ಗಾಯಗೊಂಡ ಶ್ವಾನಕ್ಕೆ ಚಿಕಿತ್ಸೆ ಕೊಡಿಸಲು ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಕರೆದ್ಯೊಯ್ದ ಪುಟಾಣಿಗಳು, ವಿಡಿಯೋ ವೈರಲ್

ಇಂದಿನ ಕಾಲದಲ್ಲಿ ಮಾನವೀಯತೆ ಎನ್ನುವ ಪದಕ್ಕೆ ಬೆಲೆಯೇ ಇಲ್ಲ. ಎಲ್ಲರೂ ಕೂಡ ಸ್ವಾರ್ಥಿಗಳಾಗಿದ್ದು ಬೇರೆಯವರ ಕಷ್ಟ, ನೋವಿಗೆ ಸ್ಪಂದಿಸುವುದನ್ನು ಕಾಣುವುದೇ ಕಡಿಮೆ ಎನ್ನಬಹುದು. ಆದರೆ ಇದೀಗ ಇಬ್ಬರೂ ಪುಟಾಣಿ ಗಳು ಕೂಡ ಗಾಯಗೊಂಡಿರುವ ಶ್ವಾನಕ್ಕೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದು, ಕೈಗಾಡಿಯಲ್ಲಿ ಶ್ವಾನವನ್ನು ಕೂರಿಸಿಕೊಂಡು ತಳ್ಳಿಕೊಂಡು ಹೋಗುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರ ಹೃದಯ ಗೆದ್ದುಕೊಂಡಿದೆ.

ಗಾಯಗೊಂಡ ಶ್ವಾನಕ್ಕೆ ಚಿಕಿತ್ಸೆ ಕೊಡಿಸಲು ತಳ್ಳುಗಾಡಿಯಲ್ಲಿ ಆಸ್ಪತ್ರೆಗೆ ಕರೆದ್ಯೊಯ್ದ ಪುಟಾಣಿಗಳು, ವಿಡಿಯೋ ವೈರಲ್
ವೈರಲ್​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: May 19, 2025 | 11:09 AM

ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಮಾನವೀಯತೆ (humanity) ಎಂಬುದು ಮರೆಯಾಗುತ್ತಿದೆ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡದೇ, ಮೃಗೀಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅದರಲ್ಲಿಯೂ ಮೂಕ ಪ್ರಾಣಿಗಳ ಜೊತೆಗೆ ಮೃಗೀಯ ವರ್ತನೆ ತೋರುವುದನ್ನು ನೀವು ನೋಡಿರಬಹುದು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತದ್ವಿರುದ್ಧ ದೃಶ್ಯವನ್ನು ನೋಡಬಹುದು. ಇಬ್ಬರೂ ಬಾಲಕರು ಗಾಯಗೊಂಡ ನಾಯಿ (dog) ಯನ್ನು ಕೈಗಾಡಿಯಲ್ಲಿ ತಳ್ಳಿ ಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

janwar.nhi.jaan ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ದಾರಿಹೋಕರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋದಲ್ಲಿ ತಾತ್ಕಾಲಿಕ ಕೈಗಾಡಿಯಲ್ಲಿ ಶ್ವಾನವನ್ನು ಕೂರಿಸಿರುವುದನ್ನು ನೋಡಬಹುದು. ಗಾಯಗೊಂಡಿರುವ ಈ ಶ್ವಾನಕ್ಕೆ ಚಿಕಿತ್ಸೆಕೊಡಿಸಲೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದನ್ನು ನೀವಿಲ್ಲಿ ನೋಡಬಹುದು. ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ಈ ಬಗ್ಗೆ ಹುಡುಗರಲ್ಲಿ ವಿಚಾರಿಸಿದ್ದಾರೆ. ಈ ಬಾಲಕರ ಬಳಿ ಏನಾಯಿತು ಎಂದು ಕೇಳಿದ್ದು, ಒಬ್ಬನು, ನಾವು ನಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ. ಅದು ಗಾಯಗೊಂಡಿದೆ ಎಂದು ಉತ್ತರಿಸಿದ್ದಾನೆ. ಪುಟಾಣಿ ಮಕ್ಕಳ ಈ ಕೆಲಸಕ್ಕೆ ವ್ಯಕ್ತಿಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
ಆನೆ ನೋಡೋಕೆ ಮಾತ್ರ ದೊಡ್ಡದು, ಇದ್ರ ಕಿವಿ ಎಷ್ಟು ಚಿಕ್ಕದಿದೆ ನೋಡಿ
ಈ ಕಂಪನಿಯಲ್ಲಿ ಉಚಿತ ಶೌಚಾಲಯ, ಉಚಿತ ಲಿಫ್ಟ್, ನೈಟ್ ಸ್ನಾಕ್ಸ್
ಖರ್ಚು ಮಾಡಿದ ದುಡ್ಡನ್ನೆಲ್ಲಾ ವಾಪಸ್ಸು ಕೊಡು ಎಂದ ಮಾಜಿ ಪ್ರಿಯಕರ
ಪ್ಲೀಸ್ ನಾನು ನೀನು ಅಣ್ಣ ತಂಗಿಯಂತೆ ಇರೋಣ, ಮದುವೆ ಬೇಡ ಶಾಕ್ ಆದ ವರ

ಇದನ್ನೂ ಓದಿ : ಅಬ್ಬಬ್ಬಾ! ಆನೆ ನೋಡೋಕೆ ಮಾತ್ರ ದೊಡ್ಡದು, ಇದ್ರ ಕಿವಿ ಎಷ್ಟು ಚಿಕ್ಕದಿದೆ ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಒಂದು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಮಕ್ಕಳ ಕೆಲಸಕ್ಕೆ ಮೆಚ್ಚಿಕೊಂಡಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಬಳಕೆದಾರರು, ‘ಪ್ರೀತಿ ಅಂದರೆ ಹೀಗೆಯೇ, ಮೂಕ ಪ್ರಾಣಿಗಳ ನೋವಿಗೆ ಸ್ಪಂದಿಸುವ ರೀತಿ ಇದು, ಈ ಮಕ್ಕಳ ಕೆಲಸವೇ ನಮಗೆಲ್ಲರಿಗೂ ಸ್ಫೂರ್ತಿ ‘ ಎಂದಿದ್ದಾರೆ. ಇನ್ನೊಬ್ಬರು, ಶಿಕ್ಷಣ ಪಡೆದು ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಮಾನವೀಯತೆಯಿಲ್ಲದ ವ್ಯಕ್ತಿಗಳು ಈ ಮಕ್ಕಳನ್ನು ನೋಡಿ ಕಲಿಯಬೇಕು ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ನಮ್ಮ ಮುದ್ದಾದ ಪುಟಾಣಿ ಹೀರೋಗಳಿವರು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ