
ರಷ್ಯಾ ಉಕ್ರೇನ್ ರಣಭೀಕರ ಯುದ್ಧ (Russia Ukraine War) 14ನೇ ದಿನಕ್ಕೆ ಕಾಲಿಟ್ಟಿದೆ. ಜಗತ್ತಿನ ವಿವಿಧ ದೇಶಗಳು ರಷ್ಯಾವನ್ನು ವಿರೋಧಿಸಿದರೂ ಉಕ್ರೇನ್ ಮೇಲಿನ ಯುದ್ಧವನ್ನು ಮುಂದುವರೆಸಿದೆ. ಈ ನಡುವೆ ಉಕ್ರೇನ್ ನೆಲದ ಸಾಕಷ್ಟು ವಿಡಿಯೋ ಫೋಟೋಗಳು ವೈರಲ್ ಆಗಿವೆ. ಒಂದಷ್ಟು ಮನಕಲಕುವ ದೃಶ್ಯಗಳು ಉಕ್ರೇನ್ನಲ್ಲಿ ಕಂಡುಬರುತ್ತಿವೆ. ಈ ನಡುವೆ ಉಕ್ರೇನ್ ಸೈನಿಕನೊಬ್ಬ(Ukraine Soldier) ಮಿಲಿಟರಿ ಚೆಕ್ ಪಾಯಿಂಟ್ನಲ್ಲಿ ಮಂಡಿಯೂರಿ ಗೆಳತಿಗೆ ಪ್ರಪೋಸ್ (Propose) ಮಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರ ಸಾವು, ನೋವು, ಭಯದಲ್ಲಿ ಬದುಕುತ್ತಿರುವುದರ ನಡುವೆಯೂ ಈ ರೀತಿ ಪ್ರೇಮ ನಿವೇದನೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಉಕ್ರೇನ್ ನಾಗರಿಕರನ್ನು ಮಿಲಿಟರಿ ಚೆಕ್ ಪಾಯಿಂಟ್ನಲ್ಲಿ ತಪಾಸಣೆ ಮಾಡಲು ನಿಲ್ಲಿಸಲಾಗಿತ್ತು. ಈ ವೇಳೆ ಸೈನಿಕರ ಗುಂಪು ಅವರನ್ನು ತಪಾಸಣೆ ಮಾಡುತ್ತಿತ್ತು. ಗಾಡಿಯೆಡೆಗೆ ಮುಖ ಮಾಡಿ ನಿಂತಿದ್ದ ಯುವತಿಯನ್ನು ತಿರುಗುಸಿ ಸೈನಿಕನೊಬ್ಬ ಮಂಡಿಯೂರಿ ಪ್ರಪೋಸ್ ಮಾಡಿದ್ದಾನೆ. ಇದನ್ನು ಕಂಡು ಆಕೆ ಅಚ್ಚರಿಗೊಂಡಿದ್ದಾಳೆ. ಪುಟ್ಟ ಹೂವನ್ನು ನೀಡಿ ಸೈನಿಕ ಪ್ರೇಮ ನಿವೇದನೆ ಮಾಡಿದ್ದಾನೆ.
ಅಚ್ಚರಿಯಿಂದ ಖುಷಿಗೊಂಡ ಯುವತಿ ಸೈನಿಕನನ್ನು ಹಗ್ ಮಾಡಿದ್ದಾಳೆ ಇದರ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಭೀಕರ ದೃಶ್ಯಗಳ ನಡುವೆ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:
ವ್ಲಾಡಿಮಿರ್ ಪುಟಿನ್ ವಿರುದ್ಧ ವಿನೂತನ ಪ್ರತಿಭಟನೆ ಮಾಡುತ್ತಿರುವ ಬ್ರಿಟನ್ ಪಬ್; ಹೇಗೆ ಅಂತೀರಾ? ಇಲ್ಲಿದೆ ನೋಡಿ
Published On - 9:38 am, Wed, 9 March 22