని మండిపడుతున్న భక్తులు.… pic.twitter.com/tV8f1SzabT
— greatandhra (@greatandhranews) April 12, 2025
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂವತ್ತೇಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ವಿಜಿಲೆನ್ಸ್, ಟಿಟಿಡಿ ಅಧಿಕಾರಿಗಳ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಅದಲ್ಲದೇ, ದಾರಿಯುದ್ದಕ್ಕೂ ಟಿಟಿಡಿ ಜಾಗೃತಿ ಅಧಿಕಾರಿಗಳ ತಪಾಸಣೆಯು ಹೊರತಾಗಿಯೂ ಅವರು ಅಷ್ಟು ದೂರ ಬರಿಗಾಲಿನಲ್ಲಿ ಹೇಗೆ ಬಂದರು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಬಳಕೆದಾರರೊಬ್ಬರು, ‘ಭೂಮಿಯ ಮೇಲೆ ಹುಟ್ಟದೆ ಇರುವ ಈ ವಿಐಪಿಗಳು ಯಾರು?’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ನಿವೃತ್ತ ಹಾಗೂ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ರಾಷ್ಟ್ರಪತಿ, ಪ್ರಧಾನಿ, ವಿಜ್ಞಾನಿಗಳಿಗೆ ಇರುವ ಈ ವಿಐಪಿಗಳಿರುವ ಈ ನಿಯಮವನ್ನು ನಿರ್ಬಂಧಿಸಿ’ ಎಂದಿದ್ದಾರೆ. ಇನ್ನೊಬ್ಬರು, ‘ಈ ವ್ಯಕ್ತಿಗಳ ಉಡುಗೆ ತೊಡುಗೆ ನೋಡಿದರೆ ಅವರು ಗುಜರಾತ್ ನವರಂತೆ ಕಾಣುತ್ತಾರೆ’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Sat, 12 April 25