ವಿದ್ಯುತ್ ಇಲಾಖೆ ನಿರಂತರ ಪವರ್ ಕಟ್ನಿಂದ ಬೇಸತ್ತ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಗೋಟೆ ಗ್ರಾಮದ ರೈತರೊಬ್ಬರು ಧೈರ್ಯದಿಂದ ಸ್ಥಳೀಯ ವಿದ್ಯುತ್ ಕಚೇರಿಗೆ ತೆರಳಿ ತಮ್ಮ ಮನೆಯ ಮಸಾಲೆ ಪದಾರ್ಥಗಳನ್ನು ರುಬ್ಬುವುದರ ಜೊತೆಗೆ ಫೋನ್ ಚಾರ್ಜ್ ಕೂಡ ಮಾಡಿಕೊಳ್ಳುತ್ತಿದ್ದರು. ಇಂಥ ಅನೇಕ ಅಚ್ಚರಿಯ ಸುದ್ದಿಗಳು ನಡೆಯುತ್ತಲೇ ಇರುತ್ತದೆ. ಇದೀಗ ಉತ್ತರಪ್ರದೇಶದಲ್ಲಿ ಪೊಲೀಸರ ಮೇಲಿನ ಕೋಪಕ್ಕೆ ಲೈನ್ ಮ್ಯಾನ್ ಒಬ್ಬರು ಠಾಣೆಯ ವಿದ್ಯುತ್ ಕಟ್ ಮಾಡಿದ ಘಟನೆಯೊಂದು ನಡೆದಿದೆ.
ಇದನ್ನೂ ಓದಿ: Trending: ದಿನನಿತ್ಯ ಪವರ್ ಕಟ್, ಸಿಟ್ಟಿಗೆದ್ದ ವ್ಯಕ್ತಿ ಮಸಾಲಾ ರುಬ್ಬಲು ಹೋಗುತ್ತಿರುವುದು ಎಲ್ಲಿ ಗೊತ್ತಾ?
ಉತ್ತರಪ್ರದೇಶದ ಲೈನ್‌ಮ್ಯಾನ್ ಭಗವಾನ್ ಸ್ವರೂಪ್ ಅವರು ಬೈಕ್ನಲ್ಲಿ ತೆರಳುತ್ತಿದ್ದಾಗ ಚೆಕ್‌ಪಾಯಿಂಟ್‌ನಲ್ಲಿ ಬೈಕ್ ನಿಲ್ಲಿಸಿದ ಪೊಲೀಸರು ನೋಂದಣಿ ದಾಖಲಾತಿಗಳನ್ನು ಕೇಳಿದ್ದಾರೆ. ಆದರೆ ಸ್ವರೂಪ್ ಅವರು ದಾಖಲಾತಿಗಳು ತಮ್ಮ ಬಳಿ ಇಟ್ಟುಕೊಂಡಿರಲಿಲ್ಲ. ಬದಲಾಗಿ ಮನೆಯಲ್ಲಿ ಇಟ್ಟಿದ್ದರು. ಅದರಂತೆ ಬೈಕ್ ತಡೆದ ಪೊಲೀಸ್ ಅಧಿಕಾರಿ ಮೋದಿ ಸಿಂಗ್ ಎಂಬವರ ಬಳಿ ತಮ್ಮ ದಾಖಲಾತಿಗಳನ್ನು ಮನೆಯಿಂದ ತಂದು ತೋರಿಸುವುದಾಗಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದನ್ನು ಕೇಳದ ಪೊಲೀಸ್, 500 ರೂ. ದಂಡ ವಿಧಿಸಿದ್ದಾರೆ. ಅದರಂತೆ ಸ್ವರೂಪ್ ಕಾನೂನುಬದ್ಧವಾಗಿ ದಂಡ ಕಟ್ಟಿ ತೆರಳಿದ್ದಾರೆ ಎಂದು ಐಎನ್ಎಸ್ ವರದಿ ಮಾಡಿದೆ.
ಪೊಲೀಸರ ಈ ನಡೆಯಿಂದ ಹತಾಶರಾದ ಭಗವಾನ್ ಸ್ವರೂಪ್ ಅವರು, ತನ್ನ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಠಾಣೆಗೆ ಆಗುತ್ತಿದ್ದ ವಿದ್ಯುತ್ ಪೂರೈಕೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೀಟರ್ ಇಲ್ಲದೆ ವಿದ್ಯುತ್ ಪಡೆಯುತ್ತಿರುವುದು ಪತ್ತೆಯಾಗಿದೆ. ಅದರಂತೆ ಲೈನ್‌ಮ್ಯಾನ್ ಠಾಣೆಯ ಪವರ್ ಕಟ್ ಮಾಡಿದ್ದಾರೆ. ಇದನ್ನೂ ಓದಿ: Viral Video: ರಸ್ತೆ ದಾಟುವ ಹುಲಿಗಳ ಹಿಂಡಿನ ಅಪರೂಪದ ದೃಶ್ಯಾವಳಿ ಸೆರೆ ಹಿಡಿದ ಪ್ರವಾಸಿಗರು
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಭಗವಾನ್ ಸ್ವರೂಪ್, ಪೊಲೀಸ್ ಠಾಣೆಯಲ್ಲಿ ವಿದ್ಯುತ್ ಮೀಟರ್ ಇಲ್ಲದೇ ವಿದ್ಯುತ್ ಬಳಸಲಾಗುತ್ತಿತ್ತು ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ ಅಕ್ರಮವಾಗಿ ವಿದ್ಯುತ್ ಪಡೆಯಲಾಗುತ್ತಿತ್ತು ಎಂದು ಹೇಳಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ