ನಗದಿದ್ದರೆ ಜೈಲು, ಸ್ನಾನ ಮಾಡದಿದ್ದರೆ ಅಪರಾಧ! ಇವು ಈ ದೇಶದ ವಿಚಿತ್ರ ಕಾನೂನುಗಳು

ಕೆಲವೊಂದು ದೇಶಗಳಲ್ಲಿ ಸ್ನಾನ ಮಾಡದಿದ್ದರೆ, ರಾತ್ರಿ ಶಬ್ದ ಮಾಡಿದರೆ ಶಿಕ್ಷಾರ್ಹ ಮತ್ತು ದಂಡಾರ್ಹ ಅಪರಾಧವಾಗಿದೆ. ಇಂಥ ಅನೇಕ ವಿಚಿತ್ರ ಕಾನೂನುಗಳು ವಿವಿಧ ದೇಶಗಳಲ್ಲಿ ಜಾರಿಯಲ್ಲಿವೆ.

ನಗದಿದ್ದರೆ ಜೈಲು, ಸ್ನಾನ ಮಾಡದಿದ್ದರೆ ಅಪರಾಧ! ಇವು ಈ ದೇಶದ ವಿಚಿತ್ರ ಕಾನೂನುಗಳು
ಸಾಂಕೇತಿಕ ಚಿತ್ರ
TV9kannada Web Team

| Edited By: Rakesh Nayak

Jun 13, 2022 | 5:56 PM

ಜಗತ್ತಿನಲ್ಲಿ ವಿವಿಧ ಧರ್ಮಗಳು, ಜಾತಿಗಳು ಇದ್ದಂತೆ ಬೇರೆಬೇರೆ ರೀತಿಯ ಕಾನೂನುಗಳು ಕೂಡ ಇವೆ. ಆದಾಗ್ಯೂ ಕೆಲವೊಂದು ದೇಶಗಳಲ್ಲಿ ವಿಚಿತ್ರ ಕಾನೂನುಗಳನ್ನು ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲ ಅಂಥ ಕಾನೂನುಗಳನ್ನು ಉಲ್ಲಂಘಿಸಿದವರಿಗೆ ಸರ್ಕಾರಗಳು ಕಠಿಣ ಶಿಕ್ಷೆ ವಿಧಿಸುತ್ತದೆ. ಅಂಥ ವಿಚಿತ್ರ ಕಾನೂನುಗಳ ಬಗ್ಗೆ ನೀವು ತಿಳಿದರೆ ನಗುವುದಂತು ಗ್ಯಾರಂಟಿ. ಹಾಗಾದರೆ ಯಾವ ದೇಶದಲ್ಲಿ ಎಂಥ ವಿಚಿತ್ರ ಕಾನೂನುಗಳಿವೆ ಎಂಬುದನ್ನು ಹೇಳುತ್ತೇವೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಇದನ್ನೂ ಓದಿ: Viral: ಒಂದು ಕಾಂಡೋಮ್ ಪ್ಯಾಕ್ ಬೆಲೆ 60,000 ರೂಪಾಯಿ! ಎಲ್ಲಿ ಗೊತ್ತಾ?

  1. ಹಾಂಗ್ ಕಾಂಗ್‌ನಲ್ಲಿ ಪತಿ ತನ್ನ ಹೆಂಡತಿಗೆ ಮೋಸ ಮಾಡಿದರೆ ಪತಿಯನ್ನು ಹೆಂಡತಿ ಕೊಂದರೆ ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ. ಆದರೆ ಅವಳು ತನ್ನ ಕೈಯಿಂದಲೇ ತನ್ನ ಗಂಡನನ್ನು ಕೊಲ್ಲಲು ಬಯಸದಿದ್ದರೆ ಶಿಕ್ಷೆಯನ್ನು ಬೇರೆ ರೀತಿಯಲ್ಲಿ ಕಾರ್ಯಗತಗೊಳಿಸುವ ಆಯ್ಕೆ ಇದೆ.
  2. ಸ್ವಿಟ್ಜರ್ಲೆಂಡ್‌ನಲ್ಲಿ ರಾತ್ರಿ 10 ಗಂಟೆಯ ನಂತರ ಸ್ನಾನಗೃಹದಲ್ಲಿ ಫ್ಲಶ್ ಮಾಡಿದರೆ ಅಥವಾ ಬಾತ್ರೂಮ್​ನಿಂದ ಯಾವುದೇ ಶಬ್ದ ಬಂದರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ.
  3. ಇಂಗ್ಲೆಂಡ್​ನ ಮಸಾಚುಸೆಟ್ಸ್​ನಲ್ಲಿ ಸ್ನಾನ ಮಾಡದೆ ಮಲಗುವುದು ಕಾನೂನು ಬಾಹಿರವಾಗಿದೆ. ಸ್ನಾನ ಮಾಡದೆ ಮಲಗಿದರೆ ಜೈಲು ಶಿಕ್ಷೆಗೆ ಒಳಗಾಗುತ್ತಾನೆ.
  4. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮತ್ತೊಂದು ವಿಚಿತ್ರ ಕಾನೂನು ಜಾರಿಯಲ್ಲಿದೆ. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕಾರನ್ನು ಒಳ ಉಡುಪುಗಳಿಂದ ಸ್ವಚ್ಛಗೊಳಿಸಿದರೆ ದಂಡವನ್ನು ವಿಧಿಸಲಾಗುತ್ತದೆ.
  5. ಇಟಲಿಯ ಮಿಲಾನ್‌ನಲ್ಲಿ ಮುಕ್ತವಾಗಿ ತಿರುಗಾಡುವ ಪ್ರತಿಯೊಬ್ಬ ನಾಗರಿಕನು ಯಾವಾಗಲೂ ನಗುತ್ತಿರುವಂತೆ ಕಾಣಬೇಕು. ಅವರ ಮುಖದಲ್ಲಿ ನಗು ಕಾಣದಿದ್ದರೆ ತಕ್ಷಣವೇ ಅವರನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತದೆ ಮತ್ತು ನೂರು ಡಾಲರ್​ವರೆಗೆ ದಂಡ ವಿಧಿಸಲಾಗುತ್ತದೆ. ಇದರಿಂದ ದಿನಕ್ಕೆ ನೂರಾರು ಮಂದಿ ದಂಡ ಕಟ್ಟುತ್ತಿದ್ದಾರೆ.
  6. ಸಿಂಗಾಪುರದಲ್ಲಿ ಚ್ಯೂಯಿಂಗ್ ಗಮ್ ಮಾರಾಟ ಮತ್ತು ತಯಾರಿಕೆಯು ಅಪರಾಧವಾಗಿದೆ. ಆದರೆ 2004 ರಲ್ಲಿ ವೈದ್ಯರ ಸಲಹೆಯ ಮೇರೆಗೆ ಸರ್ಕಾರವು ಬಾಯಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಕಾನೂನಿಂದ ವಿನಾಯಿತಿ ನೀಡಲಾಗಿದೆ.
  7. ಜರ್ಮನಿಯ ಆಟೋಬಾನ್ ರಸ್ತೆಗಳಲ್ಲಿ ವಾಹನವನ್ನು ಎಷ್ಟು ವೇಗವಾಗಿ ಓಡಿಸಬಹುದು. ಆದರೆ ಕಾರಿನಲ್ಲಿ ಸಾಕಷ್ಟು ತೈಲ ಇರುವುದು ಅಷ್ಟೇ ಅವಶ್ಯ. ಒಂದೊಮ್ಮೆ ಕಾರು ರಸ್ತೆಯಲ್ಲಿ ನಿಂತರೆ ದಂಡವನ್ನು ಪಾವತಿಸಬೇಕಾಗುತ್ತದೆ.
  8. ಇಟಲಿಯ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ಅಪರಾಧ ಎಂದು ಪರಿಗಣಿಸಲಾಗಿದೆ. ಯಾರಾದರೂ ಪಾರಿವಾಳಗಳಿಗೆ ಆಹಾರ ಹಾಕುವುದು ಕಂಡುಬಂದರೆ ಅವರನ್ನು ಕೂಡಲೇ ಬಂಧಿಸಲಾಗುತ್ತದೆ.

ಇದನ್ನೂ ಓದಿ: Viral Video: ರಸ್ತೆ ದಾಟುವ ಹುಲಿಗಳ ಹಿಂಡಿನ ಅಪರೂಪದ ದೃಶ್ಯಾವಳಿ ಸೆರೆ ಹಿಡಿದ ಪ್ರವಾಸಿಗರು

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada